ಸುಜಾತಾ ಭಟ್ ಹೇಳಿದ ಕಟ್ಟುಕತೆಯ ಮೂಲಕ ಧರ್ಮಸ್ಥಳದ ವಿರುದ್ಧ ವ್ಯಾಪಕ ಅಪಪ್ರಚಾರ
ಕಳೆದ ಕೆಲವು ತಿಂಗಳುಗಳಿಂದ ಸುಜಾತಾ ಭಟ್ ಅವರು ತಮ್ಮ ಮಗಳು ಅನನ್ಯ ಭಟ್ ಅವರು 2003ರಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಾಣೆಯಾದರು ಹಾಗೂ ಈ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಆರೋಪಿಸಿದ್ದರು. ಆದಾಗ್ಯೂ ಈ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳು, ಸಾಕ್ಷಿಗಳು ಮತ್ತು ತನಿಖಾ ಸಂಸ್ಥೆಗಳು ನಡೆಸಿರುವ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸುಜಾತಾ ಭಟ್ ಅವರ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ಗಂಭೀರವಾದ ಅನುಮಾನಗಳು ಸೃಷ್ಟಿಯಾಗಿವೆ.
ಅನನ್ಯಾ ಭಟ್ ಬಗ್ಗೆ ಯಾವುದೇ ದಾಖಲೆಗಳಿಲ್ಲ: ಸುಜಾತಾ ಭಟ್ ಅವರ ಮಗಳು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು ಎಂದು ಅವರು ಹೇಳಿದ್ದಾರೆ. ಆದರೆ ಆ ಹೆಸರಿನ ಯಾವುದೇ ವಿದ್ಯಾರ್ಥಿ ಕಾಲೇಜಿನಲ್ಲಿ ದಾಖಲಾಗಿಲ್ಲ ಎನ್ನುವ ವಿಷಯವನ್ನು ಕಾಲೇಜು ಆಡಳಿತ ಮಂಡಳಿ ದೃಢಪಡಿಸಿದೆ. ಸುಜಾತಾ ಅವರು ಹೇಳಿರುವುದರಲ್ಲಿ ಸತ್ಯಾಂಶ ಇದೆ ಎನ್ನುವುದಕ್ಕೆ ಯಾವುದೇ ಶಾಲಾ ದಾಖಲೆಗಳು, ನಿಖರ ಪುರಾವೆಗಳು ಅಥವಾ ಶಾಲಾ - ಕಾಲೇಜುಗಳ ಅಧಿಕೃತ ಪ್ರಮಾಣಪತ್ರಗಳೇ ಇಲ್ಲ. ಕುಟುಂಬದ ಸದಸ್ಯರು ಮತ್ತು ಹಲವು ವರ್ಷಗಳಿಂದ ಅವರೊಂದಿಗೆ ಪರಿಚಯ ಹೊಂದಿರುವವರು ಸಹ ಸುಜಾತಾ ಅವರಿಗೆ ಮಗಳು ಇದ್ದಾಳೆ ಎನ್ನುವ ವಿಷಯ ನಮಗೆ ತಿಳಿದೇ ಇರಲಿಲ್ಲ ಎನ್ನುತ್ತಾರೆ.

ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ಮಾಜಿ ಸ್ವಚ್ಛತಾ ಸಿಬ್ಬಂದಿ ಭೀಮಾ ಎನ್ನುವ ವ್ಯಕ್ತಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವಗಳನ್ನು ಹೂಳಿರುವುದಾಗಿ ಹೇಳಿದಾಗ ಮತ್ತು ತಲೆಬುರುಡೆಯೊಂದನ್ನು ಸಾಕ್ಷಿಯಾಗಿ ತೋರಿಸಿದಾಗ ಈ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಆದರೆ, ವಿಶೇಷ ತನಿಖಾ ತಂಡ (SIT)ವು, ಅವಶೇಷಗಳು ಪುರುಷರದ್ದು ಎಂದು ನಿರ್ಧರಿಸಿ, ಆ ಹೇಳಿಕೆಯನ್ನು ಸುಳ್ಳು ಮಾಡಿತು. ನಂತರ ಭೀಮಾ ತನ್ನ ಸಾಕ್ಷ್ಯದ ಕೆಲವು ನಿರ್ದಿಷ್ಟ ವಿಷಯಗಳನ್ನು ನಕಲಿ ಮಾಡಿರುವುದಾಗಿ ಒಪ್ಪಿಕೊಂಡರು ಎನ್ನಲಾಗಿದೆ.
ಸುಜಾತಾ ಅವರ ಮಾತಿನಲ್ಲಿನ ವಿರೋಧಾಭಾಸಗಳು
ಸುಜಾತಾ ಅವರನ್ನು ಅಪಹರಿಸಿ, ಕುರ್ಚಿಗೆ ಕಟ್ಟಿಹಾಕಲಾಗಿತ್ತು. ಇದಾದ ನಂತರ 3 ತಿಂಗಳ ಕಾಲ ಆಸ್ಪತ್ರೆಯೊಂದರಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದಾಗಿ ಸುಜಾತಾ ಆರೋಪಿಸಿದ್ದಾರೆ. ಆದಾಗ್ಯೂ ವಿಲ್ಸನ್ ಗಾರ್ಡನ್‌ನ ಅಗಡಿ ಆಸ್ಪತ್ರೆಯ ದಾಖಲೆಗಳನ್ನು ನೋಡಿದರೆ, ಇದು ಸತ್ಯಕ್ಕೆ ದೂರವಾಗಿದೆ. ಅವರು ಹೇಳಿದ್ದ ನಿರ್ದಿಷ್ಟ ಅವಧಿಯಲ್ಲಿ ಅವರ ಹೆಸರಿನಲ್ಲಿ ಯಾವುದೇ ರೋಗಿಗಳಿಗೆ ಅಲ್ಲಿ ಚಿಕಿತ್ಸೆಯನ್ನೇ ನೀಡಿಲ್ಲ. ಇನ್ನು ಅವರು ಕೋಲ್ಕತ್ತಾದ ಕೇಂದ್ರೀಯ ತನಿಖಾ ದಳ (CBI)ನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಅವರ ಉದ್ಯೋಗ ಮಾಡಿರುವುದಕ್ಕೆ ಯಾವುದೇ ಸೂಕ್ತ ದಾಖಲೆಗಳು ಅಸ್ತಿತ್ವದಲ್ಲಿಲ್ಲ ಎಂದು ಸಂಸ್ಥೆ ದೃಢಪಡಿಸಿದೆ.

1999 ಮತ್ತು 2007ರ ನಡುವೆ, ಸುಜಾತಾ ಅವರು ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಪ್ರಭಾಕರ್ ಬಾಳಿಗಾ ಅವರೊಂದಿಗೆ ವಾಸಿಸುತ್ತಿದ್ದಾರೆ ಎನ್ನುವ ವಿಷಯ ಇದೀಗ ಬಹಿರಂಗವಾಗಿದೆ. ಸ್ಥಳೀಯ ನಿಯತಕಾಲಿಕೆಗಳಲ್ಲಿ ಈ ಜೋಡಿಯನ್ನು "ಮಕ್ಕಳಿಲ್ಲದ ಪ್ರಾಣಿ ಪ್ರಿಯರು" ಎನ್ನುವ ಶೀರ್ಷಿಕೆಯೊಂದಿಗೆ ಚಿತ್ರ ಸಹಿತ ವರದಿ ಮಾಡಲಾಗಿದೆ. ಇದು ವೈದ್ಯಕೀಯ ವಿದ್ಯಾರ್ಥಿನಿ ಮಗಳಿದ್ದಳು ಎಂದು ಅವರು ಈಗ ಹೇಳುತ್ತಿರುವ ಮಾತಿಗೂ ಅಂದು ವರದಿಯಾಗಿರುವ ವಿಷಯಕ್ಕೂ ತದ್ವಿರುದ್ಧವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದಿನ ಭಿನ್ನಾಭಿಪ್ರಾಯಗಳು ಮತ್ತು ಉದ್ದೇಶಗಳು
ಇತ್ತೀಚಿನ ವರ್ಷಗಳಲ್ಲಿ ಸುಜಾತಾ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬವು ತಮ್ಮನ್ನು ಅವಮಾನಿಸಿತ್ತು ಎಂದು ಆರೋಪಿಸಿದ್ದರು. ಏತನ್ಮಧ್ಯೆ ಈ ಘಟನೆಗಳು ಎಲ್ಲಿ ಮತ್ತು ಹೇಗೆ ನಡೆದವು ಎಂಬುದರ ಕುರಿತು ಅವರ ಹೇಳಿಕೆಗಳು ಒಂದಕ್ಕೊಂದು ಭಿನ್ನವಾಗಿವೆ. ಈ ಆರೋಪಗಳು ನ್ಯಾಯ ಮತ್ತು ಸತ್ಯಾಂಶದ ಬಗ್ಗೆ ಕಡಿಮೆ ಮತ್ತು ವೈಯಕ್ತಿಕ ದ್ವೇಷ, ಸಾರ್ವಜನಿಕ ಸಹಾನುಭೂತಿ ಗಳಿಸುವುದಕ್ಕೆ ಪ್ರಯತ್ನಿಸಿರುವುದು ಕಂಡು ಬಂದಿದೆ. "ಕಾಣೆಯಾದ ಮಗಳು" ಎನ್ನುವ ನಿರೂಪಣೆಯು ಭಾವನಾತ್ಮಕ ಆಧಾರವಾಗಿ ಕೆಲಸ ಮಾಡುತ್ತದೆ ಎಂದು ಹಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನಕಲಿ ನಿರೂಪಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹ
ಇನ್ನು ಧರ್ಮಸ್ಥಳದ ವಿಚಾರವಾಗಿ ಅಪಪ್ರಚಾರಗಳು ಹೆಚ್ಚಾಗುತ್ತಿದ್ದಂತೆಯೇ, ಭಕ್ತರು ಮತ್ತು ಸ್ಥಳೀಯರು ಧರ್ಮಸ್ಥಳದ ವಿರುದ್ಧ ಉದ್ದೇಶಪೂರ್ವಕ ತಪ್ಪು ಮಾಹಿತಿ ಹರಡುತ್ತಿರುವವರು ಹಾಗೂ ಷಡ್ಯಂತ್ರ ಮಾಡುತ್ತಿರುವವರ ಮೇಲೆ ಕರ್ನಾಟಕ ಪೊಲೀಸರು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಎಸ್‌ಐಟಿಯ ಸಂಶೋಧನೆಗಳು - ಪುರುಷ ಅವಶೇಷಗಳು, ನಕಲಿ ಉದ್ಯೋಗ ಉಲ್ಲೇಖ ಮತ್ತು ಕಾಣೆಯಾದ ಪ್ರಮಾಣಿಕೃತ ದಾಖಲೆಗಳು - ಹೊಣೆಗಾರಿಕೆಯ ವಿಷಯವು ಈ ಒತ್ತಾಯಕ್ಕೆ ಪುಷ್ಟಿ ನೀಡಿದೆ.

ನ್ಯಾಯಕ್ಕಾಗಿ ತಾಯಿಯ ಹೋರಾಟದ ದುರಂತ ಕಥೆಯಾಗಿ ಒಮ್ಮೆ ರೂಪಿಸಲ್ಪಟ್ಟದ್ದು ತನಿಖೆ ಆಗುತ್ತಿದೆ. ಇದು ಕಲ್ಪಿತ ಕಥೆಯನ್ನು ಹೋಲುತ್ತದೆ. ಅನನ್ಯ ಭಟ್ ಎನ್ನುವವರು ಇದ್ದರೂ ಎನ್ನುವುದಕ್ಕೆ ಯಾವುದೇ ನಿಖರವಾದ ಪುರಾವೆಗಳಿಲ್ಲ. ಯಾವುದೇ ಅಧಿಕೃತ ದಾಖಲೆಗಳಿಲ್ಲ ಹಾಗೂ ಸುಳ್ಳು ಹೇಳಿಕೆಗಳು ಪದೇ ಪದೇ ಬಹಿರಂಗವಾಗಿದೆ. ಪ್ರಕರಣವು ವಾಸ್ತವಕ್ಕಿಂತ ಹೆಚ್ಚಾಗಿ ಕಟ್ಟುಕಥೆಯತ್ತ ಬೆರಳು ತೋರಿಸುತ್ತದೆ.












Click it and Unblock the Notifications