KSRTC Tour Package: ದಸರಾ 2025 ಪ್ರಯುಕ್ತ ಪ್ರವಾಸ ಪ್ಯಾಕೇಜ್ ಘೋಷಣೆ! ಮಾರ್ಗಗಳು, ದರ-ವಿವರ
ಮಂಗಳೂರು, ಸೆಪ್ಟಂಬರ್ 22: ಈ ವರ್ಷದ ದಸರಾ ಹಬ್ಬದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗವು ಪ್ರವಾಸಿಗರಿಗಾಗಿ ಮೂರು ವಿಭಿನ್ನ ಮತ್ತು ಆಕರ್ಷಕ ಪ್ಯಾಕೇಜ್‌ಗಳನ್ನು ಪ್ರಕಟಿಸಿದೆ. ಈ ಪ್ಯಾಕೇಜ್‌ಗಳು ಸೆಪ್ಟೆಂಬರ್ 22, 2025 ರಿಂದ ಅಕ್ಟೋಬರ್ 02, 2025 ರವರೆಗೆ ಲಭ್ಯವಿದೆ. ಭಕ್ತರು ಮತ್ತು ಪ್ರವಾಸಿಗರಿಗೆ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ತಾಣಗಳನ್ನು ಸುಲಭವಾಗಿ ತಲುಪಲು ಇದೊಂದು ಉತ್ತಮ ಅವಕಾಶವಾಗಿದೆ.
KSRTC ಕೊಲ್ಲೂರು ಟೂರ್ ಪ್ಯಾಕೇಜ್
ಕೊಲ್ಲೂರು ಟೂರ್ ಪ್ಯಾಕೇಜ್ ಈ ಒಂದು ದಿನದ ಪ್ರವಾಸವು ಇದಾಗಿದ್ದು, ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಬಸ್ ಸಂಚಾರ ಆರಂಭವಾಗುತ್ತದೆ. ಇದು ಉಚ್ಚಿಲ ಮಹಾಲಕ್ಷ್ಮೀ, ಕಾಪು ಶ್ರೀ ಮರಿಯಮ್ಮ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಮತ್ತು ಮರಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯಗಳ ದರ್ಶನವನ್ನು ಒಳಗೊಂಡಿದೆ. ರಾತ್ರಿ 8 ಗಂಟೆಗೆ ಬಸ್ಸು ಮಂಗಳೂರಿಗೆ ಮರಳುತ್ತದೆ. ಪ್ರಯಾಣ ದರ ವಯಸ್ಕರಿಗೆ ₹600 ಮತ್ತು 6 ರಿಂದ 12 ವರ್ಷದ ಮಕ್ಕಳಿಗೆ ₹500 ಆಗಿದೆ.

KSRTC ಮಡಿಕೇರಿ ಟೂರ್ ಪ್ಯಾಕೇಜ್
ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಇಚ್ಛಿಸುವವರಿಗಾಗಿ ಈ ಪ್ರವಾಸವನ್ನು ಆಯೋಜಿಸಲಾಗಿದೆ. ಇದು ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಪ್ರಯಾಣ ಪ್ರಾರಂಭಿಸುತ್ತದೆ. ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್, ನಿಸರ್ಗಧಾಮ ಮತ್ತು ಗೋಲ್ಡನ್ ಟೆಂಪಲ್ (ಬೈಲಕುಪ್ಪೆ) ತಾಣಗಳಿಗೆ ಮಾರ್ಗವಾಗಿ ಸಾಗುತ್ತದೆ. ಬಸ್ ರಾತ್ರಿ 9:30 ಕ್ಕೆ ಮಂಗಳೂರಿಗೆ ತಲುಪುತ್ತದೆ. ಈ ಪ್ಯಾಕೇಜ್‌ಗೆ ವಯಸ್ಕರಿಗೆ ₹600 ಹಾಗೂ ಮಕ್ಕಳಿಗೆ ₹500 ಟಿಕೆಟ್ ದರ ನಿಗದಿಪಡಿಸಲಾಗಿದೆ.
KSRTC ಸಿಗಂದೂರು ಟೂರ್ ಪ್ಯಾಕೇಜ್
ಈ ಹೊಸ ಪ್ರವಾಸ ಪ್ಯಾಕೇಜ್ ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು, ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳಿಗೆ ಭೇಟಿ ನೀಡುತ್ತದೆ. ರಾತ್ರಿ 7:30 ಕ್ಕೆ ಮರಳಿ ಮಂಗಳೂರಿಗೆ ನಿಲ್ದಾಣಕ್ಕೆ ಬರುತ್ತದೆ. ಈ ಪ್ರವಾಸದ ದರ ವಯಸ್ಕರಿಗೆ ₹700 ಮತ್ತು ಮಕ್ಕಳಿಗೆ ₹600 ನಿಗದಿಪಡಿಸಲಾಗಿದೆ.
KSRTC: ನವದುರ್ಗ ದರ್ಶನ ಪ್ಯಾಕೇಜ್
ಮಂಗಳೂರು ಸುತ್ತಮುತ್ತಲಿನ ಒಂಬತ್ತು ದೇವಾಲಯಗಳಿಗೆ ಭೇಟಿ ನೀಡುವ ಈ ಪ್ರವಾಸವು ಬೆಳಗ್ಗೆ 8 ಗಂಟೆಗೆ ಹೊರಟು ರಾತ್ರಿ 8:30 ಕ್ಕೆ ಮರಳಿ ಮಂಗಳೂರಿಗೆ ಬರುತ್ತದೆ. ಮಂಗಳಾದೇವಿ, ಬಪ್ಪನಾಡು, ಕಟೀಲು, ಸಸಿಹಿತ್ಲು, ಕುದ್ರೋಳಿ ಸೇರಿದಂತೆ ನವದುರ್ಗೆಯರ ದರ್ಶನಕ್ಕೆ ಅವಕಾಶವಿದೆ. ಈ ಪ್ಯಾಕೇಜ್‌ಗೆ ವಯಸ್ಕರಿಗೆ ₹500 ಮತ್ತು ಮಕ್ಕಳಿಗೆ ₹400 ದರ ನಿಗದಿಪಡಿಸಲಾಗಿದೆ.
ಮೈಸೂರು ದಸರಾಗೆಂದು ನೌಕರಿಗೆ ರಜೆ ಹಾಕಿರುವವರು, ಶಾಲಾ ರಜೆಯನ್ನು ಮಕ್ಕಳೊಂದಿಗೆ ಖುಷಿಯಿಂದ ಕಳೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಜೊತೆಗೆ ವಿವಿಧ ಧಾರ್ಮಿಕ ಸ್ಥಳವನ್ನು ಹಬ್ಬದ ಇದನಗಳಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಎಲ್ಲಾ ಪ್ಯಾಕೇಜ್‌ಗಳಿಗೂ ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಅದಕ್ಕಾಗಿ ನೀವು ಅಧಿಕೃತ ವೆಬ್‌ಸೈಟ್ www.ksrtc.in ಭೇಟಿ ನೀಡಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಗಳಲ್ಲಿ ಮುಂಗಡ ಕೌಂಟರ್‌ಗಳ ವ್ಯವಸ್ಥೆಯನ್ನೂ ತೆರೆಯಲಾಗಿದೆ ಎಂದು ಮಂಗಳೂರು KSRTC ಘಟಕದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications