ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡದಂತೆ ತಡೆಯಲು ಪೊಲೀಸರು ಹಗಲು-ರಾತ್ರಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಪೊಲೀಸರು ಆರೋಗ್ಯದ ಬಗ್ಗೆ ಯಾರು ಕಾಳಜಿ ವಹಿಸಬೇಕು?.

Recommended Video

ತಾನು ಬೆಳೆದ ತರಕಾರಿಯನ್ನು ಮಾರಲಾಗದೆ ಕಸದ ಲಾರಿಗೆ ಹಾಕಿದ ರೈತ | Farmer | Oneindia Kannada

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರಿಗೆ ಸೋಂಕು ತಗುಲಿದೆ. ಬೆಂಗಳೂರು ನಗರದಲ್ಲಿ 40ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ಪೊಲೀಸ್ ಮೇಲಿನ ಹಲ್ಲೆ ಖಂಡಿಸಿ, ತನ್ನ ಹೆಸರು ಬದಲಿಸಿದ ಪಂಜಾಬ್ ಡಿಜಿಪಿ ಪೊಲೀಸ್ ಮೇಲಿನ ಹಲ್ಲೆ ಖಂಡಿಸಿ, ತನ್ನ ಹೆಸರು ಬದಲಿಸಿದ ಪಂಜಾಬ್ ಡಿಜಿಪಿ

ಕೊರೊನಾ ಸೋಂಕಿಗೆ ಹೆಚ್ಚಾಗಿ ತುತ್ತಾಗುತ್ತಿರುವುದು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಮುಂಬೈನಲ್ಲಿ 55 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪೊಲೀಸ್ ಸಿಬ್ಬಂದಿಯನ್ನು ಕೊರೊನಾ ನಿಯಂತ್ರಣದ ಕೆಲಸಕ್ಕೆ ನಿಯೋಜನೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.

55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಲ್ಲೇ ಇರಲು ಸೂಚನೆ 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಲ್ಲೇ ಇರಲು ಸೂಚನೆ

Policemen In Karnataka Over 55 Will Not Be Allotted To COVID 19 Duty

ಈಗ ಕರ್ನಾಟಕದಲ್ಲಿಯೂ ಇದನ್ನು ಪಾಲನೆ ಮಾಡಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 55 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಅಂತಹ ಸಿಬ್ಬಂದಿ ಕೊರೊನಾ ಕೆಲಸಕ್ಕೆ ಹೋಗುವಂತಿಲ್ಲ.

ಕೊರೊನಾ ಸೈಡ್ ಎಫೆಕ್ಟ್‌ಗೆ ರೌಡಿಶೀಟರ್ ಬಲಿ; ಪೊಲೀಸ್ ತನಿಖೆಯಿಂದ ಬಯಲು!ಕೊರೊನಾ ಸೈಡ್ ಎಫೆಕ್ಟ್‌ಗೆ ರೌಡಿಶೀಟರ್ ಬಲಿ; ಪೊಲೀಸ್ ತನಿಖೆಯಿಂದ ಬಯಲು!

ಪೊಲೀಸ್ ಠಾಣೆಯ ಕೆಲಸ, ಸುರಕ್ಷಿತ ಸ್ಥಳಗಳ ಕಾರ್ಯಗಳಿಗೆ ಅವರನ್ನು ನಿಯೋಜನೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ವಯಸ್ಸಾದ ಸಿಬ್ಬಂದಿಗಳು ಸೋಂಕಿಗೆ ತುತ್ತಾಗದಂತೆ ತಡೆಯಬಹುದಾಗಿದೆ.

ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕಿಡ್ನಿ ಮತ್ತು ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಇರುವ ಯಾವುದೇ ಸಿಬ್ಬಂದಿಯನ್ನು ಕೊರೊನಾ ನಿಯಂತ್ರಣದ ಕೆಲಸಕ್ಕೆ ನಿಯೋಜನೆ ಮಾಡುವಂತಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಮುಂಬೈನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲಾ 50 ವರ್ಷ ಮೇಲಿನವರು. ಆದ್ದರಿಂದ, ಮುಂಬೈನಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಕೆಲಸದಿಂದ ವಿನಾಯಿತಿ ಕೊಡಲಾಗಿದೆ.

English summary
Policemen over 55 years will not be allotted to COVID -19 duty in Karnataka. Policemen asked to work in station and Coronavirus free zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X