ನಮ್ಮ KSRTCಗೆ ಪ್ರಶಸ್ತಿಗಳ ಸುರಿಮಳೆ: ಕರ್ನಾಟಕ ಕಾಂಗ್ರೆಸ್ ಹೀಗಂತು...

ಕೆಎಸ್‌ಆರ್‌ಟಿಸಿ ಅಂದ್ರೆ ಒಂದು ಗತ್ತು, ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಇದೆ ತಾಕತ್ತು. ಅದರಲ್ಲೂ ನಮ್ಮ ಹೆಮ್ಮೆಯ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆ ಮಾಡದೇ ಇರುವ ಸಾಧನೆ ಇಲ್ಲ. ಹಾಗೇ ಪಡೆಯದೇ ಇರುವ ಪ್ರಶಸ್ತಿ ಕೂಡ ಇಲ್ಲ. ಇಂತಿಪ್ಪ ಕೆಎಸ್‌ಆರ್‌ಟಿಸಿ ಈಗ ಮತ್ತೆ ಭಾರತದಲ್ಲೇ ದೊಡ್ಡ ಹೆಸರನ್ನು ಮಾಡಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಹೇಳಿದ್ದೇನು ಗೊತ್ತೆ? ಬನ್ನಿ ತಿಳಿಯೋಣ.

ಅಷ್ಟಕ್ಕೂ ಭಾರತದ 'ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ' (ASRTU) ವತಿಯಿಂದ ನೀಡುವ ಪ್ರಶಸ್ತಿ ಪಟ್ಟಿಯಲ್ಲಿ ನಮ್ಮಹೆಮ್ಮೆ ಕೆಎಸ್‌ಆರ್‌ಟಿಸಿ ಸಂಸ್ಥೆ ಬಹುದೊಡ್ಡ ಸಾಧನೆಯನ್ನ ಮಾಡಿದೆ ಅದ್ರಲ್ಲೂ ಕೆಎಸ್‌ಆರ್‌ಟಿಸಿ ಸೇರಿದಂತೆ ಕರ್ನಾಟಕದ ಒಟ್ಟು 4 ನಿಗಮಗಳಿಗೂ, ಇದೀಗ ಒಟ್ಟಾರೆ 5 ಪ್ರಶಸ್ತಿ ಒಲಿದು ಬಂದಿವೆ. ಈ ಕುರಿತು ರಾಜ್ಯದಲ್ಲಿ ಈಗ ಸಂಭ್ರಮ ಮೇಳೈಸುವ ಜೊತೆಗೆ, ಕನ್ನಡಿಗರ ಸಾರಿಗೆ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸುತ್ತಿದೆ ದೇಶ. ಇನ್ನು ಈ ಕುರಿತು ಇದೀಗ, ಕರ್ನಾಟಕ ಕಾಂಗ್ರೆಸ್ ಕೂಡ ರಿಯಾಕ್ಷನ್ ಕೊಟ್ಟಿದೆ.

Congress Reacted Like This After KSRTC Got 5 Awards In National Level

'ರಾಜ್ಯ ಸಾರಿಗೆಗೆ ಶಕ್ತಿ!'

ಈ ಬಗ್ಗೆ ಇದೀಗ ಕಾಂಗ್ರೆಸ್ ಟ್ವೀಟ್ ಮಾಡಿದ್ದು, 'ನಮ್ಮ ಸರ್ಕಾರದ 9 ತಿಂಗಳ ಅವಧಿಯಲ್ಲಿ 60ಕ್ಕೂ ಹೆಚ್ಚು ವಿವಿಧ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಈಗ ಮತ್ತೊಮ್ಮೆ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳಿಗೆ 5 ರಾಷ್ಟ್ರೀಯ ಪ್ರಶಸ್ತಿ ದೊರಕಿವೆ. ಬಿಜೆಪಿ ಅವಧಿಯಲ್ಲಿ ಆಸ್ತಿ ಅಡಮಾನ ಇಡುವ ಸ್ಥಿತಿಯಲ್ಲಿದ್ದ ಸಾರಿಗೆ ಇಲಾಖೆ ಕೆಲ ತಿಂಗಳಲ್ಲಿ ಹಲವು ಅಭಿವೃದ್ಧಿಪರ ಕ್ರಮಗಳ ಮೂಲಕ ದೇಶದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ ಸಚಿವ ರಾಮಲಿಂಗಾರೆಡ್ಡಿ ಅವರು' ಎಂದು ಹೇಳಿದೆ ಕರ್ನಾಟಕ ಕಾಂಗ್ರೆಸ್.

ಹಾಗೇ ಬಿಜೆಪಿ ಕುರಿತು ಕೂಡ ಮಾತನಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಬರೀ ಸಮಸ್ಯೆಗಳೇ ಇದ್ದವು ಎಂದು ಆರೋಪ ಮಾಡಿದೆ. ಟ್ವೀಟ್‌ನಲ್ಲಿ ತನ್ನ ಆರೋಪ ಮುಂದುವರಿಸಿರುವ ಕಾಂಗ್ರೆಸ್, 'ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಬಿಜೆಪಿ ಅವಧಿಯಲ್ಲಿ ಕೇಳಿಬರುತ್ತಿದ್ದ ಸುದ್ದಿಗಳು👇' ಎಂದು ಒಂದು ಪಟ್ಟಿ ನೀಡಿದೆ ಕಾಂಗ್ರೆಸ್.

Congress Reacted Like This After KSRTC Got 5 Awards In National Level

'• ನೌಕರರ ಪ್ರತಿಭಟನೆ
• ತುಕ್ಕು ಹಿಡಿಯುತ್ತಿರುವ ಬಸ್ಸುಗಳು
• ಬಸ್ಸುಗಳ ಕೊರತೆ
• ವೇತನ ಸಿಗದ ನೌಕರರು

ಕಾಂಗ್ರೆಸ್ ಅವಧಿಯಲ್ಲಿನ ಸುದ್ದಿಗಳು👇

• ಹೊಸ ಬಸ್ಸುಗಳ ಸೇರ್ಪಡೆ
• ಸಿಬ್ಬಂದಿಗಳಿಗೆ ವಿವಿಧ ಯೋಜನೆ
• ಗುಜರಿ ಸೇರಿದ್ದ ಬಸ್ಸುಗಳ ಪುನಃಸ್ಚೇತನ
• ಸಾಲು ಸಾಲು ಪ್ರಶಸ್ತಿಗಳು'

'ಇಚ್ಛಾಶಕ್ತಿ ಹಾಗೂ ಬದ್ಧತೆ ಹೊಂದಿರುವ ನಮ್ಮ ಸರ್ಕಾರ ಬಿಜೆಪಿ ಹಾಳುಗೆಡವಿದ್ದ ವ್ಯವಸ್ಥೆಯ ಸರಿಪಡಿಸಿ ಅಭಿವೃದ್ಧಿಯತ್ತ ಮೊನ್ನೆಡೆಯುತ್ತಿದೆ.' ಎಂದು ಹೇಳಿದೆ ಕಾಂಗ್ರೆಸ್. ಈ ಮೂಲಕ ಬಿಜೆಪಿ & ಕಾಂಗ್ರೆಸ್ ನಡುವೆ ಕಿಚ್ಚು ಹೊತ್ತಿದೆ.

ಕರ್ನಾಟಕದ ಸಾರಿಗೆಗೆ ಸಿಕ್ಕ ಪ್ರಶಸ್ತಿಗಳು

ಕೆಎಸ್‌ಆರ್‌ಟಿ‌ಸಿ ಬ್ರ್ಯಾಂಡಿಂಗ್ & ವರ್ಚಸ್ಸು ಅಭಿವೃದ್ಧಿ ಉಪಕ್ರಮ ಮತ್ತು ಸಿಬ್ಬಂದಿ ಕಲ್ಯಾಣಕ್ಕೆ ಕೈಗೊಂಡ ಹೊಸ ಯೋಜನೆಗಳಿಗೆ ಈಗ 2 ಪ್ರಶಸ್ತಿ ಲಭಿಸಿವೆ. ಇದರ ಜೊತೆ ಇದೀಗ ಬಿಎಂಟಿಸಿಗೆ ವಿದ್ಯುತ್ ಚಾಲಿತ ವಾಹನಗಳಾದ ಅಸ್ತ್ರ ಕಾರ್ಯಾಚರಣೆ ಉಪಕ್ರಮಕ್ಕೆ ಪ್ರಶಸ್ತಿ ಸಿಕ್ಕಿದ್ದು. ಇದರ ಜೊತೆ ಮತ್ತೊಂದು ಖುಷಿ ವಿಚಾರ ಏನೆಂದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಸ್ತೆ ಸಾರಿಗೆ ಸುರಕ್ಷತೆಯ ಉಪಕ್ರಮ ಅನುಷ್ಠಾನಕ್ಕೆ ಪ್ರಶಸ್ತಿ ಸಿಕ್ಕಿದೆ.

ಹಾಗೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿ ಅನುಷ್ಠಾನಕ್ಕೆ ಅಂತಾ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ 15ನೇ ಮಾರ್ಚ್ 2024 ರಂದು ದೆಹಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದೆ. ಈ ಮೂಲಕ ಕನ್ನಡಿಗರ ನಾಡಲ್ಲಿ ಕಟ್ಟಿ ಬೆಳೆಸಿರುವ ಸಂಸ್ಥೆಗೆ ಭಾರಿ ದೊಡ್ಡ ಗೌರವ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+