"ಎಲ್ಲದರಲ್ಲೂ ಮೂಗು ತೂರಿಸುವ ಬ್ರದರ್ ಸ್ವಾಮಿ" ಇದರ ಬಗ್ಗೆನೂ ಸ್ವಲ್ಪ ಮಾತಾಡಿ ಎಂದ ಕಾಂಗ್ರೆಸ್
ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಸವಾಲು ಹಾಕಿದೆ. ಜಾತಿ ನಿಂದನೆ, ಲಂಚ ನೀಡುವಂತೆ ಒತ್ತಾಯ ಹಾಗೂ ಬೆದರಿಕೆ ಆರೋಪದ ಮೇಲೆ ಬಂಧಿತರಾಗಿರುವ ಮುನಿರತ್ನನ ಬಗ್ಗೆಯೂ ಎಚ್‌ಡಿಕೆ "ತುಟಿ" ಬಿಚ್ಚಿ ಮಾತನಾಡಲಿ ಎಂದು ರಾಜ್ಯ ಕಾಂಗ್ರೆಸ್ ಪಕ್ಷವು ಸವಾಲು ಹಾಕಿದೆ. ರಾಜ್ಯ ಕಾಂಗ್ರೆಸ್ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಎಚ್.ಡಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಒಕ್ಕಲಿಗ ಹೆಣ್ಣುಮಕ್ಕಳನ್ನು ಮಂಚಕ್ಕೆ ಕಳಿಸುವಂತೆ ಬೇಡಿಕೆ ಇಟ್ಟ ಮುನಿರತ್ನರ ಬಗ್ಗೆ

ಎಚ್.ಡಿ ಕುಮಾರಸ್ವಾಮಿ ಅವರೇ ತುಟಿ ಬಿಚ್ಚಲು ಭಯಪಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ. ಕಾನೂನಿನ ವ್ಯಾಪ್ತಿಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡಾಗಿದೆ. ಆದರೆ, ತಮ್ಮ ಸಮುದಾಯದ ಮಹಿಳೆಯರ ಘನತೆಯ ಪ್ರಶ್ನೆ ಬಂದಿರುವಾಗ ಕುಮಾರಸ್ವಾಮಿ ಪಲಾಯನವಾದಿಯಾಗಿರುವುದೇಕೆ ? ಇದು ಸರಿಯೇ ಎಂದು ಕಾಂಗ್ರೆಸ್ ಕೇಳಿದೆ.
ಬೇರೆಲ್ಲಾ ವಿಷಯಗಳಿಗೆ ಮೂಗು ತೂರಿಸುವ ಬ್ರದರ್ ಸ್ವಾಮಿಗಳು ತಮ್ಮ ಸಮುದಾಯದ ಮಹಿಳೆಯರ ವಿಷಯಕ್ಕೆ ಕಿವುಡಾಗಿರುವುದೇಕೆ?
ಮಹಿಳೆಯರಿಗೆ "ದಾರಿ ತಪ್ಪಿದವರು" ಎಂದಿದ್ದ ಕುಮಾರಸ್ವಾಮಿಯವರು ಮುನಿರತ್ನರ ದಾರಿ ಸರಿ ಇದೆ ಎನ್ನುವರೇ ಎಂದೂ ಮೂದಲಿಸಿದೆ.

ದಾರಿತಪ್ಪಿದ್ದಾರೆ ಹೇಳಿಕೆ ವಿವಾದ
ಈ ಹಿಂದೊಮ್ಮೆ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಎಲ್ಲೋ ಒಂದು ಕಡೆ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅನಿಸುತ್ತದೆ ಎಂದು ಹೇಳಿದ್ದರು. ಈ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಇದೀಗ ಕುಟುಕಿದೆ. ಎಚ್‌ಡಿ ಕುಮಾರಸ್ವಾಮಿ ಅವರೇ ಮಹಿಳೆಯರಿಗೆ ನೀವು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಿರಿ. ಇದೀಗ ಬಿಜೆಪಿ ಶಾಸಕ ಮುನಿರತ್ನ ಅವರ ದಾರಿ ಸರಿಯಾಗಿ ಇದೆ ಎಂದು ಸಮರ್ಥಿಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದೆ.
ಒಕ್ಕಲಿಗ ಹೆಣ್ಣುಮಕ್ಕಳನ್ನು ಮಂಚಕ್ಕೆ ಕಳಿಸುವಂತೆ ಬೇಡಿಕೆ ಇಟ್ಟ ಮುನಿರತ್ನರ ಬಗ್ಗೆ @hd_kumaraswamy ಅವರು ತುಟಿ ಬಿಚ್ಚಲು ಭಯಪಡುತ್ತಿರುವುದೇಕೆ?
— Karnataka Congress (@INCKarnataka) September 16, 2024
ಕಾನೂನಿನ ವ್ಯಾಪ್ತಿಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡಾಗಿದೆ, ಆದರೆ ತಮ್ಮ ಸಮುದಾಯದ ಮಹಿಳೆಯರ ಘನತೆಯ ಪ್ರಶ್ನೆ ಬಂದಿರುವಾಗ ಕುಮಾರಸ್ವಾಮಿ ಪಲಾಯನವಾದಿಯಾಗಿರುವುದೇಕೆ?…
ಎಲ್ಲದರಲ್ಲೂ ಮೂಗು ತೂರಿಸುವ ಬ್ರದರ್
ಕಾಂಗ್ರೆಸ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೂಗು ತೂರಿಸುವ ಬ್ರದರ್ ಸ್ವಾಮಿ ಎಂದು ಟೀಕೆ ಮಾಡಿದೆ. ಕರ್ನಾಟಕದಲ್ಲಿ ಯಾವುದೇ ಘಟನೆ ನಡೆದರೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರೂ ಆಗಿರುವುದರಿಂದ ಅವರ ಹೇಳಿಕೆಗಳು ರಾಷ್ಟ್ರ ಮಟ್ಟದ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇದು ಸಹಜವಾಗಿಯೇ ಕಾಂಗ್ರೆಸ್‌ಗೆ ಮುಜುಗರವನ್ನು ಉಂಟು ಮಾಡುತ್ತಿದೆ. ಇನ್ನು ಈಚೆಗೆ ಭಾರೀ ಮಳೆಯಿಂದ ಅನಾಹುತ ಸಂಭವಿಸಿದ ಅಂಕೋಲಾಗೆ ಎಚ್.ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗಲೂ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಇದೀಗ ಎಲ್ಲದರಲ್ಲೂ ಮೂಗು ತೂರಿಸುವ ಬ್ರದರ್ ಮುನಿರತ್ನ ಅವರ ವಿಷಯದ ಬಗ್ಗೆಯೂ ಮಾತನಾಡಿ ಎಂದಿದೆ.












Click it and Unblock the Notifications