ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ಸಿನ ತಂತ್ರಗಳನ್ನು ಬಳಸಲು ಮುಂದಾದ 'ಕೈ' ಪಡೆ: ಶುರುವಾಗಲಿದೆ ಅಗ್ರೆಸ್ಸಿವ್‌ ಕ್ಯಾಂಪೇನ್‌

ಬೆಂಗಳೂರು, ಮೇ 26: ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಪ್ರಚಾರವನ್ನು ಅಗ್ರೆಸ್ಸಿವ್‌ ಆಗಿ ಮಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ವಿನೂತನ ಪ್ರಚಾರ ತಂತ್ರಗಳು, ಬಿಜೆಪಿ ವಿರುದ್ಧದ ನೇರ ಆರೋಪಗಳು ಕಾಂಗ್ರೆಸ್‌ಗೆ ಹೆಚ್ಚು ಸಹಾಯ ಮಾಡಿವೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಈ ಗೆಲುವು ಸೋತು ಸೊರಗಿದ್ದ ಕಾಂಗ್ರೆಸ್‌ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದು ಹೊಸ ಕಾಂಗ್ರೆಸ್ಸಿನ ನಡೆಯೆಂದೂ ಹೇಳಲಾಗುತ್ತಿದೆ.

ಇದೇ ರೀತಿಯ ಅಗ್ರೆಸ್ಸಿವ್‌ ಕ್ಯಾಂಪೇನ್‌ ಅನ್ನು ಕಾಂಗ್ರೆಸ್‌ ಮುಂದುವರಿಸಲಿದೆ ಎಂಬ ಮುನ್ಸೂಚನೆಗಳು ದೊರೆತಿವೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆಗೆ ಕಾಂಗ್ರೆಸ್‌ ಇಗಾಗಲೇ ತಯಾರಿ ನಡೆಸಿರುವುದು ಕಂಡುಬಂದಿದೆ.

Congress will continue its aggressive campaign

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ ಪದೇಪದೇ ತರಾಟೆಗೆ ತೆಗೆದುಕೊಂಡಿತು. ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡಲಾಗಿತ್ತು. 40 ಪರ್ಸೆಂಟ್ ಕಮಿಷನ್ ಮತ್ತು ಪೇಸಿಎಂ ಕ್ಯಾಂಪೇನ್‌ಗಳು ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶದಾದ್ಯಂತ ಪ್ರಚಾರವನ್ನು ಪಡೆದವು. ಬಿಜೆಪಿ ಸರ್ಕಾರದ ವಿರುದ್ಧ ಕೋಮು ರಾಜಕಾರಣದ ಆರೋಪಗಳನ್ನು ವ್ಯಾಪಕವಾಗಿ ಮಾಡಲಾಗಿತ್ತು.

ಇತ್ತೀಚೆಗಷ್ಟೇ ಕ್ಯಾಬಿನೆಟ್ ಅನುಮೋದನೆಯನ್ನು ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಪಡೆದಿವೆ. ಈ ಗ್ಯಾರಂಟಿಗಳು ಕಾಂಗ್ರೆಸ್‌ ಪ್ರಚಾರ ಯೋಜನೆಯು ಪ್ರಮುಖ ಭಾಗವಾಗಿತ್ತು. ಇದು ಕಾಂಗ್ರೆಸ್‌ಗೆ ಭಾರಿ ಲಾಭವನ್ನು ನೀಡಿತು. ಕರ್ನಾಟಕದಲ್ಲಿ ತನ್ನ ಅಮೋಘ ವಿಜಯದ ನಂತರ ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಇದೇ ರೀತಿಯ ತಂತ್ರಗಳನ್ನು ಕಾಂಗ್ರೆಸ್‌ ರೂಪಿಸಲು ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ.

Congress will continue its aggressive campaign

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗೋಹತ್ಯೆ ಮತ್ತು ಮತಾಂತರ ವಿರೋಧಿ ಮಸೂದೆಗಳು ಸೇರಿದಂತೆ ಹಿಂದಿನ ಬಿಜೆಪಿ ಆಡಳಿತದ ನೀತಿಗಳನ್ನು ಪರಿಶೀಲಿಸುತ್ತದೆ. ನಾವು ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಮಾಜದಲ್ಲಿ ಶಾಂತಿಗೆ ಭಂಗ ಉಂಟುಮಾಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿಕೆ ನೀಡಿದ್ದಾರೆ.

ಏತನ್ಮಧ್ಯೆ, ಹೊಸ ಸರ್ಕಾರದ ಕೆಲವು ಮಂತ್ರಿಗಳು, ವಿಶೇಷವಾಗಿ ಎಂ.ಬಿ.ಪಾಟೀಲ್ ಅವರು ಹಿಂದಿನ ಆಡಳಿತವು ನಡೆಸಿದ ಎಲ್ಲಾ ಹಗರಣಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ಇದು ಆರನೇ ಗ್ಯಾರಂಟಿ ಎಂದು ಪರಿಗಣಿಸಲ್ಪಟ್ಟಿದೆ.

Congress will continue its aggressive campaign

ಲೋಕಸಭೆ ಚುನಾವಣೆಗೆ ಮುನ್ನ ಭ್ರಷ್ಟಾಚಾರದ ವಿಷಯದಲ್ಲಿ ತನ್ನ ನಿಲುವು ಬದಲಾಗುವುದಿಲ್ಲ ಎಂದು ಪಕ್ಷ ನಿರ್ಧರಿಸಿದೆ.

ಸದ್ಯಕ್ಕೆ ಕರ್ನಾಟಕದಿಂದ ಒಬ್ಬರೇ ಸಂಸದರಿರುವುದರಿಂದ 28 ಲೋಕಸಭಾ ಸ್ಥಾನಗಳಲ್ಲಿ 15-18 ಸ್ಥಾನಗಳನ್ನು ಗೆಲ್ಲಲು ನಾಯಕರು ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ರಾಜಕೀಯ ಪಂಡಿತರು ಫಲಿತಾಂಶಗಳು ನಾಯಕರ ನಡುವಿನ ಏಕತೆಯನ್ನು ಅವಲಂಬಿಸಿರುತ್ತದೆ ಮತ್ತು ಖಾತರಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದೂ ಹೇಳಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದು 51.75 ಶೇಕಡಾ ಮತಗಳನ್ನು ಗಳಿಸಿತು. ನಂತರ ಕಾಂಗ್ರೆಸ್ ಒಂದು ಸ್ಥಾನದಲ್ಲಿ (ಶೇ. 32.11 ಮತ ಹಂಚಿಕೆ) ಮತ್ತು ಜೆಡಿಎಸ್ ಒಂದು ಕ್ಷೇತ್ರದಲ್ಲಿ (ಶೇ. 9.74) ಜಯಗಳಿಸಿತು. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಗೆದ್ದಿರು. ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಸಮ್ಮಿಶ್ರ ಪಾಲುದಾರರಾಗಿದ್ದ ಕಾರಣ ಕಾಂಗ್ರೆಸ್ 21 ಸ್ಥಾನಗಳಲ್ಲಿ ಸ್ಪರ್ಧಿಸಿ 7 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+