Munirathna Naidu: ಮುನಿರತ್ನಂ ನಾಯ್ಡು ವಿರುದ್ಧ ಮತ್ತಷ್ಟು ಕೇಸ್ ದಾಖಲು?

ದಲಿತ ಸಮುದಾಯವನ್ನು ನಿಂದಿಸಿ & ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಅಶ್ಲೀಲ ಪದಗಳನ್ನ ಬಳಸಿದ ಆರೋಪ ಹೊತ್ತಿರುವ, ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಅತ್ಯಂತ ಕಠಿಣವಾಗಿ ಪರಿಗಣಿಸಿ, ದೊಡ್ಡ ಮಟ್ಟದ ಹೋರಾಟಕ್ಕೆ ಕೂಡ ಸಜ್ಜಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟಕ್ಕೆ ತಯಾರಿ ಕೂಡ ನಡೆದಿದೆ. ಹೀಗಾಗಿ, ಮುನಿರತ್ನಂ ನಾಯ್ಡು ವಿರುದ್ಧ ಮತ್ತಷ್ಟು ಕೇಸ್ ದಾಖಲು?...

ಮುನಿರತ್ನಂ ನಾಯ್ಡು ಒಂದಾದ ನಂತರ ಒಂದು ಸಮಸ್ಯೆಗೆ ಸಿಲುಕಿ ನರಳುವ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಮೊದಲಿಗೆ ಜಾತಿ ನಿಂದನೆ ಕೇಸ್‌ನಲ್ಲಿ ಪೊಲೀಸರ ಅತಿಥಿ ಆಗಿರುವ ಶಾಸಕ ಮುನಿರತ್ನಂ ನಾಯ್ಡು ಅವರಿಗೆ ಇದೀಗ ಕೊಲೆ ಬೆದರಿಕೆ ಕೇಸ್ ಕೂಡ ಕಂಟಕ ತಂದೊಡ್ಡಿದೆ. ಇದು ಸಾಲದು ಎನ್ನುವಂತೆ ಇದೀಗ ಲಂಚಕ್ಕೆ ಬೇಡಿಕೆ ಇಟ್ಟಿರುವ ಕೇಸ್‌ಗಳನ್ನ ಕೂಡ ಇದೇ ಮುನಿರತ್ನ ನಾಯ್ಡು ವಿರುದ್ಧ ಹಾಕಲು ದೂರುದಾರರು ಮುಂದಾಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ರಾಜ್ಯದ ಮೂಲೆ ಮೂಲೆಯಲ್ಲೂ ಆರ್‌ಆರ್ ನಗರ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಕೇಸ್...

Congress Leaders Saying This About Munirathna Naidu

ಮುನಿರತ್ನಂ ನಾಯ್ಡು ವಿರುದ್ಧ ಮತ್ತಷ್ಟು ಕೇಸ್?

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಂ ನಾಯ್ಡುಗೆ ಕಂಟಕ ಎದುರಾಗಿದೆ. ಒಂದು ಕಡೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ, ಇನ್ನೊಂದು ಕಡೆ ಜೀವ ಬೆದರಿಕೆ ಹಾಕಿದ ಆರೋಪವೂ ಸೇರಿ ಜಾತಿ ನಿಂದನೆ ಆರೋಪ ಹೊರಿಸಲಾಗಿದೆ. ಹೀಗಿದ್ದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುನಿರತ್ನಂ ನಾಯ್ಡು ವಿರುದ್ಧ ವೆರೈಟಿ ವೆರೈಟಿ ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಓಡಾಡುತ್ತಿದೆ. ಅದರಲ್ಲೂ ದಲಿತ ಸಮುದಾಯದ ಕುರಿತಾಗಿ, ಮುನಿರತ್ನಂ ನಾಯ್ಡು ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪವನ್ನೇ ಮುಂದಿಟ್ಟು ರಾಜ್ಯಾದ್ಯಂತ ಜಾತಿ ನಿಂದನೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಓಡಾಡುತ್ತಿದೆ. ಹೀಗೆ ಶಾಸಕ ಮುನಿರತ್ನಂ ನಾಯ್ಡುಗೆ ದೊಡ್ಡ ಕಂಟಕ ಎದುರಾದಂತೆ ಕಾಣುತ್ತಿದೆ.

ಒಕ್ಕಲಿಗ ಸಮುದಾಯ VS ಮುನಿರತ್ನಂ?

ಒಟ್ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಒಂದಾದ ನಂತರ ಒಂದು ಸಂಕಷ್ಟ ಇದೀಗ ಎದುರಾಗುತ್ತಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಇರುವ, ಆಡಿಯೋ ಒಂದು ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ದಲಿತರನ್ನು ನಿಂದಿಸಿರುವ ಆರೋಪ ಹೊತ್ತಿರುವ ಮುನಿರತ್ನಂ ನಾಯ್ಡು ಜೈಲಿಗೆ ಶಿಫ್ಟ್ ಆಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಕ್ಕಲಿಗ ಸಮುದಾಯ ಕೂಡ ಆಕ್ರೋಶ ಹೊರ ಹಾಕಿದ್ದು, ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+