Siddaramaiah Cabinet Expansion: ಶನಿವಾರವೇ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ: ಇವರೇ ನೋಡಿ ಸಿದ್ದು ಸಂಪುಟ ಸೇರುವ ನಾಯಕರು?

ಬೆಂಗಳೂರು, ಮೇ 26: ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಸರ್ಕಾರ ರಚನೆಯ ಬಳಿಕ ಸಂಪುಟ ಸೇರ್ಪಡೆ ವಿಚಾರವಾಗಿ ಕೈ ಪಾಳಯದಲ್ಲಿ ದೊಡ್ಡ ಮಟ್ಟದ ಲಾಬಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ 50 ಕ್ಕೂ ಹೆಚ್ಚು ಜನ ಸಚಿವಾಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ದೆಹಲಿ ವರಿಷ್ಠರ ಬಳಿ ನಡೆಸಿದ್ದು,ಬಹು ನಿರೀಕ್ಷಿತ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಶನಿವಾರ ನಿಗದಿಯಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ ಹಾಗೂ ಹೈಕಮಾಂಡ್‌ ನಾಯಕರು ಗುರುವಾರ ರಾತ್ರಿಯವರೆಗೂ ಸರಣಿ ಸಭೆಯನ್ನ ನಡೆಸಿದ್ದು, ಸಿದ್ದರಾಮಯ್ಯ ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. ಇಂದು (ಶುಕ್ರವಾರ) ರಾತ್ರಿ ಹೊತ್ತಿಗೆ ಸಚಿವರ ಪಟ್ಟಿ ಪೂರ್ಣಗೊಂಡು ರಾಜಭವನಕ್ಕೆ ರವಾನೆಯಾಗಲಿದ್ದು, ಶನಿವಾರ ಸಂಜೆ ವೇಳೆಗೆ ಖಾತೆಗಳನ್ನೂ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

 Siddaramaiah Cabinet Expansion:

ಶನಿವಾರ ಬೆಳಗ್ಗೆ11.30 ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ 20 ರಿಂದ 24 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೈ ಪಾಳಯ ಈ ಬಗ್ಗೆ ಈಗಾಗಲೇ ಸಿದ್ದತೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ. ಇನ್ನೂ ಕಾಂಗ್ರೆಸ್‌ ಪಕ್ಷದಲ್ಲಿನ ಮೂಲಗಳ ಪ್ರಕಾರ ಲಿಂಗಾಯಿತ, ಒಕ್ಕಲಿಗ ಸಮುದಾಯದ ಜೊತೆಗೆ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೂ ಈ ಬಾರಿಯ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಮೇ 20 ರಂದು ಅಸ್ತಿತ್ವಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಜೊತೆಗೆ ಸಚಿವರಾಗಿ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಡಾ.ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ. ಜಮೀರ್‌ ಅಹಮ್ಮದ್‌ ಖಾನ್‌,ಕ ಪ್ರಿಯಾಂಕ್‌ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಹಿರಿಯರಾದ ಆರ್.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ, ಬಸವರಾಜ ರಾಯರೆಡ್ಡಿ ಕೂಡ ಸಂಪುಟ ಸೇರ್ಪಡೆಗೆ ಪಟ್ಟು ಹಿಡಿದಿದ್ದಾರೆ.

ಇತ್ತ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಸಂಪುಟಕ್ಕೆ ಶಾಸಕರ ಸೇರ್ಪಡೆ ಹಾಗೂ ಖಾತೆ ಹಂಚಿಕೆ ಒತ್ತಡದಿಂದ ವಿಸ್ತರಣೆ ವಿಳಂಬವಾಗಿದೆ. ಇನ್ನೂ 2024 ರ ಲೋಕಸಭೆ ಚುನಾವಣೆ ತಯಾರಿ ಭಾಗವಾಗಿಯೇ ಸಂಪುಟ ವಿಸ್ತರಣೆ ಕಸರತ್ತು ನಡೆದಿದೆ. ಜತೆಗೆ ಪಕ್ಷದಲ್ಲಿ ಹಿರಿಯರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಬಹುತೇಕ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಶುಕ್ರವಾರವೇ ಖಾತೆಗಳನ್ನೂ ಅಂತಿಮಗೊಳಿಸಲಾಗುತ್ತಿದೆ.

 Siddaramaiah Cabinet Expansion:

ಇನ್ನೂ ಪಕ್ಷದಲ್ಲಿ ಹಿರಿಯ ಶಾಸಕರಾದ ಶಿವಾನಂದ ಪಾಟೀಲ, ಕೆ.ಎನ್‌.ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಚಲುವರಾಯಸ್ವಾಮಿ ಸೇರಿದಂತೆ ಸೊರಬ ಶಾಸಕ ಮಧುಬಂಗಾರಪ್ಪ, ಲಕ್ಸ್ಮಿ ಹೆಬ್ಬಾಳಕರ್, ಬೈರತಿ ಸುರೇಶ್‌ ‌ಸೇರಿದಂತೆ ಹಲವರಿಗೆ ಅವಕಾಶ ಸಿಗಲಿದೆ. ವಿಧಾನಪರಿಷತ್‌ನಲ್ಲಿ ಸಭಾ ನಾಯಕರಾಗಲು ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಪರಿಷತ್‌ ಪ್ರತಿನಿಧಿಯಾಗಿ ಹಿರಿಯ ಕಾಂಗ್ರೆಸ್‌ ನಾಯಕ, ರಾಯಚೂರು ಜಿಲ್ಲೆಯ ಎಸ್‌.ಎನ್‌.ಬೋಸರಾಜು ಅವರು ಸಂಪುಟ ಸೇರಲಿದ್ದು, ಮಂತ್ರಿಗಿರಿಗಾಗಿ ಬಿ.ಕೆ.ಹರಿಪ್ರಸಾದ್‌ ಹಾಗೂ ಸಲೀಂ ಅಹಮದ್‌ ಕೂಡ ತೀವ್ರ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಕೈ ಪಾಳಯದಲ್ಲಿ ಪ್ರಮುಖ ಖಾತೆಗೂ ಹಿರಿಯರೂ ಪಟ್ಟು ಹಿಡಿದಿದ್ದು, ಜಲಸಂಪನ್ಮೂಲ, ಲೋಕೋಪಯೋಗಿ, ಕಂದಾಯ, ಇಂಧನ ಸೇರಿ ಪ್ರಮುಖ ಖಾತೆಗಳಿಗೆ ಡಿ ಕೆ ಶಿವಕುಮಾರ್‌, ಎಂ.ಬಿ.ಪಾಟೀಲ, ಪರಮೇಶ್ವರ್‌ ಅವರು ಪ್ರಯತ್ನ ನಡೆಸಲಿದ್ದಾರೆ.

ಸೇರ್ಪಡೆಯಾಗುವ ಸಂಭಾವ್ಯರ ಪಟ್ಟಿ:

ಬಿ.ಈಶ್ವರ ಖಂಡ್ರೆ( ಬೀದರ್‌)

ಲಕ್ಷ್ಮಿ ಹೆಬ್ಬಾಳಕರ್‌(ಬೆಳಗಾವಿ)

ದಿನೇಶ್‌ ಗುಂಡೂರಾವ್‌(ಬೆಂಗಳೂರು)

ಎಚ್‌.ಕೆ.ಪಾಟೀಲ್‌ (ಗದಗ)

ಕೆ.ವೆಂಕಟೇಶ( ಮೈಸೂರು)

ಪುಟ್ಟರಂಗಶೆಟ್ಟಿ( ಚಾಮರಾಜನಗರ)

ಕೆ.ಎನ್‌.ರಾಜಣ್ಣ( ತುಮಕೂರು)

ಶಿವಾನಂದ ಪಾಟೀಲ( ವಿಜಯಪುರ)

ಶರಣಬಸಪ್ಪ ದರ್ಶನಾಪುರ( ಯಾದಗಿರಿ)

ಎಸ್‌.ಎಸ್‌.ಮಲ್ಲಿಕಾರ್ಜುನ( ದಾವಣಗೆರೆ)

ಎನ್‌.ಚಲುವರಾಯಸ್ವಾಮಿ( ಮಂಡ್ಯ)

ಬೈರತಿ ಸುರೇಶ್‌( ಬೆಂಗಳೂರು)

ಮಧು ಬಂಗಾರಪ್ಪ(ಶಿವಮೊಗ್ಗ)

ಕೆ.ಎಂ.ಶಿವಲಿಂಗೇಗೌಡ(ಹಾಸನ)

ವಿನಯ ಕುಲಕರ್ಣಿ( ಧಾರವಾಡ)

ಮಂಕಾಳ ವೈದ್ಯ( ಉತ್ತರ ಕನ್ನಡ)

ಬಿ.ನಾಗೇಂದ್ರ( ಬಳ್ಳಾರಿ)

ಟಿ.ಡಿ.ರಾಜೇಗೌಡ( ಚಿಕ್ಕಮಗಳೂರು)

ಶಿವರಾಜ ತಂಗಡಗಿ(ಕೊಪ್ಪಳ)

ಲಕ್ಷ್ಮಣ್‌ ಸವದಿ(ಬೆಳಗಾವಿ)

ಕೃಷ್ಣ ಭೈರೇಗೌಡ(ಬೆಂಗಳೂರು)

ಎಸ್‌.ಎನ್‌.ಬೋಸರಾಜು( ರಾಯಚೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+