Karnataka Cold Wave: ಚಂಡಮಾರುತ ಪರಿಚಲನೆ: ಮುಂದಿನ 5 ದಿನ ರಾಜ್ಯದಲ್ಲಿ ಚಳಿ ಹೇಗಿರಲಿದೆ?

ಬೆಂಗಳೂರು, ಜನವರಿ 08: ಕರ್ನಾಟಕ ರಾಜ್ಯಾದ್ಯಂದ ಒಣಹವೆ ಜೊತೆಗೆ ತೀವ್ರ ಚಳಿ ಮುಂದುವರಿದಿದೆ. ಸಮುದ್ರದ ಮೇಲ್ಮೈನಲ್ಲಿ ಉಂಟಾಗಿರುವ ತೀವ್ರ ರೂಪದ ಚಂಡಮಾರುತದ ಪರಿಚಲನೆಯು ತೀವ್ರ ಚಳಿ ಏರಿಕೆಗೆ ಕಾರಣ ಎನ್ನಲಾಗಿದೆ. ಈ ವೈಪರಿತ್ಯಗಳು ಸದ್ಯಕ್ಕೆ ಮಳೆ ಸುರಿಸುವುದು ಅನುಮಾನ ಎನ್ನಲಾಗಿದೆ. ಚಳಿಗಾಲವಾದ್ದರಿಂದ ಸಾಮಾನ್ಯವಾಗಿ ಚಳಿ, ಮಂಜು ಇರುತ್ತದೆ. ಇದು ನಿರೀಕ್ಷೆಗಿಂತ ಹೆಚ್ಚಾಗಲು ಸಮುದ್ರ ಮೇಲ್ಮೈನಲ್ಲಿ ಉಂಟಾಗುವ ಬದಲಾವಣೆಗಳು ಕಾರಣ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಪ್ರತಿ ನಿತ್ಯ ಹೆಚ್ಚು ಗರಿಷ್ಠ ತಾಪಮಾನ ಜೊತೆಗೆ ಬೆಳಗ್ಗೆ, ಸಂಜೆ ನಂತರ ಅತೀ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಗಳು ಇವೆ ಎಂದು ಬುಧವಾರ ನೀಡಿದ ಮುನ್ಸೂಚನೆಯಲ್ಲಿ ತಿಳಿಸಿದೆ.

Cold Wave Alert For Karnataka Next 5 Days Due to Cyclonic Circulation in Sea Level Forecast

ಹವಾಮಾನ ವೈಪರಿತ್ಯದ ಮುನ್ಸೂಚನೆ ನೋಡಿದರೆ, ಸಮಭಾಜಕ ಹಿಂದೂ ಮಹಾಸಾಗರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ 1.5 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದ್ದು, ಮುಂದುವರಿದಿದೆ.

ಈ ತೊಟ್ಟಿಯು ಈಗ ಸಮಭಾಜಕ ಹಿಂದೂ ಮಹಾಸಾಗರದ ಮೇಲಿನ ಚಂಡಮಾರುತದ ಪರಿಚಲನೆಯಿಂದ ದಕ್ಷಿಣ ಕೇರಳದವರೆಗೆ ದಕ್ಷಿಣ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡಿನ ಮೂಲಕ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತದಲ್ಲಿ ಉಂಟಾಗಿದೆ.

Cold Wave Alert For Karnataka Next 5 Days Due to Cyclonic Circulation in Sea Level Forecast

ಚಂಡಮಾರುತದ ಪರಿಚಲನೆಯು ಕೇರಳದ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಇದೆಲ್ಲ ಕಾರಣದಿಂದ ರಾಜ್ಯದಲ್ಲಿ ಮುಂದಿನ ಐದು ದಿನ ಜನವರಿ 13ರಂದು ಚಳಿ, ಮಂಜಿನ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆಯಲ್ಲಿ ತಿಳಿಸಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಚಳಿ, ಮಂಜು ವಾತಾವರಣ

ಕರ್ನಾಟಕದಲ್ಲಿ ಇಂದಿನಿಂದ ಮುಂದಿನ ಐದು ದಿನ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಬೀದರ್, ಧಾರವಾಡ ಒಳನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾಳಿ ಇರುವ ಚಳಿ, ಮಂಜಿನ ವಾತಾವರಣ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ.

ಬೆಂಗಳೂರಲ್ಲಿ ಚಳಿ ಕೊಂಚ ಇಳಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಗೆ ಹೋಲಿಕೆ ಮಾಡಿದರೆ ಬುಧವಾರ ಬೆಳಗ್ಗೆ ಕೊಂಚ ಚಳಿ ಕಡಿಮೆ ಆಗಿದೆ. 12ರಿಂಧ 14 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದ್ದ ತಾಪಮಾನ, ಇಂದು 15ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಮೂಲಕ ಮೈಕೊರೆವ ಚಳಿ ಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+