SWR: ಉತ್ತರ ಕರ್ನಾಟಕ-ಮಂಗಳೂರಿಗೆ ಶಾಶ್ವತ ರೈಲು ಸಂಚಾರ ಸೇವೆ ಅನುಮೋದನೆ: ವಿ.ಸೋಮಣ್ಣ
ಬೆಂಗಳೂರು, ಜೂನ್ 28: ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ನೈಋತ್ಯ ರೈಲ್ವೆಯನ್ನು ಶಾಶ್ವತವಾಗಿ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಎರಡು ಭಾಗಗಳು ಹಾಗೂ ನಿಲುಗಡೆ ಜಿಲ್ಲೆಗಳ ಬಹುದಿನಗಳ ಬೇಡಿಕೆ ಈಡೇರಿಕೆ ಆದಂತಾಗಿದೆ. ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ಓಡಾಡುತ್ತಿದ್ದ ರೈಲು ಇನ್ನು ಮುಂದೆ ಶಾಸ್ವತವಾಗಿ ಸಂಚರಿಸಲಿದೆ. ಇದರ ವೇಳಾಪಟ್ಟಿ, ಸಮಯ ಅಪ್ಡೇಟ್ಸ್ ವಿವರ ಇಲ್ಲಿದೆ.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೇ ಖುದ್ದು ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ- ಮಂಗಳೂರು ಸೆಂಟ್ರಲ್ (07377/07378) ವಿಶೇಷ ತಾತ್ಕಾಲಿಕ ರೈಲನ್ನು ಶಾಶ್ವತವಾಗಿ ಓಡಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಈ ಮೊದಲು ಈ ವಿಶೇಷ ರೈಲನ್ನು ಕೆಲ ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತಿತ್ತು. ಇದೀಗ 'ವಿಜಯಪುರ -ಮಂಗಳೂರು ಸೆಂಟ್ರಲ್ (17377/17378) ಎಕ್ಸ್‌ಪ್ರೆಸ್ ಶಾಶ್ವತ ರೈಲನ್ನಾಗಿಸಿ' ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯಪುರ-ಮಂಗಳೂರು ರೈಲು ಕರ್ನಾಟಕದ ಎರಡು ತುದಿಗೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯ ಪ್ರಯಾಣಿಕರು, ಪ್ರವಾಸಿಗರು, ವೈದ್ಯಕೀಯ ಸೌಲಭ್ಯ ಹಾಗೂ ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಈ ಭಾಗದ ಜನತೆ ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರೈಲು ಸಂಚಾರ ಸಮಯ
* ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (17377) ಹೊಸ ವೇಳಾಪಟ್ಟಿ ಪ್ರಕಾರ ಪ್ರತಿ ದಿನ ಮಧ್ಯಾಹ್ನ 03 ಗಂಟೆಗೆ ಹೊರಡುತ್ತದೆ. ಮಾರನೇ ದಿನ ಬೆಳಗ್ಗೆ 9.50ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ.
* ಇನ್ನೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಇದೇ ರೈಲು (17378) ಪ್ರತಿ ದಿನ ಸಂಜೆ 4.45ಕ್ಕೆ ಪ್ರಯಾಣ ಆರಂಭಿಸಿ, ಮರು ದಿನ ಬೆಳಗ್ಗೆ 11.15ಕ್ಕೆ ವಿಜಯಪುರ ನಿಲ್ದಾಣ ತಲುಪಲಿದೆ.
ಮಾರ್ಗ ನಿಲುಗಡೆಯ ನಿಲ್ದಾಣಗಳು
ಮಂಗಳೂರಿನಿಂದ ಬಂಟವಾಳಕ್ಕೆ ಸಂಜೆ 5:30/5:32 ಗಂಟೆಗೆ, ಕಬಕಪುತ್ತೂರಿಗೆ 6 ಗಂಟೆ ಅಥವಾ 6:2 ನಿಮಿಷಕ್ಕೆ ಸುಬ್ರಹ್ಮಣ್ಯ ರೋಡ್ 6:50 ಅಥವಾ 7 ಗಂಟೆಗೆ ಬರುತ್ತದೆ. ಅಲ್ಲಿಂದ ಸಕಲೇಶಪುರಕ್ಕೆ 9:20 ಅಥವಾ 9:30 ಗಂಟೆಗೆ ಹಾದು ಹಾಸನಕ್ಕೆ 10:20 ಅಥವಾ 10:30ಗಂಟೆ ಬರಲಿದೆ. ಅರಸೀಕೆರೆಗೆ 11:20-11:25 ಗಂಟೆಗೆ, ಕಡೂರಿಗೆ 11:59 ಅಥವಾ ರಾತ್ರಿ 12 ಗಂಟೆಗೆ ಬಂದು ತಲುಪುತ್ತದೆ.
ನಂತರ ಬೀರೂರಿಗೆ 12:08 - 12:09 ಗಂಟೆಗೆ ಹಾದು ಚಿಕ್ಕಜಾಜೂರಿಗೆ 01:10 ಅಥವಾ 01:12 ಗಂಟೆಗೆ, ದಾವಣಗೆರೆಗೆ 01:48 ಅಥವಾ 01:50, ಹರಿಹರಕ್ಕೆ 02:03 ಅಥವಾ 02:05, ರಾಣೆಬೆನ್ನೂರಿಗೆ 2:25 -:27 ಗಂಟೆಗೆ, ಬ್ಯಾಡಗಿಗೆ 02:44 ಅಥವಾ 02:46 ಗಂಟೆಗೆ ಮತ್ತು ಎಸ್‌ಎಂಎಂ ಹಾವೇರಿಗೆ 03 ರಿಂದ 03:02 ಗಂಟೆಗೆ ಆಗಮಿಸಿ ಮುಂದೆ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರವನ್ನು ಬೆಳಗ್ಗೆ 11.15 ಗಂಟೆಗೆ ತಲುಪುತ್ತದೆ.












Click it and Unblock the Notifications