ಕಾವೇರಿ ನೀರು ಹಂಚಿಕೆ, ಸುಪ್ರೀಂ ಕೋರ್ಟ್‌ನಲ್ಲಿ ವಾಸ್ತವ ಸ್ಥಿತಿ ಮನವರಿಕೆ ಮಾಡಲು ಸಲಹೆ
ಬೆಂಗಳೂರು, ಆಗಸ್ಟ್ 23: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸಿ, ರಾಜ್ಯದ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದ್ದಾರೆ.
ಕಾವೇರಿ ಹಾಗೂ ಮಹದಾಯಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸದೇ, ರಾಜ್ಯದ ರೈತರಿಗೆ ನೀರು ಬಿಡದೇ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ಇದನ್ನು ಒಪ್ಪಲು ಸಿದ್ದರಿಲ್ಲ ಎಂದರು.

ನೆಲ ಜಲ ವಿಚಾರದಲ್ಲಿ ನಮ್ಮ ರಾಜ್ಯದ ಹಿತರಕ್ಷಣೆ ಮಾಡುವುದ್ರಲ್ಲಿ ನಾವು ಬೆಂಬಲ ಕೊಡುತ್ತಾ, ಅವರು ಮೊದಲ ಹಂತದಲ್ಲಿ ಎಲ್ಲೆಲ್ಲಿ ಎಡವಿದ್ದಾರೆ ಎಂದು ಹೇಳಿದ್ದೇವೆ. CWMA ಸಭೆಯಲ್ಲಿ ಸರಿಯಾಗಿ ವಾದ ಮಾಡುವುದರಲ್ಲಿ, ಸುಪ್ರೀಂ ಕೋರ್ಟ್ ಗೆ ಹೋಗದೆ ಇರುವುದರಲ್ಲಿ ಎಡವಿದ್ದಾರೆ.
ನೀರು ಬಿಡುವ ಸ್ಥಿತಿ ರಾಜ್ಯಕ್ಕಿಲ್ಲ
ತಮಿಳುನಾಡಿಗೆ 10 ಸಾವಿರ ಕ್ಯುಸೆಕ್ಸ್ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ. ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಒದಗಿಸಿಕೊಂಡಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟು ನೀರು ಬಿಡದಂತೆ ನೊಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ನಮ್ಮ ಜಲಾಶಯಗಳಲ್ಲಿ ಅವತ್ತು 93 ಟಿಎಂಸಿ ನೀರಿತ್ತು. ಇತ್ತು ಈಗ 70 ಟಿಎಂಸಿ ಮಾತ್ರ ನೀರು ಇದೆ. ಇದೇ ರೀತಿ ಮಾಡಿದರೆ, ನಮ್ಮ ರೈತರಿಗೆ ನೀರು ಪೂರೈಸಲು ಅಗುವುದಿಲ್ಲ. ಬರುವಂತಹ ಎರಡು ತಿಂಗಳ ನಂತರ ಬೆಂಗಳೂರಿಗೂ ಸಂಕಷ್ಟವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನೆರೆ ರಾಜ್ಯದವರಿಂತೆ ನೀವು ಮನವರಿಕೆ ಮಾಡಿ
ನೀರು ಬಿಡುವುದರಿಂದ ಕರ್ನಾಟಕಕ್ಕೆ ಆಗುವ ನಷ್ಟ, ತೊಂದರೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ತಮಿಳುನಾಡು ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿದಂತೆ, ಇವರು ಮಾಡಬೇಕಿದೆ. ಕರ್ನಾಟಕ ರೈತರ ಸಂಕಷ್ಟ ಹಿತ ಕುರಿತು ನ್ಯಾಯವಾದಿಗಳು ವಾದ ಮಂಡಿಸಬೇಕು ಎಂದು ಒತ್ತಾಯ ಮಾಡಿದ್ದೇವೆ.
ನೆಲಜಲ ವಿಚಾರದಲ್ಲಿ ರಾಜಕಾರಣ ಮಾಡದೇ. ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆವೆ. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಏನಾಗುತ್ತದೆಯೋ ಕಾದು ನೋಡೋಣ ಎಂದು ತಿಳಿಸಿದರು.
ಇನ್ನು ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸದೇ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಮೊದಲು ಸುಪ್ತೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ನಂತರ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.












Click it and Unblock the Notifications