Brahmanda Guruji Prediction: ಕರ್ನಾಟಕ ಇಬ್ಭಾಗ, ಸಿಎಂ ಬಗ್ಗೆ ಬ್ರಮಾಂಡ ಗುರೂಜಿ ಸ್ಫೋಟಕ ಭವಿಷ್ಯ

Brahmanda Guruji Prediction: ಆಗಾಗ ಸ್ವಾಮೀಜಿಗಳು ಭವಿಷ್ಯಗಳನ್ನು ನುಡಿಯುತ್ತಲೇ ಇರುತ್ತಾರೆ. ಅಲ್ಲದೆ, ಅವುಗಳು ನಿಜವಾಗುತ್ತವೆ ಎನ್ನುವುದು ಬಹುತೇಕರ ನಿಲುವಾಗಿದೆ. ಹಾಗೆಯೇ ಇದೀಗ ಬ್ರಹ್ಮಾಂಡ ಗುರೂಜಿ ಅವರು ಹಾಸನಾಂಬ ತಾಯಿಯ ದರ್ಶನ ಪಡೆದ ಬಳಿಕ ಕರ್ನಾಟಕ ಇಬ್ಭಾಗದ ಬಗ್ಗೆ ಭಯಾನಕ ಭವಿಷ್ಯವೊಂದನ್ನು ನುಡಿದ್ದಾರೆ. ಹಾಗಾದರೆ ಅವರು ಏನೆಲ್ಲ ಮಾಹಿತಿ ಇಲ್ಲಿ ಗಮನಿಸಿ.

ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು ಮಾತನಾಡಿ, ರಾಜ್ಯ ಸೇರಿ ದೇಶ ಹಾಗೂ ಪ್ರಪಂಚದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಕರ್ನಾಟಕವು ಮೂರು ಭಾಗ ಆಗುವುತೂ ಖಚಿತ. ಶಿವನ ಮೇಲೆ ಆಣೆ ಮಾಡುತ್ತೇನೆ, ಇದು ಸತ್ಯ ಆಗಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

Brahmanda Guruji Shocking prediction about Karnataka bisection and CM

ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವಾಗಿ ರಾಜ್ಯವು ಮೂರು ಭಾಗ ಆಗಲಿದೆ. ಅಷ್ಟೇ ಅಲ್ಲದೆ, ಮೂವರು ಮುಖ್ಯಮಂತ್ರಿಗಳು ಆಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಅಧಿದೇವತೆ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ. ಈ ನಡುವೆ ಬಾಂಗ್ಲಾದೇಶ-ಚೀನಾ ಕುತಂತ್ರ ಮಾಡಿ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದ ಆಗಲಿ ಅಥವಾ ಬೇರೆ ಯಾವ ದೇಶದಿಂದಲೂ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಇನ್ನು 2025 - 2026ಕ್ಕೆ ಮೂರನೇ ಮಹಾಯುದ್ಧ ನಡೆಯಲಿದ್ದು, 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಲಿವೆ. ಇನ್ನು ಪ್ರಧಾನ ಮಂತ್ರಿಗಳು ಎರಡು ವರ್ಷ ಅವಧಿಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಪ್ರಧಾನಿಯಾಗಿ ಉಳಿಯುತ್ತಾರೆ. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ ಎಂದು ಹೇಳಿದ್ದಾರೆ.

ಈ ರಾಜಕೀಯ ಹೊಲಸು ಸರಿಮಾಡಲು ಪ್ರಧಾನಿ ಅವರು ತುಂಬಾ ಪ್ರಯತ್ನ ಮಾಡಿದರು. ಆದರೆ, ಏನೂ ಬದಲಾವಣೆ ಆಗದ ಹಿನ್ನೆಲೆ ಬೇಜಾರಾಗಿ ರಾಜೀನಾಮೆ ನೀಡಬಹುದು ಅಥವಾ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಒಬ್ಬ ಸನ್ಯಾಸಿ ಜಗತ್ತನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಒಟ್ಟಿನಲ್ಲಿ ಬ್ರಮಾಂಡ ಗುರೂಜಿ ಅವರು ಕರ್ನಾಟಕ ಇಬ್ಭಾಗ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿ ಬದಲಾವಣೆ ಕುರಿತು ಸ್ಫೋಟಕ ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+