ನನ್ನನ್ನು ಯಾರಾದರೂ ಬೇರೆ ಪಕ್ಷದವರು ಕರೆಯಲಿ ನೋಡೋಣ : ಕೆ ಎಸ್ ಈಶ್ವರಪ್ಪ ಸವಾಲ್
ಶಿವಮೊಗ್ಗ, ಆಗಸ್ಟ್ 17: ಯಾವ ವ್ಯಕ್ತಿ ಪಕ್ಷದ ನಿಷ್ಠಾವಂತನಾಗಿರುತ್ತಾನೋ ಆತ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ನನ್ನನ್ನು ಯಾರಾದರೂ ಕರೆಯುತ್ತಾರಾ ನೋಡೋಣ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಬಗ್ಗೆ ಯಾರಾದರೂ ಮಾತನಾಡುತ್ತಾರಾ.? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಗೆ ಹೋಗ್ತಾರೆ ಜೆಡಿಎಸ್ ಗೆ ಹೋಗ್ತಾರೆ ಎಂದು ಹೇಳಲು ಆ ಧೈರ್ಯವನ್ನು ಯಾರು ಮಾಡುವುದಿಲ್ಲ. ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಂದ ಗಟ್ಟಿಯಾಗಿದೆ. ಪಕ್ಷಾಂತರ ಮಾಡುವವರಿಂದ ಅಲ್ಲ, ಯಾವ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹೋಗುತ್ತೆ ಬಿಡುತ್ತದೆ ಎಂದು ಗೊತ್ತಿಲ್ಲ ಎಂದು ಹೇಳಿದರು.

ರಾಜಕಾರಣ ನಿಂತ ನೀರಲ್ಲ ಎಂದರು. ಯಾರು ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯಲ್ಲಿ ಇರ್ತಾರೋ ಅವರು ಎಂದಿಗೂ ಗಟ್ಟಿಯಾಗಿ ಇಲ್ಲೇ ಇರ್ತಾರೆ. ಈ ಪಕ್ಷವನ್ನ ಹಾಳು ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಈ ಪಕ್ಷ ಮೊನ್ನೆ ಆಕಸ್ಮಿಕವಾಗಿ ಚುನಾವಣೆಯಲ್ಲಿ ಸೋತಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ನೋಡಿ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ನಾವು ಗೆದ್ದು ಪ್ರಧಾನಿ ನರೇಂದ್ರ ಮೋದಿಯವರನ್ನು ಪುನಃ ಆರಿಸುತ್ತೇವೆ ಎಂದರು.
ಕಾಂಗ್ರೆಸ್ಸಿಗೆ ಬಿಜೆಪಿ ಶಾಸಕರು ಹೋಗ್ತಾರೆ ಅಂತ ಹೇಳೋದು ಊಹಾಪೋಹ ಅಷ್ಟೇ. ನಾನು ಪುನಃ ಹೇಳುತ್ತೇನೆ ಯಾವನೋ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಇರ್ತಾನೋ ಆತ ಎಂದಿಗೂ ಕಾಂಗ್ರೆಸ್ಸಿಗೆ ಹೋಗೋದಿಲ್ಲ. ನನ್ನ ಬಗ್ಗೆ ಯಾರಾದರೂ ಮಾತಾಡಲಿ ನೋಡೋಣ ಕಾಂಗ್ರೆಸ್ ಗೆ ಹೋಗ್ತಾನೆ, ಜೆಡಿಎಸ್ ಗೆ ಹೋಗ್ತಾನೆ ಅಂತ ಹೇಳಲಿ ನೋಡೋಣ.? ಆ ಧೈರ್ಯವೂ ಬರೋದಿಲ್ಲ. ನನ್ನಂತಹ ಲಕ್ಷಾಂತರ ಕಾರ್ಯಕರ್ತರು ನಿಷ್ಠಾವಂತರು ಈ ಪಕ್ಷದಲ್ಲಿ ಇದ್ದೇವೆ. ಈ ದೇಶವನ್ನು ಕಟ್ಟುತ್ತವೆ. ಯಾವುದೇ ಪಕ್ಷಾಂತರಗಳ ಮೇಲೆ ಈ ಪಕ್ಷ ನಿಂತಿಲ್ಲ. ಈ ಸರ್ಕಾರ ಅಸ್ಥಿರವಾಗಿದೆ ಎಂದರು.
ಜನರಿಗೆ ಉಚಿತ ಭಾಗ್ಯಗಳನ್ನು ನೀಡಿ ಭ್ರಷ್ಟರನ್ನಾಗಿ ಮಾಡಿರುವುದು ಕಾಂಗ್ರೆಸ್. ಉಚಿತ ಭಾಗ್ಯ ಮೂಲಕ ಜನರಿಗೆ ಹಣ ನೀಡಿ ಭ್ರಷ್ಟರನ್ನಾಗಿಸಿದ್ದು ಇದೇ ಕಾಂಗ್ರೆಸ್, ಲೋಕಾಯುಕ್ತರಾಗಿದ್ದಂತಹ ಜಸ್ಟೀಸ್ ಸಂತೋಷ ಹೆಗಡೆಯವರು ನೇರವಾಗಿ ಹೇಳಿದ್ದಾರೆ. ಭ್ರಷ್ಟಾಚಾರದಿಂದಲೇ ಈ ಕಾಂಗ್ರೆಸ್ ಸರ್ಕಾರ ಬಂದಿರುವುದು. ಈ ಭ್ರಷ್ಟಾಚಾರವನ್ನು ನಾವ್ಯಾರು ಟೀಕೆ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದ ಹಿರಿಯ ನಾಯಕರೇ ಆರೋಪ ಮಾಡುತ್ತಿದ್ದಾರೆ. ಶಾಸಕ ಬಸವರಾಜ್ ರಾಯರೆಡ್ಡಿ ತರಹದ ಅನೇಕ ನಾಯಕರು ನೇರವಾಗಿ ಹೇಳುತ್ತಿದ್ದಾರೆ ಎಂದರು.
ಹಾವೇರಿಯಲ್ಲಿ ತಮ್ಮ ಪುತ್ರ ಕಾಂತೇಶ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಎರಡು ದಿನದ ಹಿಂದೆ ಹಾವೇರಿಗೆ ತೆರಳಿ ಜನರ ಅಪೇಕ್ಷೆಯಂತೆ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆಯೇ ಹೊರತು ಅದಕ್ಕೂ ಚುನಾವಣಾ ತಯಾರಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications