ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿನ ಬಿಜೆಪಿ ಬಂಡಾಯ ಶಮನ!

|
Google Oneindia Kannada News

ಕೊಪ್ಪಳ, ಮಾ. 20 : ಕೊಪ್ಪಳದಲ್ಲಿ ಟಿಕೆಟ್ ವಂಚಿತರಾದ ಬಿಜೆಪಿ ಹಾಲಿ ಸಂಸದ ಶಿವರಾಮಗೌಡ ಜೊತೆ ಬಿಜೆಪಿ ನಾಯಕರು ನಡೆಸಿದ ಸಂಧಾನ ಫಲ ನೀಡಿದ್ದು, ಜಿಲ್ಲೆಯ ಬಂಡಾಯ ಶಮನವಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಬೆಂಬಲಿಸುವುದಾಗಿ ಶಿವರಾಮಗೌಡರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ಬುಧವಾರ ಶಿವರಾಮಗೌಡ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ, ದೇಶದ ಹಿತಕ್ಕಾಗಿ ಮೋದಿಯನ್ನು ಪ್ರಧಾನಿಯಾಗಿ ಮಾಡಲು, ಬಿಜೆಪಿ ಅಭ್ಯರ್ಥಿ ಪರ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸಂಸದ ಶಿವರಾಮಗೌಡ ತಿಳಿಸಿದ್ದಾರೆ.

Shivarama Gouda

ಬಿಜೆಪಿ ತನ್ನ ಮೊದಲನೇ ಪಟ್ಟಿಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸಂಗಣ್ಣ ಕರಡಿ ಅವರಿಗೆ ಟಕೆಟ್ ನೀಡಿತ್ತು. ಇದರಿಂದಾಗಿ ಪಕ್ಷದ ಸ್ಥಳೀಯ ಮುಖಂಡರ ವಿರುದ್ಧ ಕಿಡಿಕಾರಿದ್ದ ಹಾಲಿ ಸಂಸದ ಶಿವರಾಮಗೌಡ ಮುನಿಸಿಕೊಂಡಿದ್ದರು. ಶಿವರಾಮಗೌಡರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಹಬ್ಬಿದ್ದವು. [ಕೊಪ್ಪಳಕ್ಕೆ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿ]

ತಮ್ಮ ರಾಜಕೀಯ ನಿರ್ಧಾರದ ಕುರಿತು ತೀರ್ಮಾನ ಕೈಗೊಳ್ಳಲು ಜನಾಭಿಪ್ರಾಯ ಸಂಗ್ರಹಿಸಲು ಶಿವರಾಮಗೌಡರು ಆರಂಭಿಸಿದ್ದರು. ತಮ್ಮ ಮೊಬೈಲ್‌ ಸಂಖ್ಯೆ, ಅಂಚೆ ವಿಳಾಸ ಹಾಗೂ ಇ-ಮೇಲ್‌ ವಿಳಾಸವನ್ನು ಸಾರ್ವಜನಿಕರಿಗೆ ನೀಡಿ, ಮುಂದಿನ ನಡೆಯನ್ನು ಸಾರ್ವಜನಿಕರು ನಿರ್ಧರಿಸುವಂತೆ ಕೋರಿದ್ದರು.

ಸದ್ಯ ಎಲ್ಲರ ಅಭಿಪ್ರಾಯಪಡೆದು ಬಿಜೆಪಿಯ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಹ ದೂರವಾಣಿ ಮೂಲಕ ಶಿವರಾಮಗೌಡರ ಮನವೊಲಿಸಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಎಂದು ಸಲಹೆ ಮಾಡಿದ್ದರು. ಎಲ್ಲಾ ನಾಯಕರ ಸಂಧಾನದ ಬಳಿಕ ಗೌಡರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು : ಬಿಜೆಪಿ ಈಗಾಗಲೇ ಸಂಗಣ್ಣ ಕರಡಿ ಅವರಿಗೆ ಕ್ಷೇತ್ರದ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ಬಸವರಾಜ್ ಹಿಟ್ನಾಳ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಅಸಮಾಧಾನ ಗೊಂಡಿದ್ದ ಶಿವರಾಮಗೌಡರನ್ನು ಕಣಕ್ಕಿಳಿಸಲು ತಯಾರಿ ನಡೆಸಿತ್ತು. ಸದ್ಯ ಅವರು ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದ್ದು, ಜೆಡಿಎಸ್ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.

English summary
Elections 2014 : Koppal BJP leaders raise hands to show unity in constituency sitting MP Shivarama Gouda said, He will support BJP candidate Karadi Sanganna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X