ಅನ್ನ ಭಾಗ್ಯ ರಾಜಕೀಯ: ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಗೊತ್ತಾಗಲ್ಲ: ರಾಮಲಿಂಗರೆಡ್ಡಿ

ಬೆಂಗಳೂರು, ಜೂನ್ 16:‌ ಅನ್ನ ಭಾಗ್ಯ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಗೊತ್ತಾಗಲ್ಲ, ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.

ಈ ಕುರಿತು ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇರುತ್ತೆ. ಆದರೆ, ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡುತ್ತಿದೆ. ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತೆ ಅಂತ ಭಯ ಅವರಿಗೆ. ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಕೇಳಬೇಕಿತ್ತು ಎಂದು ಹೇಳಿದರು.

BJP Leaders Not Care About People

ನಮ್ಮ ಸರ್ಕಾರ ಏಳು ಕೆ.ಜಿ ಅಕ್ಕಿ ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದರು. ಕೇಂದ್ರ ಸರ್ಕಾರ ಯಾರದು..? ನಾವು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಜೊತೆಗೆ ಕೇಳ್ಬೇಕಾ..? ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಅವರಿಗೆ ಗೊತ್ತಾಗಲ್ಲ, ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ವ್ಯಂಗ್ಯವಾಡಿದರು.

ಇನ್ನೂ ಈ ವೇಳೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಅನ್ನ ಭಾಗ್ಯವ ವಿಚಾರದಲ್ಲಿ ದುರುದ್ದೇಶದಿಂದ ಕೇಂದ್ರ ಸರ್ಕಾರ ಮಾಡುತ್ತಿದೆ. ಮೊದಲು ಆಹಾರ ಧಾನ್ಯ ಖರೀದಿ ಮಾಡಲು FCI ಗೆ ಹೋಗಬೇಕು, ದುಡ್ಡು ಕೊಟ್ಟರು ಕೊಡಲ್ಲ ಅಂದ್ರೆ ಯಾಕೆ ಅಂತ ಕೇಂದ್ರ ಸರ್ಕಾರ ಹೇಳಬೇಕು. ವಿಳಂಬ ಆಗ್ತಿದೆ ಅಂದ್ರೆ ಆಹಾರ ಇದೆಯಲ್ಲ. ದುಡಿಯುವ ಕೈಯನ್ನು ಚನ್ನಾಗಿ ನೋಡ್ತೀವಿ ಅಂದ್ರೆ ಯಾಕೆ ಅಡ್ಡಗಾಲಿ ಹಾಕುತ್ತಿದೆ.

ನಾವು ಸುಮ್ಮನೆ ಕುಳಿತಿಕೊಳ್ಳಲ್ಲ, ಬೇರೆ ರಾಜ್ಯದಿಂದ ಖಾಸಗಿ ಆಗಿ ತೆಗೆದುಕೊಂಡು ಬರ್ತಿವಿ. ಇನ್ನೂ ಸಿ.ಟಿ ರವಿ ಹಾಗೂ ಆರ್. ಅಶೋಕ್ ಕೇಂದ್ರದ ಮುಂದೆ ಮಾತೋಡುವ ರೂಢಿಯಿಲ್ಲ. ಪುಕ್ಕಟ್ಟೆ ಅಕ್ಕಿ ಕೊಡಿ ಅಂತ ಕೇಳಲ್ಲ, ನಮಗೆ ರಾಜ್ಯ ಬಿಜೆಪಿ ನಾಯಕರು ಉತ್ತರ ಕೊಡ್ಲಿ. ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಯಾರಿಲ್ಲ..? ಎಂದು ಪ್ರಶ್ನಿಸಿದರು.

BJP Leaders Not Care About People

ಕೇಂದ್ರ ಸರ್ಕಾರದ ಬಳಿ ಅಕ್ಕಿ ಪುಕ್ಸಟ್ಟೆಯಾಗಿ ಕೇಳುತ್ತಿಲ್ಲ. ನಾವು ದುಡ್ಡು ಕೊಡುತ್ತಿದ್ದೇವೆ, ಇವರು ನಮಗೆ ಏನೋ ಉಪಕಾರ ಮಾಡಿದ ಹಾಗೆ ಆಡುತ್ತಿದ್ದಾರೆ. ಆಹಾರ ಧಾನ್ಯವನ್ನು ಪಡೆದುಕೊಳ್ಳಲು ಯಾವುದೇ ರಾಜ್ಯ ಸರ್ಕಾರ ಮೊದಲು ಎಫ್ ಸಿ ಐ ಗೆ ಹೋಗಬೇಕು. ಅವರು ಕೊಡಲ್ಲ ಅಂದರೆ ನಾವು ಖಾಸಗಿಯಾಗಿ ಹೋಗಬೇಕು. ಆದರೆ ಅಶೋಕ್ ಹಾಗೂ ಸಿಟಿ ರವಿ ಏಕೆ ಕೇಂದ್ರ ಸರ್ಕಾರದ ಅಕ್ಕಿ ಕೊಡಲ್ಲ ಎನ್ನುತ್ತಿದೆ ಎಂಬುದಕ್ಕೆ ಉತ್ತರ ಕೊಡಲಿ ಎಂದರು.

ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ಅನ್ನ ಭಾಗ್ಯದ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಆ ಹೇಳಿಕೆಗೆ ನಾನು ಧ್ವನಿಗೂಡಿಸುತ್ತೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರು ಕಷ್ಟದಲ್ಲಿ ಇದಾರೆ..? ಯಾರು ಸಾಮಾನ್ಯ ಜನರಿದ್ದಾರೆ..? ಸರ್ಕಾರದ ಜೊತೆಗೆ ಸೇರಿ ಅವರಿಗೆ ಸಹಾಯ ಮಾಡಬೇಕು ಆದರೆ, ಅವರ ಸರ್ಕಾರ ಹಾಗೂ ಪಕ್ಷ ಹಿಂದೆ ಸರಿಯುತ್ತಿದೆ ಎಂದರು.

ಐದು ಗ್ಯಾರಂಟಿ ಸಾಮಾನ್ಯ ಜನರಿಗೆ ಶಕ್ತಿ ಕೊಡುವ ಗ್ಯಾರಂಟಿ. ಇದನ್ನು ವಿರೋಧ ಮಾಡಿದ್ತೆ ಅಂದ್ರೆ ಜನರ ವಿರೋಧ ಮಾಡ್ತಿದ್ದಾರೆ ಅಂತ ಅರ್ಥ, ನಾವೇನು ಫ್ರಿ ಆಗಿ ಅಕ್ಕಿ ಕೊಡಿ ಅಂತ ಕೇಳ್ತಿಲ್ಲ
ಹಣ ಕೊಡ್ತೀವಿ ಅಕ್ಕಿ ಕೊಡಿ ಅಂತ ಕೇಳ್ತಿದ್ದೇವೆ. ಯಾವುದೇ ಗ್ಯಾರಂಟಿಗೂ ಕೇಂದ್ರ ಸರ್ಕಾರದ ಜೊತೆಗೆ ಹಣ ಕೇಳ್ತಿಲ್ಲ, ಅನ್ನ ಭಾಗ್ಯಕ್ಕೆ ಅಕ್ಕಿ ಕೊಡಿ ಹಣ ಕೊಡ್ತೀವಿ ಅಂತ ಕೇಳ್ತಿದ್ದೇವೆ ಅಷ್ಟೇ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+