Breaking; ಇದು ಯಾತ್ರೆಯೋ, ಸಿದ್ದು-ಡಿಕೆಶಿ ಜೋಡಿಸುವ ಜಾತ್ರೆಯೋ?

ಬೆಂಗಳೂರು, ಸೆಪ್ಟೆಂಬರ್ 30: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸಿದೆ. ಶುಕ್ರವಾರ ಗುಂಡ್ಲುಪೇಟೆಯಲ್ಲಿ ಕರ್ನಾಟಕದಲ್ಲಿನ ಯಾತ್ರೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಲಾಗಿದೆ.

21 ದಿನಗಳ ಕಾಲ ಯಾತ್ರೆ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಸಾಗಲಿದೆ. ರಾಜ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅದ್ದೂರಿ ಸ್ವಾಗತ ಕೋರಿದರು.

ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

Bharat Jodo Yatra Karnataka BJP Tweet To Congress

ವೇದಿಕೆ ಕಾರ್ಯಕ್ರಮ ಉದ್ಘಾಟನೆ ವೇಳೆ ರಾಹುಲ್ ಗಾಂಧಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಕೈ ಹಿಡಿದು ನಗಾರಿ ಬಾರಿಸಿದರು. ಕರ್ನಾಟಕ ಬಿಜೆಪಿ ಈ ಕುರಿತು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ಗೆ ಪ್ರಶ್ನೆಯೊಂದನ್ನು ಕೇಳಿದೆ.

'ಭಾರತ್‌ ಜೋಡೋ ಯಾತ್ರೆಯೋ ಅಥವಾ ಸಿದ್ದು- ಡಿಕೆಶಿ ಜೋಡಿಸುವ ಜಾತ್ರೆಯೋ?' ಎಂದು ವಿಡಿಯೋವನ್ನು ಹಾಕಿ ಬಿಜೆಪಿ ಪ್ರಶ್ನಿಸಿದೆ. ಇದಕ್ಕೂ ಮೊದಲು 'ಕರ್ನಾಟಕಕ್ಕೆ ರಾಹುಕಾಲ' ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿತ್ತು.

ಮುಖ್ಯಮಂತ್ರಿಗಳ ಪ್ರತಿಕ್ರಿಯೆ; ಭಾರತ್ ಜೋಡೋ ಯಾತ್ರೆ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಭಾರತವನ್ನು ಒಡೆದರೋ (ತೋಡೋ) ಮಾಡಿದ್ದಾರೋ ಅವರಿಂದಲೇ ಭಾರತ ಜೋಡಿಸುವ ಯಾತ್ರೆ ನಡೆದಿದೆ" ಎಂದರು.

"ಇತಿಹಾಸವನ್ನು ಯಾರೂ ಮರೆತಿಲ್ಲ. ರಾಜಕೀಯ ಅಸ್ತಿತ್ವಕ್ಕೆ ಹಾಗೂ ಅವರ ಒಳಗಿನ ಹುಳುಕು ಮುಚ್ಚಿಕೊಳ್ಳಲು ಯಾತ್ರೆ ನಡೆಸಿರುವುದು ವಿಪರ್ಯಾಸ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+