ಯತ್ನಾಳ್ ಗೆ ಟಿಪ್ಪು ಬಗ್ಗೆ ಪಾಠ ಮಾಡಿದ ಸಿದ್ದರಾಮಯ್ಯ

ಬೆಳಗಾವಿ,ಡಿಸೆಂಬರ್ 19: ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ಟಿಪ್ಪು ಸುಲ್ತಾನ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.

ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದ ಬಳಿಕ ಮಾಧ್ಯಮಗಳ ಜೊತೆಗೆ ಶಾಸಕ ಯತ್ನಾಳ್ ಮಾತನಾಡಿ, ಕಾಂಗ್ರೆಸ್ ನವರು ಸಾಬ್ರುಗಿಂತ ಸಾಬ್ರು ಆಗಿದ್ದಾರೆ. ಕಾಂಗ್ರೆಸ್ ಸಾಬ್ರು ಪಾರ್ಟಿ. ಸಾಬ್ರುಗೆ ಏನಾದ್ರೂ ಆದರೆ ಅವ್ರು ಹೋಗುತ್ತಾರೆ ಎಂದು ಹೇಳಿದರು.

ಇನ್ನೂ ಸದನದಲ್ಲಿ ರಾಷ್ಟ್ರೀಯ ನಾಯಕ ಫೋಟೋವನ್ನ ಹಾಕಲಾಗಿದೆ. ಸದನದಲ್ಲಿ ಟಿಪ್ಪು ಪೋಟೋ ಹಾಕೋದು ಬೇಡ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತಿಹಾಸ ಓದಿಲ್ಲ. ಸಿದ್ದರಾಮಯ್ಯ ಹಿಂದು ವಿರೋಧಿ ಪುಸ್ತಕ ಓದಿದ್ದಾರೆ. ಅವ್ರು ಒಳ್ಳೆಯವರು, ಆದರೆ ಅವರ ತಲೆಗೆ ತುಂಬಿಸಿದ್ದಾರೆ. ಟಿಪ್ಪು ಸುಲ್ತಾನ್, ಔರಂಗಜೇಬ್ ಫೋಟೋ ಹಾಕಬಾರದು ಎಂದು ಹೇಳಿದರು.

 Basavanagowda Patil Yatnal Has Been Taught A Lesson About Tipu By Siddaramaiah.

ಇನ್ನೂ ಶಾಸಕ ಯತ್ನಾಳ್ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗಮಿಸಿದ್ದು, ಹೇ ಲೀಡರ್ ಎಂದು ಸಿದ್ದರಾಮಯ್ಯ ಬೆನ್ನು ತಟ್ಟಿದರು. ನಿಮ್ಮ ಬಗ್ಗೆಯೇ ಮಾತನಾಡುತ್ತಿದ್ದೆ ಎಂದು ಯತ್ನಾಳ್ ಅವರು ಹೇಳಿದ್ಕೆ, ನನ್ನ ಬಿಟ್ರೆ ಇನ್ನೇನು ಇದೆ ನಿಮಗೆ ಹೇಳೋದಕ್ಕೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ ಹೋರಾಟಗಾರ, ಬ್ರಿಟಿಪ್ ರ ಜೊತೆಗೆ ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಹೋರಾಟ ಮಾಡಿದ್ದಾರೆ ಎಂದು ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ಅವರಿಗೆ ಟಿಪ್ಪು ಬಗ್ಗೆ ಪಾಠ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+