ಕೆರೆ-ದಡ ಆಟ ಆಡುತ್ತಿರುವ ಪ್ರತಾಪ್ ಸಿಂಹ, ರೊಚ್ಚಿಗೆದ್ದ ಯತ್ನಾಳ್ ಅಭಿಮಾನಿಗಳು! BY Vijayendra

ಕರ್ನಾಟಕ ಬಿಜೆಪಿ ಘಟಕದಲ್ಲಿ ಈಗ ಬೆಂಕಿ ಹೊತ್ತಿಕೊಂಡಿದೆ, ಅಸಮಾಧಾನದ ಜ್ವಾಲೆಯಲ್ಲಿ ಧಗಧಗ ಹೊತ್ತಿ ಉರಿಯುತ್ತಿರುವ ಕರ್ನಾಟಕ ಬಿಜೆಪಿ ಘಟಕ ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ದಿಢೀರ್ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಪಕ್ಷದಿಂದಲೇ ಓಡಿಸಿದ ನಂತರ ಕಿಚ್ಚು ಮತ್ತಷ್ಟು ಹಬ್ಬಿದ್ದು, ಹಿಂದುತ್ವದ ವಿಚಾರ ಮುಂದೆ ತಂದು ಇದೀಗ ಪಕ್ಷದ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗೆಲ್ಲಾ ಸಂದಿಗ್ಧತೆ ಎದುರಾಗಿರುವ ಸಮಯದಲ್ಲೇ, ಪ್ರತಾಪ್ ಸಿಂಹ ವಿರುದ್ಧ ಕೂಡ ಆಕ್ರೋಶ ಮೊಳಗಿದೆ.

ಪ್ರತಾಪ್ ಸಿಂಹ ವಿರುದ್ಧ ಮೊದಲಿನಿಂದ ಕೂಡ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಅದರಲ್ಲೂ 2 ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಪ್ರತಾಪ್ ಸಿಂಹ, ಸ್ವಂತ ಪಕ್ಷದ ಕಾರ್ಯಕರ್ತರಿಗೇ ಅನ್ಯಾಯ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಹೀಗಿದ್ದಾಗ ಹೈಕಮಾಂಡ್ ಕೂಡ ಪ್ರತಾಪ್ ಸಿಂಹಗೆ 2024ರ ಲೋಕಸಭೆ ಚುನಾವಣೆ ಟಿಕೆಟ್ ಕೊಡದೆ ಮೂಲೆಗುಂಪು ಮಾಡಿತ್ತು. ಇಷ್ಟೆಲ್ಲದರ ನಡುವೆಯೇ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಕೂಡ ಪ್ರತಾಪ್ ಸಿಂಹ ವಿರುದ್ಧವೂ ರೊಚ್ಚಿಗೆದ್ದಿದ್ದಾರೆ.

Basanagouda Patil Yatnal Supporters Are Saying This About The Pratap Simha Now

ಪ್ರತಾಪ್ ಸಿಂಹ VS ಯತ್ನಾಳ್ ಬೆಂಬಲಿಗರು?

ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧವೇ ಗುಂಪು ಕಟ್ಟಿಕೊಂಡು, ಬಿಜೆಪಿ ಒಳಗೆ ಎರಡು ಗುಂಪು ಮಾಡಿದ್ದವರ ಸಂಖ್ಯೆ ದೊಡ್ಡದಾಗಿದೆ. ಈ ಪೈಕಿ ಯತ್ನಾಳ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಕೂಡ ಸೇರಿವೆ. ಅದರಲ್ಲೂ ಪ್ರತಾಪ್ ಸಿಂಹ ಈ ವಿಚಾರದಲ್ಲಿ ಮೊದಲಿನಿಂದ ಕೂಡ ಬಿ.ವೈ. ವಿಜಯೇಂದ್ರ ವಿರುದ್ಧ ನಿಂತಿದ್ದರು.

ಅಲ್ಲದೆ, ರೆಬೆಲ್ ನಾಯಕರ ಜೊತೆಗೆ ಗುರುತಿಸಿಕೊಂಡು ಸಭೆಗಳ ಮೇಲೆ ಸಭೆಗಳನ್ನ ಮಾಡುತ್ತಾ ಭಾರಿ ದೊಡ್ಡ ಕಿಚ್ಚು ಹೊತ್ತಿಸಿದ್ದರು ಪ್ರತಾಪ್ ಸಿಂಹ. ಆದ್ರೆ ಈಗ ದಿಢೀರ್ ಬಿ.ವೈ.ವಿಜಯೇಂದ್ರ ಜೊತೆ ಕೈಜೋಡಿಸಿ ಯತ್ನಾಳ್‌ಗೆ ಅನ್ಯಾಯ ಮಾಡಿದ್ರಾ ಪ್ರತಾಪ್ ಸಿಂಹ? ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಪ್ರತಾಪ್ ಸಿಂಹ ವಿರುದ್ಧ ರೊಚ್ಚಿಗೇಳಲು ಕಾರಣ ಏನು?

ಬಿ.ವೈ. ವಿಜಯೇಂದ್ರ ಜೊತೆ ನಿಂತ ಸಿಂಹ?

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಸುದ್ದಿ ತಿಳಿದು ಕೆಲವು ರೆಬೆಲ್ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಹಲವು ನಾಯಕರು ಈ ಬಗ್ಗೆ ಬೇಸರ ಹೊರಹಾಕಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ನೋವು ತಂದಿದೆ ಅಂತಿದ್ದಾರೆ. ಆದರೆ ಪ್ರತಾಪ್ ಸಿಂಹ ಈ ವಿಚಾರದಲ್ಲಿ ಬಿ.ವೈ. ವಿಜಯೇಂದ್ರ ಜೊತೆಗೆ ಹೋಗಿಬಿಟ್ರಾ? ಇಷ್ಟುದಿನ ರೆಬೆಲ್ ಗುಂಪಿನ ಜೊತೆಗೆ ಗುರುತಿಸಿಕೊಂಡಿದ್ದು ಯಾಕೆ? ಅಂತೆಲ್ಲಾ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+