Get Updates
Get notified of breaking news, exclusive insights, and must-see stories!

ಮಗನ ಹುಟ್ಟುಹಬ್ಬ ದಿನವೇ ಟೆಕ್ಕಿ ಪತ್ನಿ ಆತ್ಮಹತ್ಯೆ

Bangalore techie Naren wife Ashitha suicide in Viveknagar
ಬೆಂಗಳೂರು, ಜ.24: ಜಸ್ಟ್ ಒಂದು ವರ್ಷದ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಪತಿಯ ಒಪ್ಪಲಿಲ್ಲವೆಂದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರದಲ್ಲಿರುವ ಶ್ರೀರಾಮ ಮಂದಿರದ ಬಳಿ ನಡೆದಿದೆ.

ಮಗನ ಹುಟ್ಟುಹಬ್ಬದ ದಿನವೇ...
ಮಗನ ಹುಟ್ಟುಹಬ್ಬ ಮುಗಿಸಿ ಅಂದೇ ರಾತ್ರಿ ಮಹಾತಾಯಿ ಸಾವಿಗೆ ಶರಣಾಗಿದ್ದಾಳೆ. ಮೃತಳನ್ನು ಆಷಿತಾ ಅಲಿಯಾಸ್ ರೌನಿಯಾರ್ ಎಂದು ಗುರುತಿಸಲಾಗಿದ್ದು, ಆಕೆಗಿನ್ನೂ 26 ವರ್ಷ ವಯಸ್ಸಾಗಿತ್ತು. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಪುತ್ರನ ಜನ್ಮ ದಿನವನ್ನು ಅಷ್ಟೊಂದು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ ಪತಿರಾಯನ ಹೆಸರು ನರೇನ್. 33 ವರ್ಷದ ನರೇನ್ ನೇಪಾಳ ಮೂಲದವರು.

ದಂಪತಿಯ ಮಗನ ಹುಟ್ಟುಹಬ್ಬ ಜನವರಿ 21ರಂದು ಅದ್ದೂರಿಯಾಗಿ ಸೆಲಬ್ರೇಟ್ ಮಾಡಬೇಕೆಂದು ಪತಿ ನರೇನ್‌ ಗೆ ಆಷಿತಾ ಹೇಳಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಇದಕ್ಕೆ ಪತಿ ಸಮ್ಮತಿ ಸೂಚಿಸಲಿಲ್ಲ. ಸರಳವಾಗಿಯೇ ಹುಟ್ಟುಹಬ್ಬ ಮಾಡಿದ್ದರು. ಇದೇ ವಿಷಯವಾಗಿ ದಂಪತಿ ಮಧ್ಯೆ ಜಗಳವಾಗಿತ್ತು. ಅದೇ ಸಿಟ್ಟು/ ಅಸಮಾಧಾನದಲ್ಲಿ ಆಷಿತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಮಧುಮೇಹ ಜೀವನವನ್ನು ಬಲಿಪಡೆಯಿತು
ಆನಾರೋಗ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಲ್ಲೇಶ್ವರ ಎಂಡಿ ಬ್ಲಾಕ್‌ ನಲ್ಲಿ ಬುಧವಾರ ರಾತ್ರಿ ನಡೆದಿದೆ. ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಬಾಬು (45) ಆತ್ಮಹತ್ಯೆಗೆ ಶರಣಾದವರು.

ಅವಿವಾಹಿತ ಬಾಬು ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಕೊಠಡಿಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ಬೆಂಕಿ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ.

ಇತ್ತೀಚೆಗೆ ಮಧುಮೇಹದಿಂದ ಬಳಲುತ್ತಿದ್ದ ಬಾಬು ಜೀನವದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಮಲ್ಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+