ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರಕ್ಕೆ ನಕ್ಸಲರ ಆಗಮನ?, ಪರಿಶೀಲನೆ

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ನವೆಂಬರ್ 12 : ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಕಾರ್ರಾಗಿಹುಂಡಿ ಗ್ರಾಮಕ್ಕೆ ಮೂವರು ಮುಸುಕುಧಾರಿ ನಕ್ಸಲರು ಆಗಮಿಸಿದ್ದರು ಎಂಬ ಸುದ್ದಿ ಹಬ್ಬಿದೆ. ಗುಂಡ್ಲುಪೇಟೆ ತಾಲೂಕಿನ ಗ್ರಾಮವಿದಾಗಿದೆ.

ನಕ್ಸಲ್ ನಿಗ್ರಹಪಡೆ, ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಗ್ರಾಮಕ್ಕೆ ಬಂದಿದ್ದು ನಕ್ಸಲರು ಎಂಬುವುದಕ್ಕೆ ಖಚಿತ ವಾದ ಮಾಹಿತಿ ಸಿಕ್ಕಿಲ್ಲ.

ಗುಂಡ್ಲುಪೇಟೆಯ ಅರಣ್ಯದಂಚಿನಲ್ಲಿ ಪ್ರತ್ಯಕ್ಷರಾಗಿದ್ದು ನಕ್ಸಲರಾ?ಗುಂಡ್ಲುಪೇಟೆಯ ಅರಣ್ಯದಂಚಿನಲ್ಲಿ ಪ್ರತ್ಯಕ್ಷರಾಗಿದ್ದು ನಕ್ಸಲರಾ?

Naxal

ಗ್ರಾಮಕ್ಕೆ ಭೇಟಿ ನೀಡಿದ್ದ ಆಂತರಿಕ ವಿಭಾಗದ ಡಿಎಸ್‍ಪಿ ಪುರುಷೋತ್ತಮ್ ಹಾಗೂ ಅಧಿಕಾರಿಗಳಾದ ನಾಗರಾಜು, ಮಹದೇವ ಪ್ರಸಾದ್, ಶಿವಕುಮಾರ್ ಮತ್ತು ಸಿಬ್ಬಂದಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ: ನಕ್ಸಲ್ ಆಯಾಮ ಕೈಬಿಟ್ಟ ತನಿಖಾದಳಗೌರಿ ಲಂಕೇಶ್ ಹತ್ಯೆ: ನಕ್ಸಲ್ ಆಯಾಮ ಕೈಬಿಟ್ಟ ತನಿಖಾದಳ

ತಮಿಳುನಾಡಿನ ನಕ್ಸಲ್ ನಿಗ್ರಹದಳದ ಅಧಿಕಾರಿಗಳು ಸಹ ಶಾಂತಿ ಹಾಗೂ ಮನೆಯ ಮಾಲೀಕ ಮಾದೇಶ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಗ್ರಾಮಕ್ಕೆ ಆಗಮಿಸಿದವರು ತಮಿಳುನಾಡಿನ ಗಡಿಯಲ್ಲಿರುವ ಮೋಯಾರ್ ಪ್ರದೇಶದತ್ತ ತೆರಳಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ.

ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳದವರು ಅಪರಿಚಿತರ ಗುರುತು ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಅಪರಿಚಿತರ ಚಲನವಲಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

English summary
Anti-Naxal Squad held an interaction with the villagers in Gundlupet taluk after suspicious movement of strangers in village. Squad asked the villagers to immediately alert the force, if they noticed any strangers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X