D.Roopa: ಐಜಿಪಿ ಡಿ.ರೂಪಾ ವಿರುದ್ಧ ಮತ್ತೊಂದು ಗಂಭೀರ ಆರೋಪ: ದೂರು ದಾಖಲು
D.Roopa: ಕರ್ನಾಟಕದ ಐಜಿಪಿ ಡಿ.ರೂಪಾ ಅವರು ಒಂದಲ್ಲ ಒಂದು ವಿವಾದದ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಕೆಲವು ತಿಂಗಳುಗಳಿಂದ ಸೈಲಂಟ್ ಆಗಿದ್ದ ಅವರು ಇದೀಗ ಮತ್ತೆ ಗಂಭೀರ ಆರೋಪದ ಸುಳಿಯೊಂದಲ್ಲಿ ಸಿಲುಕಿಕೊಂಡಿದ್ದಾರೆ. ಹಾಗಾದ್ರೆ ಏನದು ಪ್ರಕರಣ ಹಾಗೂ ಆರೋಪ ಮಾಡಿದವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಐಜಿಪಿ ರೂಪಾ ಡಿ ಮೌದ್ಗಿಲ್ ಅವರ ವಿರುದ್ಧ ಆರೋಪ ಮಾಡಿರುವುದು ಬೇರೆ ಯಾರು ಅಲ್ಲ. ಅವರ ಮೇಲೆ ಕಿರಿಯ ಐಪಿಎಸ್ ಅಧಿಕಾರಿಗಳ ಹೊಸ ಜಗಳದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿಂದೆ 20223ರಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗೆ ಇವರ ಜಗಳವಾಗಿತ್ತು.

ಇದೀಗ ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದಾರೆ ಎಂದು ಆರೋಪಿಸಿ ಐಜಿಪಿ ಡಿ.ರೂಪ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಐಎಸ್‌ಡಿ ಡಿಜಿಐ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ಟಿ.ಎಸ್.ಮಂಜುನಾಥ್, ಗೃಹರಕ್ಷಕ ದಳದ ಸಿಬ್ಬಂದಿ ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀ ತೆಗೆದುಕೊಂಡು ತೆಗೆದಿದ್ದಾರೆ. ಅಷ್ಟೇ ಅಲ್ಲದೆ, ಮಲ್ಲಿಕಾರ್ಜುನ್ ಕೆಲವೊಂದು ಕಡತಗಳನ್ನು ನನ್ನ ಕಚೇರಿಯಲ್ಲಿ ಇರಿಸಿ, ಕಚೇರಿಯ ಫೋಟೋಗಳನ್ನು ತೆಗೆದು ಐಜಿಪಿ ಡಿ.ರೂಪಾ ಅವರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅದಕ್ಕೂ ಮೊದಲು ನನ್ನ ಆಪ್ತ ಸಹಾಯಕ ಕಿರಣ್ ಕುಮಾರ್ ಅವರು ಮಂಜುನಾಥ್ ಅವರಿಗೆ ಡಿಐಜಿ ಅವರ ಅನುಮತಿಯಿಲ್ಲದೆ, ಕಚೇರಿ ಬಾಗಿಲು ತೆರೆಯುವಂತಿಲ್ಲ ಎಂದು ಹೇಳಿದ್ದಾರೆ. ಆದರೂ, ಕಡತಗಳನ್ನು ಇರಿಸಿ ಫೋಟೋ ಕಳುಹಿಸಿದ್ದಾರೆ ಎಂದಿ ವರ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಚಾರ ನನಗೆ ಗೊತ್ತಾದ ತಕ್ಷಣವೇ ಕಚೇರಿ ಆಪ್ತ ಸಹಾಯಕ ಕಿರಣ್ ಕುಮಾರ್, ಮಂಜುನಾಥ್, ಮಲ್ಲಿಕಾರ್ಜುನ್ ಅವರನ್ನು ಕರೆಸಿ ವಿಚಾರಣೆ ಮಾಡಿದಾಗ, ಡಿ.ರೂಪ ಅವರ ಸೂಚನೆ ಮೇರೆಗೆ ಬಾಗಿಲು ತೆರೆದು, ಕಡತ ಇರಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಮತ್ತು ಐಎಸ್‌ಡಿ ಡಿಜಿಪಿಗೂ ವರ್ತಿಕಾ ಅವರು ದೂರು ನೀಡಿದ್ಧಾರೆ ಎಂದು ತಿಳಿದುಬಂದಿದೆ.
ಡಿ.ರೂಪ ಅವರು ಐಎಎಸ್ ಮೊದಲು ರೋಹಿಣಿ ಸಿಂಧೂರಿ ಅವರ ಜೊತೆ ಜಗಳವಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕಿರಿಯ ಐಪಿಎಸ್ ಅಧಿಕಾರಿಗಳು ಕೂಡ ತಮ್ಮ ಮೇಲೆ ದೂರು ದಾಖಲಿಸುವ ಹಂತಕ್ಕೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ ಡಿ.ರೂಪ ಅವರು ನಿಜವಾಗ್ಲೂ ಕಡತಗಳನ್ನು ಕೆಳಹಂತದ ಸಿಬ್ಬಂದಿ ಬಳಸಿಕೊಂಡು ವರ್ತಿಕಾ ಅವರ ಕಡತಗಳನ್ನು ಹಾಕಿಸಿಕೊಂಡ್ರಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.











Click it and Unblock the Notifications