ಪ್ರವಾಹ: ಯಡಿಯೂರಪ್ಪ ಜೊತೆ ಜಂಟಿ ವೈಮಾನಿಕ ಸಮೀಕ್ಷೆ ನಡೆಸಿದ ಶಾ

ಬೆಳಗಾವಿ, ಆಗಸ್ಟ್ 11: ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಪ್ರವಾಹ ತಲೆದೂರಿದ್ದು, ನೆರೆ ವೀಕ್ಷಣೆಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಇಂದು ಆಗಮಿಸಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಸಿಎಂ ಯಡಿಯೂರಪ್ಪ, ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಬರಮಾಡಿಕೊಂಡರು.

ಕೇಂದ್ರ ಗೃಹ ಸಚಿವರಿಂದ ಪ್ರವಾಹ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ ಅವರು ನಂತರ ರಾಜ್ಯದ ಹಿರಿಯ ಅಧಿಕಾರಿಗಳ ಜತೆಗೆ ವಿಮಾನ ನಿಲ್ದಾಣದ ಸಭಾ ಭವನದಲ್ಲಿ ಸಭೆ ನಡೆಸಿದರು.

Amit Shah aerial survey of flood situation in North Karnataka

ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ಅವರು ಜಂಟಿಯಾಗಿ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದರು. ಈ ಸಮಯ ಸಚಿವರ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಹಾಗೂ ಪ್ರಮುಖ ಅಧಿಕಾರಿಗಳೂ ಹಾಜರಿದ್ದರು. ಅಮಿತ್ ಶಾ ಅವರು ಬೆಳಗಾವಿ ಸೇರಿದಂತೆ, ಬಾಗಲಕೋಟೆ ಇನ್ನೂ ಕೆಲವು ಕಡೆಗಳಲ್ಲಿ ನೆರೆ ಪರಿಸ್ಥಿತಿಯನ್ನು ವೀಕ್ಷಿಸಿದರು.

Amit Shah aerial survey of flood situation in North Karnataka

ಪ್ರವಾಹದಿಂದ ಈಗಾಗಲೇ 20,000 ಕೋಟಿಗೂ ಹೆಚ್ಚು ಹಾನಿ ಆಗಿದೆ. ಹಾಗಾಗಿ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆ ರಾಜ್ಯಕ್ಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+