Next CM of Karnataka: ಸಿಎಂ ಕುರ್ಚಿಯ ಫೈಟ್ ನಡುವೆ ಭೈಲಮ್ಮ ಅಚ್ಚರಿಯ ಭವಿಷ್ಯವಾಣಿ: ಮುಂದಿನ ಸಿಎಂ ಇವರೇ!
ಬೆಂಗಳೂರು, ನವೆಂಬರ್ 24: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್ ತಾರಕಕ್ಕೇರಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಅಧಿಕಾರ ಹಂಚಿಕೆ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ನಾಯಕರು ಕೈ ಪಾಳಯದಲ್ಲಿ ಲಾಭಿ ನಡೆಸಿದ್ದು, ಸಿಎಂ ಸ್ಥಾನದ ಪ್ರಭಾವಿ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಈ ನಡುವೆ, ಹುಲಿಗೆಮ್ಮ ದೇವಿಯ ಆರಾಧಕಿ ಭೈಲಮ್ಮ, ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ಕುರ್ಚಿ ಕದನ ಹೈಕಮಾಂಡವರೆಗೂ ತಲುಪಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಅವರನ್ನು ಭೇಟಿಯಾಗಿ ಈ ವಿಚಾರವಾಗಿ ಚರ್ಚೆ ಮಾಡಿದ್ದು, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಸರತ್ತು ನಡೆಸಿದ್ದಾರೆ. ಇದರ ಮಧ್ಯ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜೋಗತಿ ಒಬ್ಬರು ಭವಿಷ್ಯ ನುಡಿದಿದ್ದಾರೆ.

ಹುಲಿಗೆಮ್ಮ ದೇವಿಯ ಜೋಗತಿ ಬೈಲಮ್ಮ ಬಾಳಮ್ಮಣ್ಣವರು ಭವಿಷ್ಯ ನುಡಿದಿದ್ದು, ಗದಗದ ರಾಜೋಟೇಶ್ವರ ನಗರದ ನಿವಾಸಿ ಜೋಗತಿ ಭೈಲಮ ಅವರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಹುಲಿಗೆಮ್ಮ ದೇವಿಯ ಆರಾಧಕಿಯಾಗಿರುವ ಮತ್ತು ಭವಿಷ್ಯವಾಣಿ ನುಡಿಯುವಲ್ಲಿ ಹೆಸರುವಾಸಿಯಾಗಿರುವ ವೃದ್ದ ಮಹಿಳೆಯೊಬ್ಬರು, ರಾಜ್ಯ ಮುಖ್ಯಮಂತ್ರಿ ಕುರ್ಚಿಯ ಫೈಟಿನ ಬಗ್ಗೆ ಅಚ್ಚರಿಯ ಭವಿಷ್ಯವನ್ನು ನುಡಿದಿದ್ದು, ಡಿ ಕೆ ಶಿವಕುಮಾರ್ ಅವರಿಗೆ ಎಲ್ಲೂ ಮಿಸುಕಬೇಡ ಎನ್ನುವ ಸಲಹೆಯನ್ನು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿರುವ ಹದಿಮೂರನೇ ಶತಮಾನದ ಹುಲಿಗೆಮ್ಮ ದೇವಾಲಯ ಲಕ್ಷಾಂತರ ಭಕ್ತರನ್ನು ಹೊಂದಿದೆ. ದೇವಿಯ ಆರಾಧಕಿಯಾಗಿರುವ ಭೈಲಮ್ಮ, ಬಿಟ್ಟು ಕೊಡ್ತಾರಾ, ಎಲ್ಲೂ ಮಿಸಕಬೇಡ ಎಂದು ಹೇಳಿದ್ದಾರೆ. ಈ ಮೂಲಕ, ಸಿದ್ದರಾಮಯ್ಯವರು, ಮುಖ್ಯಮಂತ್ರಿ ಕುರ್ಚಿಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡುತ್ತಾರೆ ಎಂದು ಹೇಳಿದ್ದಾರೆ. ಮುಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕರ್ನಾಟಕದ ಮುಖ್ಯಮಂತ್ರಿ ಎಂದು ಹುಲಿಗೆಮ್ಮ ದೇವಿಯ ಆರಾಧಕಿಯಾಗಿರುವ ಭೈಲಮ್ಮ ಬಾಳಮಣ್ಣವರ ಹೇಳಿದ್ದಾರೆ. ಆ ಮೂಲಕ, ಡಿಕೆ ಶಿವಕುಮಾರ್ ಅವರಿಗೆ ಖುಷಿ ಕೊಡುವ ಸುದ್ದಿಯನ್ನು ನೀಡಿದ್ದಾರೆ. ಇನ್ನೂ ಭೈಲಮ್ಮ ನುಡಿದಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಡಿಕೆಶಿ ಸಿಎಂ ಆಗಲಿ ಎಂದು ಆಶೀರ್ವದಿಸಿದ ನಾಗಾಸಾಧುಗಳು
ಇನ್ನೂ ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನ ನಡುವೆ ಕುರ್ಚಿಗಾಗಿ ಫೈಟ್ ನಡೆಯುತ್ತಿದೆ. ಈ ನಡುವೆ ಬಣ ರಾಜಕೀಯ ಹೆಚ್ಚಾಗಿದ್ದು, ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ನಾಗ ಸಾಧುಗಳು ಆಶೀರ್ವಾದ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ನಾಗ ಸಾಧುಗಳು ಡಿಕೆ ಶಿವಕುಮಾರ್ ಗೆ ಆಶೀರ್ವಾದ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮೇಲೆ ನಮ್ಮ ಸದ್ಗುರುಗಳ ಆಶೀರ್ವಾದ ಇದೆ.ಡಿಕೆ ಶಿವಕುಮಾರ್ ಅವರು ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದೇನೇ. ಸಿಎಂ ಆಗುವಂತೆ ನಾನು ಡಿಕೆ ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದ್ದೇನೆ. ಅವರು ಉನ್ನತ ಮಟ್ಟಕ್ಕೆ ಬರುತ್ತಾರೆ ಅಭಿವೃದ್ಧಿ ಆಗುತ್ತಾ ಇರುತ್ತದೆ ಬೀದಿಗೆರೆ ನಾಗಬಾಬ ಆಶೀರ್ವಾದ ಮಾಡಿದ್ದಾರೆ.












Click it and Unblock the Notifications