Prakash Raj: ಚಕ್ರವರ್ತಿ ಸೂಲಿಬೆಲೆಗೆ "ಕಾಮುಕ ಢೋಂಗಿ" ಎಂದ ನಟ ಪ್ರಕಾಶ್‌ರಾಜ್!
Prakash Raj vs Chakravarty Sulibele: ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್‌ರಾಜ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ಹೊರ ಹಾಕಿದ್ದು. ಕಟುವಾದ ಶಬ್ದಗಳನ್ನು ಬಳಸಿ ಬೈದಿದ್ದಾರೆ. ಇದೀಗ ಪ್ರಕಾಶ್ ರಾಜ್ ಅವರು ಚಕ್ರವರ್ತಿ ಸೂಲಿಬೆಲೆಗೆ ಕಾಮುಕ ಢೋಂಗಿ ಎಂದಿದ್ದಾರೆ. ಯಾಕೆ ಈ ರೀತಿ ಬೈದಿದ್ದಾರೆ. ಚಕ್ರವರ್ತಿ ಹೇಳಿದ್ದೇನು ಆಕ್ರೋಶ ಯಾಕೆ ಎನ್ನುವ ವಿವರ ಇಲ್ಲಿದೆ.
ನಟ ಪ್ರಕಾಶ್ ರಾಜ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಅನ್ಯಧರ್ಮೀಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ ಅಂತ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಮತಾಂತರ ಹಾಗೂ ಲವ್ ಜಿಹಾದ್‌ನಂತಹ ವಿಷಯಗಳನ್ನು ಬಿಟ್ಟು ಬಿಡಿ. ಈಗ ಘರ್ ವಾಪ್ಸಿಯ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದ್ದಾರೆ.

ಪ್ರಕಾಶ್ ರಾಜ್‌ಟ್ವೀಟ್‌ನಲ್ಲಿ ಏನಿದೆ ?
ಚಕ್ರವರ್ತಿ ವಿಡಿಯೋವನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು, ಈ ತನಾತನಿಯ ಆಯುಧವೆಲ್ಲ ಸೊಂಟದ ಕೆಳಗೇ.... ಛಿ.. ಛೀ .. ಇಂಥಾ ವಿಕ್ರತ .. ಕಾಮುಕ ಢೋಂಗಿಗಳು ಯಾವ ಧರ್ಮಕ್ಕೂ ಸೇರಿದವರಲ್ಲ ... ಎಚ್ಚರದಿಂದಿರಿ 🙏🙏🙏 #justasking ಎಂದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ವಿಡಿಯೋ ವೈರಲ್: ಇನ್ನು ಇದೇ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿರುವ ಭಾಷಣದ ವಿಡಿಯೋ ವೈರಲ್ ಆಗಿದೆ. ಅನ್ಯ ಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದಿರುವ ಸೂಲಿಬೆಲೆ ಅವರು, ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತೀಯಪ್ಪ. ಬೇರೆ ಧರ್ಮದ ಹುಡುಗಿಯರನ್ನೂ ನೋಡಿ ಅಂತ ಹೇಳಬೇಕು ಎಂದಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಪ್ರಕಾಶ್ ರಾಜ್ ರಿಯಾಕ್ಟ್ ಮಾಡಿದ್ದಾರೆ.

ಭಾಷಣದಲ್ಲಿ ಚಕ್ರವರ್ತಿ ಅವರು, ಸಿಕ್ಕಾಪಟ್ಟೆ ಮತಾಂತರ ನಡೆಯುತ್ತಿದೆ ಎಂದು ನಾವು ಮಾತನಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ನಾವು ಮಾತಾಂತರದ ಬಗ್ಗೆ ಮಾತನಾಡುತ್ತಿದ್ದೇವೆ. ಇನ್ನೇಷ್ಟು ವರ್ಷಗಳು ಮತಾಂತರದ ಬಗ್ಗೆ ಮಾತನಾಡಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾವಾಗ ಪರ್ವಕಾಲ ಬರುತ್ತದೆಯೋ ಆಗ ಕೆಲಸ ಮಾಡಿ ಮುಗಿಸಿಬಿಡಬೇಕು. ಎಷ್ಟು ದಿನ ಮತಾಂತರದ ಬಗ್ಗೆಯೇ ಮಾತನಾಡುವುದು. ಘರ್ ವಾಪ್ಸಿಯ ಮಾಡುವುದು ಹೇಗೆ ಅಂತ ಮನೆ.. ಮನೆಗೂ ತಿಳಿಸುವ ಕಾಲ ಬಂದಿದೆ ಎಂದಿದ್ದಾರೆ.

ಮತಾಂತರ ಘರ್ ವಾಪ್ಸಿಯ ಹೇಗೆ ಎನ್ನುವುದಕ್ಕೆ ಒಂದು ರೀಲ್ಸ್ ಮಾಡಿ. ಯಾವುದ್ಯಾವುದಕ್ಕೋ ರೀಲ್ಸ್ ಮಾಡುವ ಬದಲು ಈ ರೀತಿಯ ವಿಷಯಗಳಿಗೆ ಮಾಡಿ ಎಂದು ಅವರು ಕರೆ ನೀಡಿದ್ದಾರೆ. ಟೆಸ್ಟ್ ಮ್ಯಾಚ್‌ಗಳು ಈಗ ನಿಂತು ಹೋಗಿವೆ. ಇರುವ 20 ಓವರ್‌ಗಳಲ್ಲೇ ಬಡಿಯಬೇಕು. ನಾವು ಹೊಸ ಸವಾಲುಗಳನ್ನು ಎದುರಿಸಬೇಕು. ನಾವು ಪರಿಣಾಮಕಾರಿಯಾಗಿ ಮುನ್ನುಗ್ಗಬೇಕು ಎಂದು ಪ್ರಚೋದಾತ್ಮಕ ಭಾಷಣವನ್ನು ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.












Click it and Unblock the Notifications