ಥಿಯೇಟರ್‌, ಮಾಲ್, ಪಬ್- ಬಾರ್‌ಗಳಿಗೆ ಶೇ50ರಷ್ಟು ಪ್ರವೇಶ

ಬೆಂಗಳೂರು, ಜ.4: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೇ ಹೆಚ್ಚಾಗಿದ್ದು, ಸರ್ಕಾರ ಚಿತ್ರಮಂದಿರ, ಮಾಲ್, ಪಬ್, ಬಾರ್‌ಗಳಿಗೆ ಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಒಮಿಕ್ರಾನ್, ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಇಂದು (ಜನವರಿ 4) ಸಚಿವರು, ತಜ್ಞರು, ಅಧಿಕಾರಿಗಳ ಜೊತೆ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಮಹತ್ವದ ಸಭೆ ನಡೆಸಲಾಗಿದೆ. ಸಿ ಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಯಣಗಳನ್ನು ತೆಗೆದುಕೊಳ್ಳಲಾಗಿದೆ.

ಶೇ.50ರಷ್ಟು ಆಸನ ವ್ಯವಸ್ಥೆ
ರಾಜ್ಯ ಸರ್ಕಾರ ಹಾಗೂ ತಜ್ಞರ ಸಮಿತಿ ನಡೆಸಿದ ಸಭೆಯಲ್ಲಿ ಕಠಿಣ ನಿಯಮವನ್ನು ಜಾರಿಗೆಗೊಳಿಸಲಾಗಿದೆ. ನಾಳೆ (ಜನವರಿ 5) ರ ರಾತ್ರಿ 10 ಗಂಟೆಯಿಂದ ರಾಜ್ಯಕ್ಕೆ ಹೊಸ ರೂಲ್ಸ್ ಜಾರಿಯಾಗಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ ಜನ ಜಂಗುಳಿ ಸೇರುವ ಸ್ಥಳಗಳಲ್ಲಿ, ಅಂದರೆ ಮಾಲ್, ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಜನರು ಸೇರಲು ಅನುಮತಿ ನೀಡಲಾಗಿದೆ. ಹೀಗಾಗಿ ಥಿಯೇಟರ್‌ಗೆ ಶೇ. 50 ರಷ್ಟು ಆಸನ ವ್ಯವಸ್ಥೆಗೆ ಆದೇಶ ನೀಡಲಾಗಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೆ ಸಂಕಷ್ಟ ಎದುರಾಗಲಿದೆ.

50 percent seat capacity for theaters, bar, pub, malls


ಮಾಲ್‌ಗಳು, ಬಾರ್, ಪಬ್ ಮತ್ತು ಚಿತ್ರಮಂದಿಗಳ ಸಿಬ್ಬಂದಿಗೆ ಮತ್ತು ಅಲ್ಲಿಗೆ ಬರುವಂತಹ ಗ್ರಾಹಕರಿಗೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವುದನ್ನು ಕಡ್ಡಾಯ ಮಾಡಲಾಗಿದೆ.

ಜನವರಿ ತಿಂಗಳಲ್ಲಿ ಮುಂದಿನ ಎರಡು ವಾರ ಕನ್ನಡದ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಇದು ಸಿನಿಮಾ ಮಂದಿಯಲ್ಲಿ ಕೊಂಚ ನಿರಾಳತೆಯನ್ನು ತಂದಿದೆ. ಒಂದು ವೇಳೆ ಎರಡು ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಹೋದರೆ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ತಾನೇ ಚೇತರಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ನಷ್ಟ ಭೀತಿಯಲ್ಲಿದೆ.

ಈಗಾಗಲೇ ಕರ್ನಾಟಕದಲ್ಲಿ ಕನ್ನಡದ ಐದಾರು ಸಿನಿಮಾಗಳು ಬಿಡುಗಡೆಯಾಗಿವೆ. ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 31, 2021ರಂದು 'ಲವ್ ಯು ರಚ್ಚು', 'ಅರ್ಜುನ್ ಗೌಡ' ಹಾಗೂ 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾ ಬಿಡುಗಡೆಯಾಗಿವೆ. ಸಿನಿಮಾ ರಿಲೀಸ್ ಆದ ಕೇವಲ ಐದು ದಿನಗಳ ಅಂತರದಲ್ಲಿ ಈ ಎಲ್ಲಾ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.

ಈಗಾಗಲೇ ಜನವರಿ 7ರವರೆಗೆ ನೈಟ್ ಕರ್ಫ್ಯೂ ಜಾರಿಗೆ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಗೆಯಲ್ಲಿದೆ. ಇದನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಿನಿಮಾದ ನೈಟ್ ಶೋ ಮೇಲೆ ನಿಂತಿದೆ. ಇನ್ನು ವೀಕೆಂಡ್ ಕರ್ಫ್ಯೂ ಕೂಡ ಜಾರಿಗೆ ತಂದಿರುವುದರಿಂದ ಶನಿವಾರ, ಭಾನುವಾರದ ಗಳಿಕೆ ಮೇಲೆ ಏಟು ಬೀಳುತ್ತಿದೆ. ಹೀಗಾಗಿ ಕನ್ನಡ ಚಿತ್ರರಂಗದ ಮುಂದಿನ ಭವಿಷ್ಯ ಆತಂಕದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+