ಕಂದಮ್ಮಗಳಿಗೂ ಕೊರೊನಾ: ಕರ್ನಾಟಕದಲ್ಲಿ 40 ಸಾವಿರ ಮಕ್ಕಳಿಗೆ ಕೊವಿಡ್ ಪಾಸಿಟಿವ್!
ಬೆಂಗಳೂರು, ಮೇ 21: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮಕ್ಕಳಿಗೆ ಅಂಟಿಕೊಳ್ಳುತ್ತಿರುವ ಆತಂಕ ಹೆಚ್ಚಿಸುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ 40,000ಕ್ಕೂ ಹೆಚ್ಚು ಮಕ್ಕಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ.
ಕಳೆದ ಮಾರ್ಚ್ 18ರಿಂದ ಇತ್ತೀಚಿನ ಎರಡು ತಿಂಗಳಿನಲ್ಲಿ 0-9 ವಯೋಮಾನದ ಶೇ.143ರಷ್ಟು ಮಕ್ಕಳಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಕೊವಿಡ್-19 ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಮಾರ್ಚ್ 18 ರಿಂದ ಮೇ 18ರವರೆಗಿನ ವಾರ್ ರೂಮ್ ಅಂಕಿ-ಅಂಶಗಳ ಪ್ರಕಾರ, 0-9 ವರ್ಷದ 39,846 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವರ್ಷದ 1,05,044 ಮಕ್ಕಳಿಗೆ ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭಗೊಂಡು ಇತ್ತೀಚಿನ ಮಾರ್ಚ್ ತಿಂಗಳವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು.

ಕೊರೊನಾವೈರಸ್ ಬಲಿ ತೆಗೆದುಕೊಂಡ ಮಕ್ಕಳ ಸಂಖ್ಯೆ ಎಷ್ಟು?
ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಮಕ್ಕಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭವಾಗಿ 2021 ಮಾರ್ಚ್ 18ರವರೆಗೆ 28 ಮಕ್ಕಳು ಮೃತಪಟ್ಟಿದ್ದು, ಅಲ್ಲಿಂದ ಮೇ ತಿಂಗಳವರೆಗೆ 15 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಮಕ್ಕಳ ಸಂಖ್ಯೆ 46 ರಿಂದ 62ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಮಕ್ಕಳಿಗೆ ಅಂಟಿದರೆ ಇಡೀ ಕುಟುಂಬಕ್ಕೆ ಕೊವಿಡ್-19 ಭೀತಿ
ರಾಜ್ಯದ ಕೆಲವು ಪ್ರಕರಣಗಳಲ್ಲಿ ಮಕ್ಕಳು ಕೊರೊನಾವೈರಸ್ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುತ್ತಾರೆ. ಇನ್ನು ಕೆಲವೆಡೆ ಮಕ್ಕಳಲ್ಲೇ ಮೊದಲು ಕೊವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಅಂಥ ಮಕ್ಕಳಿಂದ ಇಡೀ ಕುಟುಂಬಕ್ಕೆ ಮಹಾಮಾರಿ ಹರಡುವ ಅಪಾಯ ಹೆಚ್ಚಾಗಿರುತ್ತದೆ. ಒಂದು ಕುಟುಂಬ ಒಬ್ಬ ವ್ಯಕ್ತಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಎರಡು ದಿನಗಳಲ್ಲಿ ಇಡೀ ಕುಟುಂಬಕ್ಕೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಮಕ್ಕಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡರೆ ಕುಟುಂಬ ಸದಸ್ಯರೆಲ್ಲ ಜಾಗೃತಿ ವಹಿಸಬೇಕಾಗುತ್ತದೆ. ಸೋಂಕಿನ ಮಗುವಿನ ಜೊತೆಗೆ ಅವರ ಸಹಾಯಕರು ಕೂಡಾ ಐಸೋಲೇಟ್ ಆಗುವುದು ತೀರಾ ಅವಶ್ಯವಾಗಿರುತ್ತದೆ ಎಂದು ಡಾ.ಶ್ರೀನಿವಾಸ್ ಸಲಹೆ ನೀಡುತ್ತಾರೆ.

ಶೇ.10ರಷ್ಟು ಸೋಂಕಿತ ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲು
ಕೊರೊನಾವೈರಸ್ ಸೋಂಕು ತಗುಲಿದ 10 ಮಕ್ಕಳಲ್ಲಿ ಒಂದು ಸೋಂಕಿತ ಮಗು ಮಾತ್ರ ಆಸ್ಪತ್ರೆಗೆ ದಾಖಲಾಗುವಂತಾ ಸ್ಥಿತಿಯಲ್ಲಿದೆ. ಉಳಿದ ಶೇ.90ರಷ್ಟು ಸೋಂಕಿತ ಮಕ್ಕಳನ್ನು ಗೃಹ ದಿಗ್ಬಂಧನದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಮಕ್ಕಳ ತಜ್ಞ ಡಾ. ಸುಪ್ರಾಜ್ ಚಂದ್ರಶೇಖರ್ ತಿಳಿಸಿದ್ದಾರೆ. ಜ್ವರ, ಕೆಮ್ಮು, ವಾಂತಿ ಮತ್ತು ಬೇಧಿಯ ಲಕ್ಷಣಗಳು ಕಂಡು ಬರುವ ಮಕ್ಕಳನ್ನು ಕಡ್ಡಾಯವಾಗಿ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೊಳಪಡಿಸಬೇಕು. ವೈದ್ಯರ ಸಲಹೆ ಇಲ್ಲದೇ ಮಕ್ಕಳನ್ನು ಯಾವುದೇ ಕಾರಣಕ್ಕೂ ಸಿಟಿ ಸ್ಕ್ಯಾನ್, ಡಿ-ಡಿಮ್ಮರ್ ಟೆಸ್ಟ್ ಅಥವಾ ರಕ್ತ ಪರೀಕ್ಷೆಗೆ ಒಳಪಡಿಸುವಂತಿಲ್ಲ ಎಂದು ಡಾ.ಚಂದ್ರಶೇಖರ್ ಹೇಳಿದ್ದಾರೆ.

"ಕೊರೊನಾವೈರಸ್ ಚಿಟ್ಟೆ ರೀತಿಯ ಹಾಗಾದ ಮಕ್ಕಳು"
ಒಂದು ಬಾರಿ ಕೊರೊನಾವೈರಸ್ ಸೋಂಕು ತಗುಲಿದ ಪೋಷಕರು ತಮ್ಮ ಮಕ್ಕಳನ್ನು ಅಜ್ಜ-ಅಜ್ಜಿಯವರ ಜೊತೆಗೆ ಬಿಟ್ಟಿರುತ್ತಾರೆ. ತಮ್ಮ ಮಕ್ಕಳಿಗೂ ಕೊವಿಡ್-19 ಸೋಂಕು ತಗುಲಿದೆ ಎಂಬ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಚಿಟ್ಟೆಗಳಂತೆ ಸ್ವತಂತ್ರ್ಯವಾಗಿರುವ ಮಕ್ಕಳು ಎಲ್ಲರೊಂದಿರುವ ಮುಕ್ತವಾಗಿ ಸಂಪರ್ಕ ಹೊಂದುತ್ತಾರೆ. ಆ ಮೂಲಕ ಮಕ್ಕಳಿನಿಂದ ಕೊರೊನಾವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಅಪಾಯ ಹೆಚ್ಚಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ವರದಿಯಾದ ಕೊವಿಡ್-19 ಸೋಂಕಿತರ ಸಂಖ್ಯೆ
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 28,869 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ ಕೊವಿಡ್-19 ಸೋಂಕಿನಿಂದ 548 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 52257 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು 23,35,524 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 17,76,695 ಸೋಂಕಿತರು ಗುಣಮುಖರಾಗಿದ್ದು, 23,854ಕ್ಕೆ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 5,34,954 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
Recommended Video

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ರಾಜ್ಯದಲ್ಲಿ ಒಟ್ಟು 28,869 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 451, ಬಳ್ಳಾರಿ 1109, ಬೆಳಗಾವಿ 948, ಬೆಂಗಳೂರು ಗ್ರಾಮಾಂತರ 678, ಬೆಂಗಳೂರು 9409, ಬೀದರ್ 94, ಚಾಮರಾಜನಗರ 541, ಚಿಕ್ಕಬಳ್ಳಾಪುರ 487, ಚಿಕ್ಕಮಗಳೂರು 945, ಚಿತ್ರದುರ್ಗ 568, ದಕ್ಷಿಣ ಕನ್ನಡ 926, ದಾವಣಗೆರೆ 538, ಧಾರವಾಡ 955, ಗದಗ 469, ಹಾಸನ 273, ಹಾವೇರಿ 321, ಕಲಬುರಗಿ 399, ಕೊಡಗು 439, ಕೋಲಾರ 357, ಕೊಪ್ಪಳ 725, ಮಂಡ್ಯ 734, ಮೈಸೂರು 1879, ರಾಯಚೂರು 633, ರಾಮನಗರ 480, ಶಿವಮೊಗ್ಗ 719, ತುಮಕೂರು 1796, ಉಡುಪಿ 809, ಉತ್ತರ ಕನ್ನಡ 582, ವಿಜಯಪುರ 310, ಯಾದಗಿರಿ 295 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
-
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ












Click it and Unblock the Notifications