ಚಿಕ್ಕಬಳ್ಳಾಪುರ: ಪಿಕ್‌ನಿಕ್‌ಗೆ ಹೊಗಿದ್ದ ಕುಟುಂಬ ನೀರುಪಾಲು
ಚಿಕ್ಕಬಳ್ಳಾಪುರ, ಏಪ್ರಿಲ್ 25: ರಜೆಗೆಂದು ಮಕ್ಕಳ ಜೊತೆ ಪಿಕ್‌ನಿಕ್‌ಗೆ ತೆರಳಿದ್ದ ಕುಟುಂಬವೊಂದು ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಕೆರೆಯಲ್ಲಿ ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ.
ಬೆಂಗಳೂರಿನ ಭೂಪಸಂದ್ರ, ನೀಲಸಂದ್ರದ ನಿವಾಸಿಗಳಾದ ಸಬಾ, ಆಸಿಫ್, ರಿಯಾ ಮತ್ತು ಸಾದತ್ ಮೃತ ದುರ್ದೈವಿಗಳು. ಮಕ್ಕಳಿಗೆ ರಜೆ ಇದ್ದ ಕಾರಣ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರಕ್ಕೆಂದು ಬಂದಿದ್ದಾರೆ. ಒಟ್ಟು 8 ಜನ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು.
ಬಿಸಿಲು ಹೆಚ್ಚಿದ್ದ ಕಾರಣ ಮಕ್ಕಳು ಕೆರೆ ನೀರಿಗಿಳಿದಿದ್ದಾರೆ, ಅಚಾನಕ್ ಮುಳುಗಲು ತೊಡಗಿದ ಕಾರಣ ಸಬಾ ಮುಳುಗುತ್ತಿದವರನ್ನು ರಕ್ಷಿಸಲು ಹೋಗಿ ತಾವೂ ಮುಳುಗತೊಡಗಿದ್ದಾರೆ. ಇದನ್ನು ನೋಡಿದ ಕಾರು ಚಾಲಕ ಸಾದತ್ ನೀರಿಗೆ ಹಾರಿದ್ದಾರೆ. ಅವರೂ ನೀರಿನ ಸೆಳೆತಕ್ಕೆ ಸಿಲುಕಿ ಅಸುನೀಗಿದ್ದಾರೆ.

ಕಣ್ಣ ಮುಂದೆಯೇ ನಾಲ್ಕು ಜನರ ಜೀವ ಹೋಗಿದ್ದು ನೋಡಿದ ಕುಟುಂಬ ದಿಗ್ಬ್ರಮೆಗೆ ಒಳಗಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶವಗಳನ್ನು ನೀರಿನಿಂದ ಮೇಲೆತ್ತಿದ್ದಾರೆ. ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications