ಪಾಲಿಹೌಸ್‌ನಲ್ಲಿ ಟೊಮ್ಯಾಟೋ ಬೆಳೆದ ಕಲಬುರಗಿ ರೈತನ ಕಥೆ

Posted By:
Subscribe to Oneindia Kannada

ಕಲಬುರಗಿ, ಜುಲೈ 30 : ನಾಲ್ಕು ಎಕರೆಯಲ್ಲಿ ಬೆಳೆಯುವಷ್ಟು ಟೊಮ್ಯಾಟೋ ಬೆಳೆಯನ್ನು ರೈತರೊಬ್ಬರು 1 ಎಕರೆ ಜಾಗದಲ್ಲಿ ಬೆಳೆದು ತೋರಿಸಿದ್ದಾರೆ. ಕೃಷಿ ಭಾಗ್ಯ ಯೋಜನೆಯ ಸಹಾಯ ಪಡೆದ ರೈತ, ಏಳು ಲಕ್ಷ ರೂ. ಗಿಂತ ಅಧಿಕ ಲಾಭ ಪಡೆದಿದ್ದಾರೆ.

ಕಲಬುರಗಿಯ ಅಫಜಲಪುರ ತಾಲೂಕಿನ ಅಳ್ಳಗಿ ಗ್ರಾಮದ ರೈತ ಶಿವಶರಣಪ್ಪ ಗುರಪ್ಪ ಹಾಳಕಿ ಬೇಸಾಯ ಕ್ರಮ ಇತರ ರೈತರಿಗೆ ಮಾದರಿಯಾಗಿದೆ. ಆರು ತಿಂಗಳ ಹಿಂದೆ ಕೇವಲ ಒಂದೇ ಎಕರೆಯಲ್ಲಿ ನಾಲ್ಕು ಎಕರೆಯಲ್ಲಿ ಬೆಳೆಯುವಷ್ಟು ಬೆಳೆ ಬೆಳೆದು ಲಾಭಗಳಿಸಿದ್ದಾರೆ.['ನೆಲ್ಲಿಕಾಯಿ' ಮರದಿಂದ ಬದುಕು ಕಟ್ಟಿಕೊಂಡ ಮೈಸೂರು ದಿವಾಕರ್]

ಶಿವಶರಣಪ್ಪ ಅವರ ಪುತ್ರ ಅರವಿಂದ ಹಾಳಕಿ ಅವರು ಮಹಾರಾಷ್ಟ್ರದ ಪುಣೆ, ಲಾತೂರಗಳಿಗೆ ಭೇಟಿ ನೀಡಿ ಪಾಲಿಹೌಸ್‌ನಲ್ಲಿ ಟೊಮ್ಯಾಟೋ ಬೆಳೆಯುವ ಬಗ್ಗೆ ಮಾಹಿತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿಯೂ ಅದನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ.['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]

'ಹೊರಗಿನ ವಾತಾವರಣದಲ್ಲಿ ಈ ತರಹ ಬೆಳೆ ಬೆಳೆಯಲು ಸಾಧ್ಯವಿಲ್ಲ. ಪಾಲಿಹೌಸ್‌ನಲ್ಲಿ ಬೆಳೆದಿದ್ದರಿಂದ ಈ ರೀತಿಯ ಇಳುವರಿ ಬಂದಿದೆ' ಎನ್ನುತ್ತಾರೆ ಅರವಿಂದ ಹಾಳಕಿ ಅವರು. [ಮಾಹಿತಿ : ಕಲಬುರಗಿ ವಾರ್ತೆ]

28.40 ಲಕ್ಷ ರೂ. ವೆಚ್ಚ

28.40 ಲಕ್ಷ ರೂ. ವೆಚ್ಚ

ಒಂದು ಎಕರೆ ಜಮೀನಿನಲ್ಲಿ 28.40 ಲಕ್ಷ ರೂ. ವೆಚ್ಚದಿಂದ ಮಹಾರಾಷ್ಟ್ರದ ಪುಣೆ ಶಿಕಲಗಾರ್ ಕಂಪನಿಯ ಪಾಲಿಹೌಸ್ ಘಟಕ ನಿರ್ಮಿಸಿಕೊಂಡು ಜಾಲನಾ ನಗರದ ಕಳಸ ಕಂಪನಿ ನಂ. 137 ತಳಿಯ 10,000 ಟೊಮ್ಯಾಟೋ ಗಿಡಗಳನ್ನು ಬೆಳೆದಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಒಟ್ಟು 17 ಲಕ್ಷ ರೂ. ಸಹಾಯಧನ ಪಡೆದಿದ್ದಾರೆ.

ಚೆಂಡು ಹೂ ಸಹ ಬೆಳೆದಿದ್ದಾರೆ

ಚೆಂಡು ಹೂ ಸಹ ಬೆಳೆದಿದ್ದಾರೆ

ಬದುವಿನಿಂದ ಬದುವಿಗೆ 5 ಅಡಿ ಅಂತರದ 65 ಸಾಲುಗಳಿದ್ದು, ಗಿಡದಿಂದ ಗಿಡಕ್ಕೆ ಒಂದುವರೆ ಅಡಿ ಅಂತರವಿಟ್ಟು 30 ಟ್ರಿಪ್ ಕೊಟ್ಟಿಗೆ ಮತ್ತು ಕುರಿ ಮತ್ತು ಬೇವಿನ ಗೊಬ್ಬರ ಹಾಕಿ ಟ್ರೈಕೋಡರ್ಮಾ ಮತ್ತು ಸುಡೋಮೆನ್‍ಸ್‍ದಿಂದ ಗಿಡಗಳನ್ನು ಉಪಚಾರ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿಯಿಂದ ಮೂಲಕ ಪ್ರತಿದಿನ 5 ಗಂಟೆ ನೀರು ಹಾಯಿಸಿದ್ದಾರೆ. ಹುಳಗಳ ನಿಯಂತ್ರಣಕ್ಕಾಗಿ ಅಂಟಿನ್ ಪ್ಲಾಸ್ಟಿಕ್ ಬ್ಯಾಗ್ ಅಳವಡಿಸಿದ್ದಾರೆ ಮತ್ತು 600 ಚೆಂಡು ಹೂ ಗಿಡ ಬೆಳೆದಿದ್ದಾರೆ.

7 ಲಕ್ಷ ರೂ. ಲಾಭ

7 ಲಕ್ಷ ರೂ. ಲಾಭ

ಸುಮಾರು 24 ಅಡಿ ಉದ್ದ ಬೆಳೆಯುವ ಪ್ರತಿ ಗಿಡಕ್ಕೆ ಇಂಡಿಟರ್ಮಿನೇಟ್ ರೋಪ್ ಥ್ರೇಡ್ ಹಾಕಿರುತ್ತಾರೆ. ಕೇವಲ 4 ಜನ ಆಳುಗಳ ನೆರವಿನಿಂದ ಬೆಳೆಯ ನಿರ್ವಹಣೆ ಮಾಡಿ ಸುಮಾರು 20 ಸಲ ಬೆಳೆ ಕಟಾವು ಮಾಡಿ 7 ಲಕ್ಷ ರೂ. ಹಾಗೂ ಚೆಂಡು ಹೂವಿನ ಬೆಳೆಯಿಂದಲೂ 45,000 ರೂ. ಲಾಭ ಪಡೆದಿದ್ದಾರೆ.

ಸೋಲಾರ್ ಪಂಪ್ ಸೆಟ್ಟ ಅಳವಡಿಸಿದ್ದಾರೆ

ಸೋಲಾರ್ ಪಂಪ್ ಸೆಟ್ಟ ಅಳವಡಿಸಿದ್ದಾರೆ

ಜಮೀನಿನಲ್ಲಿ 5 ಅಶ್ವಶಕ್ತಿ ಸಾರ್ಮಥ್ಯದ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಇದರಿಂದ 5 ಗಂಟೆಗಳ ಕಾಲ ಈ ಪಂಪಸೆಟ್‌ನಿಂದ ಬೆಳೆಗಳಿಗೆ ವಿದ್ಯುತ್ ಕಡಿತಗೊಂಡರೂ ವಿವಿಧ ಬೆಳೆಗಳಿಗೆ ನೀರು ಹರಿಸಲು ಸಹಾಯಕವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kalaburagi district Afzalpur based farmer Shivasharanappa cultivated Tomato in polyhouse in 1 acre of land. Here are the success story.
Please Wait while comments are loading...