ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ : ತರಕಾರಿ ಬೆಳೆ ಮಧ್ಯೆ ಗಾಂಜಾ

By Manjunatha
|
Google Oneindia Kannada News

ಕಲಬುರಗಿ, ನವೆಂಬರ್ 27 : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪೂರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಹಚ್ಚ ಹಸಿರು ಮೈದಳಿಸಿತ್ತು. ಅದನ್ನು ನೋಡಿದ ಜನರು ಯಾರಪ್ಪ ಈ ರೈತರು ಎಷ್ಟೊಂದು ಚೆನ್ನಾಗಿ ಬೆಳೆ ಬೆಳದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಜಮೀನಿನ ಅಸಲಿಯತ್ತನ್ನು ಇಂದು‌(ನವೆಂಬರ್ 27) ಚಿತ್ತಾಪುರ ಠಾಣೆಯ ಸಿಪಿಐ ಶಂಕರಗೌಡ ಪಾಟೀಲರು ಬಯಲು ಮಾಡಿದ್ದಾರೆ.

ಕಲಬುರಗಿಯಲ್ಲಿ ನ.24ರಿಂದ ಹೆಲ್ಮೆಟ್ ಕಡ್ಡಾಯಕಲಬುರಗಿಯಲ್ಲಿ ನ.24ರಿಂದ ಹೆಲ್ಮೆಟ್ ಕಡ್ಡಾಯ

ಹೌದು ಕೃಷಿ ಜಮೀನಿನಲ್ಲಿ ತರಕಾರಿ ಜತೆ ಗಾಂಜಾ ಬೆಳೆದ ರೈತರ ಜಮೀನಿನ ಮೇಲೆ ದಾಳಿ ನಡೆಸಿದ ಚಿತ್ತಾಪುರ ಠಾಣೆಯ ಸಿಪಿಐ ಶಂಕರಗೌಡ ಹಾಗೂ ಅವರ ಸಿಬ್ಬಂದಿ 74 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೆ ಗಾಂಜಾ ಬೆಳದಿದ್ದ ಇಬ್ಬರು ರೈತರನ್ನು ಬಂಧಿಸಿದ್ದಾರೆ.‌

Police sizes 70 k.g's fresh Marijuvana in Kalaburagi

ಮೋನಪ್ಪ ಬೇವಿನಹಳ್ಳಿ, ನೀಲಕಂಠ ಬೇವಿನಹಳ್ಳಿ, ಬಂಧಿತ ಆರೋಪಿಗಳು.‌ ಗಾಂಜಾ ಬೆಳೆದಿದ್ದ ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ. ಈ ಬಗ್ಗೆ ವಾಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಬೆಳೆಯುವದು ಮತ್ತು ಮಾರಾಟ ಮಾಡುವುದು ಅಕ್ರಮ. ಆದರೂ ಕೆಲವರು ಕೃಷಿ ಜಮೀನಿನಲ್ಲಿ, ಹೊಲದ‌ ಸುತ್ತ ತರಕಾರಿ ಬೆಳೆದು, ಮಧ್ಯದಲ್ಲಿ ಗಾಂಜಾ ಬೆಳೆ ಬೆಳೆದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

English summary
In Kalaburgi police rides on some agriculture land and sized Marijuvana plants and arrested 2 farmers for growing Marijuvana plants in thier agriculture field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X