ಕಲಬುರಗಿ-ಹೈದರಾಬಾದ್ ಇಂಟರ್‌ಸಿಟಿ ರೈಲು ಸೇವೆ ಮತ್ತೆ ಆರಂಭ

Posted By:
Subscribe to Oneindia Kannada

ಕಲಬುರಗಿ, ಆಗಸ್ಟ್ 08 : ಕಲಬುರಗಿ-ಹೈದರಾಬಾದ್ ನಡುವಿನ ಇಂಟರ್‌ಸಿಟಿ ರೈಲು ಸೇವೆಯನ್ನು ಪುನಃ ಆರಂಭಿಸಲಾಗಿದೆ. 2016ರ ಫೆಬ್ರವರಿಯಲ್ಲಿ ಆರಂಭಿಸಲಾಗಿದ್ದ ಸೇವೆಯನ್ನು ಪ್ರಯಾಣಿಕರ ಕೊರತೆ ಕಾರಣದಿಂದಾಗಿ ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು.

ಸೋಮವಾರ ಬೆಳಗ್ಗೆ 10.15ಕ್ಕೆ ಇಂಟರ್‌ಸಿಟಿ ರೈಲು ಕಲಬುರಗಿಯಿಂದ ಹೈದರಾಬಾದ್‌ಗೆ ಸಂಚಾರ ಆರಂಭಿಸಿತು. ಶಾಹಾಬಾದ್‌‌‌‌‌‌‌‌, ವಾಡಿ, ತಾಂಡೂರ, ವಿಕಾರಾಬಾದ್‌‌‌‌‌, ಲಿಂಗಪಲ್ಲಿ ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ. ರೈಲಿನಲ್ಲಿ 2 ಎಸಿ, 2 ಸ್ಲೀಪರ್‌‌‌‌‌‌‌‌‌‌‌ ಸೇರಿದಂತೆ ಒಟ್ಟು 13 ಬೋಗಿಗಳಿವೆ.[ಮಂಗಳೂರು ರೈಲು ನಿಲ್ದಾಣದಲ್ಲಿ ಸುರಕ್ಷತೆ ಕಾಪಾಡಲು ಸಿಬ್ಬಂದಿ ಕೊರತೆ]

kalaburagi

ವೇಳಾಪಟ್ಟಿ : ಕಲಬುರಗಿಯಿಂದ ಪ್ರತಿದಿನ ಬೆಳಗ್ಗೆ 10.15ಕ್ಕೆ ಹೊರಡುವ ರೈಲು ಮಧ್ಯಾಹ್ನ 2.15ಕ್ಕೆ ಹೈದರಾಬಾದ್ ತಲುಪಲಿದೆ. ಸಂಜೆ 4 ಗಂಟೆಗೆ ಹೈದರಾಬಾದ್‌ನಿಂದ ಹೊರಡುವ ರೈಲು ರಾತ್ರಿ 9 ಗಂಟೆಗೆ ಕಲಬುರಗಿಗೆ ಬಂದು ತಲುಪಲಿದೆ.[ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ]

ಸೇವೆ ಸ್ಥಗಿತಗೊಂಡಿತ್ತು : 2016ರ ಫೆಬ್ರವರಿಯಲ್ಲಿ ಕಲಬುರಗಿ-ಹೈದರಾಬಾದ್ ನಡುವೆ ಇಂಟರ್‌ ಸಿಟಿ ರೈಲು ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆ ಕಾರಣ ಮಾರ್ಚ್‌ನಲ್ಲಿ ಸಂಚಾರ ಸ್ಥಗಿತಗೊಂಡಿತ್ತು.[ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]

ಹಿಂದಿನ ವೇಳಾಪಟ್ಟಿಯಂತೆಯೇ ರೈಲು ಸೇವೆಯನ್ನು ಪುನಃ ಆರಂಭಿಸಲಾಗಿದೆ. ರೈಲು ಸಂಚಾರದ ಸಮಯವನ್ನು ಬದಲಾವಣೆ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian railways re-introduce the Kalaburagi-Hyderabad inter-city express train from August 8, 2016. Train will depart from Kalaburagi at 10.15 a.m. and reach Hyderabad at 2.50 p.m. and from Hyderabad it would start from 4 p.m. and reach Kalaburagi at 9 p.m.
Please Wait while comments are loading...