ಉಕ್ರೇನ್ ವಿರುದ್ಧ ಸೆಡ್ಡು ಹೊಡೆದ ರಷ್ಯಾ ಬತ್ತಳಿಕೆಯಲ್ಲಿ ಮಸ್ಕಿರೋವ್ಕಾ ಅಸ್ತ್ರ

ಕೀವ್, ಮಾರ್ಚ್ 2: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ನಡೆಸುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮದೇ ವಾದ ಮಂಡಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಉಕ್ರೇನ್ ನೆಲದ ಕೀವ್ ನಗರದಲ್ಲಿ ನಡೆಯುತ್ತಿರುವ ನರಮೇಧ ಮತ್ತು ಆಡಳಿತ ನಿಂದನೆ ವಿರುದ್ಧ ದಾಳಿ ನಡೆಸುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ವಿರುದ್ಧ ಯುದ್ಧ ಘೋಷಿಸುವ ಸಂದರ್ಭದಲ್ಲಿ ಪುಟಿನ್ ಭಾಷಣದಲ್ಲಿ ಉಲ್ಲೇಖಿಸಿದ ಕೆಲವು ಅಂಶಗಳನ್ನು ಮುಂದೆ ತಿಳಿಸಲಾಗಿದೆ.

"ನಾವು ಉಕ್ರೇನಿಯನ್ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಯೋಜನೆಯನ್ನು ಹೊಂದಿಲ್ಲ. ರಷ್ಯಾ ಉದ್ದೇಶಪೂರ್ವಕವಾಗಿ ಯಾರ ಮೇಲೂ ಏನನ್ನೂ ಹೇರುವುದಕ್ಕೆ ಬಯಸುವುದಿಲ್ಲ," ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.

ನಮ್ಮ ವಿರುದ್ಧ ನಿಂತರವರಿಗೆ ಉತ್ತರ ನೀಡುತ್ತಿದ್ದೇವೆ

ನಮ್ಮ ವಿರುದ್ಧ ನಿಂತರವರಿಗೆ ಉತ್ತರ ನೀಡುತ್ತಿದ್ದೇವೆ

ಇಂದು ನಡೆಯುತ್ತಿರುವ ಬೆಳವಣಿಗೆಗಳು ಉಕ್ರೇನ್ ಮತ್ತು ಉಕ್ರೇನಿಯನ್ ಅವರ ಹಿತಾಸಕ್ತಿಯನ್ನು ಉಲ್ಲಂಘಿಸುವ ಉದ್ದೇಶವನ್ನು ಹೊಂದಿಲ್ಲ. ಇದು ರಷ್ಯಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನವಾಗಿದೆ. ರಷ್ಯಾದ ವಿರುದ್ಧ ಉಕ್ರೇನ್ ತನ್ನ ಜನರನ್ನು ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದು, ಇದಕ್ಕೆ ನಾವು ಸರಿಯಾಗಿ ಉತ್ತರ ನೀಡುತ್ತಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾದ ಕಪಟ ಯುದ್ಧನೀತಿ ಬಗ್ಗೆ ಉಲ್ಲೇಖ

ರಷ್ಯಾದ ಕಪಟ ಯುದ್ಧನೀತಿ ಬಗ್ಗೆ ಉಲ್ಲೇಖ

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಮೂಲಕ ಇತ್ತೀಚಿನ ಕ್ರಮಗಳ ಕುರಿತು ಅಧ್ಯಕ್ಷ ಪುಟಿನ್ ನೀಡುವ ಹೇಳಿಕೆಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಈ ಹಳೆಯ ಯುದ್ಧನೀತಿಯನ್ನು "ಮಸ್ಕಿರೋವ್ಕಾ" ಎಂದು ಹೇಳಲಾಗುತ್ತದೆ. "ಮಾಸ್ಕಿರೋವ್ಕಾ" ಅದರ ಅಕ್ಷರಶಃ ಇಂಗ್ಲಿಷ್ ಅನುವಾದದಿಂದ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮಾಸ್ಕಿರೋವ್ಕಾ ಅಂದರೆ 'ಏನನ್ನಾದರೂ ಮರೆಮಾಚುವುದು'" ಎಂದು ಲೇಖಕ ಮತ್ತು ಮಾಹಿತಿ ಯುದ್ಧ ಮತ್ತು ಸೈಬರ್ ಸುರಕ್ಷತೆಯ ವಿಷಯದ ಬಗ್ಗೆ ಪರಿಣಿತರಾಗಿರುವ IPS ಅಧಿಕಾರಿ ಬ್ರಿಜೇಶ್ ಸಿಂಗ್ ಹೇಳಿದ್ದಾರೆ.

ರಷ್ಯಾದ ಶಸ್ತ್ರಾಗಾರದಲ್ಲಿ ಮಸ್ಕಿರೋವ್ಕಾ

ರಷ್ಯಾದ ಶಸ್ತ್ರಾಗಾರದಲ್ಲಿ ಮಸ್ಕಿರೋವ್ಕಾ

ಕಳೆದ ಹಲವು ಶತಮಾನಗಳಿಂದ ರಷ್ಯಾದ ಮಿಲಿಟರಿ ಶಸ್ತ್ರಾಗಾರದಲ್ಲಿ ಮಸ್ಕಿರೋವ್ಕಾ ಇದೆ. ಐಪಿಎಸ್ ಅಧಿಕಾರಿ ಬ್ರಿಜೇಶ್ ಸಿಂಗ್ ಹಂಚಿಕೊಂಡ ಆಸಕ್ತಿದಾಯಕ ಇತಿಹಾಸದಿಂದ ಮಸ್ಕಿರೋವ್ಕಾ ಬಗ್ಗೆ ನಾವು ತಿಳಿದುಕೊಳ್ಳಬಹುದು. ಈ ಯುದ್ಧನೀತಿಯಲ್ಲಿ ಶತ್ರುಗಳ ದಾರಿ ತಪ್ಪಿಸುವುದಕ್ಕಾಗಿ ಮರೆ ಮಾಚುವ, ನಿರಾಕರಿಸುವ ಹಾಗೂ ತಪ್ಪು ಮಾಹಿತಿಯನ್ನು ನೀಡುವುದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಕಮ್ಯುನಿಸ್ಟ್ ಯುಗಕ್ಕೂ ಮೊದಲೇ ಶತಮಾನಗಳಿಂದಲೂ ರಷ್ಯಾದ ಗುಪ್ತಚರ ಇಲಾಖೆ ಭಾಗವಾಗಿದೆ. ಇದನ್ನು ವಾಸ್ತವವಾಗಿ ಝಾರ್ ನಿಕೋಲಸ್ II ಸ್ಥಾಪಿಸಿದ ಮಿಲಿಟರಿ ಶಾಲೆಯಲ್ಲಿ ಕಲಿಸಲಾಗುತ್ತದೆ.

ಗುಪ್ತಚರ ಏಜೆನ್ಸಿಗಳಿಂದ ಪ್ರಭಾವಿತ

ಗುಪ್ತಚರ ಏಜೆನ್ಸಿಗಳಿಂದ ಪ್ರಭಾವಿತ

"ರಷ್ಯನ್ನರು ಮಾತ್ರ ಇದನ್ನು ಬಳಸುತ್ತಿಲ್ಲ. ಪ್ರಪಂಚದಾದ್ಯಂತ ಗುಪ್ತಚರ ಸಂಸ್ಥೆಗಳು ಈ ಯುದ್ಧತಂತ್ರವನ್ನು ಬಳಸುತ್ತವೆ. ಶತ್ರುಗಳ ಮೇಲೆ ತಮ್ಮ ಇಚ್ಛೆಯನ್ನು ಬಲವಂತಪಡಿಸಲು 'ಸಕ್ರಿಯ ಕ್ರಮಗಳು' ಅಥವಾ ಮಾನಸಿಕ ಕಾರ್ಯಾಚರಣೆ ಎಂದು ಕರೆಯಲಾಗುತ್ತದೆ," ಎಂದರು. ಆದರೆ ಈ ತಂತ್ರದಲ್ಲಿ ರಷ್ಯಾದ ಬಲ ವಿಭಿನ್ನವಾಗಿದೆ. ಆದಾಗ್ಯೂ, ರಷ್ಯಾದ ಕಾರ್ಯತಂತ್ರದ ಮಾಸ್ಕಿರೋವ್ಕಾ ಪರಿಕಲ್ಪನೆ ಶತ್ರುಗಳ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಪೂರ್ವಭಾವಿಯಾಗಿದೆ. 'ಪ್ರತಿಫಲಿತ ನಿಯಂತ್ರಣ' ಸಿದ್ಧಾಂತವನ್ನು ಬಳಸುವ ಮೂಲಕ ಶತ್ರುವಿನ ದಾರಿ ತಪ್ಪಿಸುವುದಕ್ಕಾಗಿ ಕುಶಲತೆಯಿಂದ ಮೊದಲೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಂತಹ 'ಮಾಹಿತಿಯು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಗೆಲ್ಲಲು ಬಳಸಲಾಗುತ್ತದೆ. ಇದರ ಜೊತೆಗೆ ದಿಕ್ಕು ತಪ್ಪಿಸುವ ಮೂಲಕ ದೇಶೀಯ ಜನರನ್ನು ಉತ್ತೇಜಿಸಲು ಬಳಸಲಾಗುತ್ತದೆ," ಎಂದು ಸಿಂಗ್ ವಿವರಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+