Cambodia vs Thailand War: ಕಾಂಬೋಡಿಯಾ - ಥೈಲ್ಯಾಂಡ್ ನಡುವೆ ಶುರುವಾಯ್ತು ಯುದ್ಧ, ಕ್ಷಿಪಣಿಗಳ ಸುರಿಮಳೆ!
Cambodia vs Thailand War: ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ನಿಂತಿದೆ ಎನ್ನುವಾಗಲೇ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ಇದೀಗ ಮಿತ್ರ ರಾಷ್ಟ್ರಗಳಾಗಿದ್ದ ಕಂಬೋಡಿಯಾ ಹಾಗೂ ಥೈಲ್ಯಾಂಡ್‌ನ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು ಯಾವುದೇ ಕ್ಷಣದಲ್ಲಾದರೂ ಭಾರೀ ದೊಡ್ಡ ಮಟ್ಟದ ಯುದ್ಧ ನಡೆಯಬಹುದು ಎಂದೇ ಹೇಳಲಾಗುತ್ತಿದೆ. ಇದರ ನಡುವೆ ಥೈಲ್ಯಾಂಡ್ ಸೇನೆಯು ಆರು F-16 ಜೆಟ್‌ಗಳಲ್ಲಿ ಒಂದನ್ನು ಕಾಂಬೋಡಿಯಾದ ಮೇಲೆ ಉಡಾಯಿಸಿದೆ. ಅಲ್ಲದೇ ಕಾಂಬೋಡಿಯಾ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಗುರುವಾರ ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ಗಡಿಯಲ್ಲಿ F-16 ಫೈಟರ್ ಜೆಟ್‌ಗಳನ್ನು ನಿಯೋಜನೆ ಮಾಡಲಾಗಿದೆ. ರಾಯಲ್ ಥಾಯ್ ಸೇನೆಯು ಕಾಂಬೋಡಿಯಾ ವಿವಾದಿತ ಗಡಿಯ ಈಶಾನ್ಯ ಭಾಗದ ಬಳಿಯ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ವರದಿಯಾಗಿದೆ. ಥಾಯ್ (ಥೈಲ್ಯಾಂಡ್) ಸೇನೆಯು ಇಂದು ಎರಡೂ ದೇಶಗಳ ವಿವಾದಿತ ಪ್ರದೇಶದಲ್ಲಿ ಆರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ ಎಂದು ಹೇಳಲಾಗಿದೆ. ಥಾಯ್ ಸೇನೆಯ ಪ್ರಕಾರ, ಆರು F-16 ಜೆಟ್‌ಗಳಲ್ಲಿ ಒಂದನ್ನು ಕಾಂಬೋಡಿಯಾದ ಮೇಲೆ ಉಡಾವಣೆ ಮಾಡಲಾಗಿದೆ.

ನಾವು ಉದ್ದೇಶಿಸಿದಂತೆಯೇ ಮಿಲಿಟರಿ ಗುರಿಗಳ ವಿರುದ್ಧ ವಾಯುಸೇನೆಯ ಬಲವನ್ನು ಬಳಸಿದ್ದೇವೆ ಎಂದು ಥಾಯ್ ಸೇನೆಯ ಉಪ ವಕ್ತಾರೆ ರಿಚಾ ಸುಕ್ಸುವಾನನ್ ಅವರು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಗಡಿಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕಾಂಬೋಡಿಯನ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಥೈಲ್ಯಾಂಡ್ ಭಾರೀ ಶಸ್ತ್ರಾಸ್ತ್ರಗಳು, ವಾಯುದಾಳಿಗಳು ಮತ್ತು ರಾಕೆಟ್‌ಗಳನ್ನು ಬಳಸುತ್ತಿದೆ ಎಂದು ಕಾಂಬೋಡಿಯಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಆರೋಪ ಮಾಡಿದೆ.
ಯುದ್ಧಕ್ಕೆ ಕಾರಣವೇನು ?
ಥೈಲ್ಯಾಂಡ್ ಹಾಗೂ ಕಾಂಬೋಡಿಯಾ ಗಡಿಯಲ್ಲಿರುವ 1,000 ವರ್ಷ ಹಳೆಯ ಹಿಂದೂ ದೇವಾಲಯ
ವೊಂದರಲ್ಲಿ ಡ್ರೋನ್ ದಾಳಿ ಆಗಿದೆ. ಕ್ಷಿಪಣಿ ಮತ್ತು ವೈಮಾನಿಕ ದಾಳಿ ನಡೆದ ನಂತರ ಭಾರೀ ಘರ್ಷಣೆಗಳು ನಡೆದಿವೆ. ಕನಿಷ್ಠ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಕುಸಿದಿವೆ. ಗಡಿ ವಿಚಾರವಾಗಿ ಈ ಸಂಘರ್ಷ ಉಂಟಾಗಿದೆ ಎಂದು ಹೇಳಲಾಗಿದೆ.
ಎರಡು ದೇಶಗಳ ನಡುವೆ ಸಂಘರ್ಷ: ಇನ್ನು ವಿಶ್ವದಲ್ಲಿ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ರಷ್ಯಾ - ಉಕ್ರೇನ್ ಹಾಗೂ ಇರಾನ್ - ಇಸ್ರೇಲ್ ದೇಶಗಳ ನಡುವೆ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಆದರ ನಡುವೆಯೇ ಇದೀಗ ಥೈಲ್ಯಾಂಡ್ ಹಾಗೂ ಕಾಂಬೋಡಿಯಾ ನಡುವೆ ಯುದ್ಧ ಏರ್ಪಟ್ಟಿರುವುದು ವಿಶ್ವದಲ್ಲಿ ಭಾರೀ ತಲೆನೋವನ್ನು ತಂದೊಡ್ಡಿದೆ. ಈಗಾಗಲೇ ವಿವಿಧ ರಾಷ್ಟ್ರಗಳ ನಡುವಿನ ಸಂಘರ್ಷವು ಭಾರೀ ದೊಡ್ಡ ನಷ್ಟವನ್ನು ತಂದೊಡ್ಡಿದೆ. ಇದೀಗ ಈ ರಾಷ್ಟ್ರಗಳ ನಡುವೆ ಯುದ್ಧ ಮತ್ತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬೆಲೆ ಏರಿಕೆ ಅಥವಾ ಭೌಗೋಳಿಕ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications