ರಷ್ಯಾಗೆ ಉಕ್ರೇನ್‌ ಭರ್ಜರಿ ಪ್ರತ್ಯುತ್ತರ: ಮಾರಣಾಂತಿಕ ದಾಳಿಗೆ ಅತ್ಯಂತ ಅಪಾಯಕಾರಿ ಯುದ್ಧ ವಿಮಾನ ನಾಶ

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತೇ ಇಲ್ಲ. ಉಭಯ ದೇಶಗಳಲ್ಲಿ ಇನ್ನು ಭಯ ಮನೆ ಮಾಡಿದೆ. ಒಂದು ಕಡೆಯಲ್ಲಿ ರಷ್ಯಾ, ಪದೇ ಪದೇ ಉಕ್ರೇನ್‌ ಮೇಲೆ ವಾರ್‌ ಮಾಡುತ್ತಲೇ ಇದೆ. ಈಗ ಉಭಯ ದೇಶಗಳ ಜನರಲ್ಲಿ ಭಯದ ವಾತಾವರಣ ಇರುವುದಂತೂ ಸುಳ್ಳಲ್ಲ.

ಇತ್ತೀಚಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರಗೊಂಡಿದೆ. ಈ ಮಧ್ಯೆ ಉಕ್ರೇನ್‌ ಸಹ ಕೈ ಕಟ್ಟಿ ಕುಳಿತಿಲ್ಲ. ಅದು ಸಹ ಪ್ರತಿ ದಾಳಿಯನ್ನು ಸಹ ನಡೆಸುತ್ತಿದೆ. ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನ, ಉಕ್ರೇನ್ ಸೇನಾ ಪಡೆಗಳು ವಾಯುಪಡೆಯ ನೆಲೆಯ ಬಳಿ ನಿಂತಿದ್ದು, ಅದರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದೆ. ಅಮೇರಿಕನ್ ಮಾಧ್ಯಮ ಸಂಸ್ಥೆ ಸಿಎನ್ಎನ್ ಪ್ರಕಾರ, ಈ ದಾಳಿಯಲ್ಲಿ, ರಷ್ಯಾದ ಹೊಸ ಮತ್ತು ಅತ್ಯಾಧುನಿಕ ಯುದ್ಧ ವಿಮಾನ ಸುಖೋಯ್ -57 ಅನ್ನು ಉಕ್ರೇನಿಯನ್ ಸೇನೆಯು ಡ್ರೋನ್ ಸಹಾಯದಿಂದ ಸ್ಫೋಟಿಸಿತು.

Ukraine Strikes Russia s Advanced Su-57 Fighter Jet for the First Time

ಯುದ್ಧದ ಸ್ಥಳದಿಂದ 600 ಕಿಲೋಮೀಟರ್ ದೂರದಲ್ಲಿರುವ ರಷ್ಯಾದ ಅಸ್ಟ್ರಾಖಾನ್ ನಗರದ ವಾಯುನೆಲೆಯ ಮೇಲೆ ಉಕ್ರೇನಿಯನ್ ಸೇನೆಯು ಈ ದಾಳಿಯನ್ನು ನಡೆಸಿದೆ ಎಂದು ತಿಳಿದು ಬಂದಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ Su-57 ಒಂದಾಗಿದೆ. ಈ ವಿಮಾನ ಗಂಟೆಗೆ 2,130 ಕಿಲೋಮೀಟರ್ ವೇಗವನ್ನು ಹೊಂದಿದೆ.

ದಾಳಿಯ ಉಪಗ್ರಹ ಚಿತ್ರವೂ ಬಹಿರಂಗವಾಗಿದೆ, ಇದರಲ್ಲಿ ಜೂನ್ 7 ರಂದು ಅಸ್ಟ್ರಾಖಾನ್ ವಾಯುನೆಲೆಯಲ್ಲಿ Su -57 ಕಾಣಿಸಿಕೊಂಡಿದೆ, ಆದರೆ ಜೂನ್ 8 ರಂದು ಅದೇ ಸ್ಥಳದಲ್ಲಿ ಬೆಂಕಿ ಮತ್ತು ಹೊಗೆ ಏರುತ್ತಿರುವುದು ಕಂಡುಬಂದಿದೆ. ದಾಳಿಯು ಎಷ್ಟು ಭೀಕರವಾಗಿತ್ತು ಎಂದರೆ ಹತ್ತಿರದಲ್ಲಿ ಬಿದ್ದ ಹೊಂಡಗಳು ಮಾತ್ರ ಗೋಚರಿಸುತ್ತವೆ.

ಉಕ್ರೇನ್ ಮಾರಣಾಂತಿಕ ದಾಳಿ

ಉಕ್ರೇನ್‌ನ ಪ್ರಮುಖ ಮಿಲಿಟರಿ ಗುಪ್ತಚರ ಸೇವೆಯು ಉಪಗ್ರಹ ಚಿತ್ರಗಳನ್ನು ಹಂಚಿಕೊಂಡಿದ್ದು ಅದು ದಾಳಿಯ ನಂತರದ ಪರಿಸ್ಥಿತಿಯನ್ನು ತೋರಿಸುತ್ತದೆ. ಉಕ್ರೇನ್ ನಡೆಸಿದ ಈ ದಾಳಿ ದೃಢಪಟ್ಟರೆ, Su-57 ಯುದ್ಧ ವಿಮಾನದ ಮೇಲೆ ಉಕ್ರೇನ್ ನಡೆಸಿದ ಮೊದಲ ಯಶಸ್ವಿ ದಾಳಿ ಇದಾಗಿದೆ. ಸುಖೋಯ್ ಟ್ವಿನ್ ಇಂಜಿನ್ ಸ್ಟೆಲ್ತ್ ಫೈಟರ್ ಏರ್‌ಕ್ರಾಫ್ಟ್ ಆಗಿದ್ದು, ಇದನ್ನು ರಷ್ಯಾದ ಅತ್ಯಾಧುನಿಕ ಮಿಲಿಟರಿ ವಿಮಾನ ಎಂದು ಪರಿಗಣಿಸಲಾಗಿದೆ. ಇದು ಉಕ್ರೇನ್‌ನಿಂದ ರಷ್ಯಾದ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

ಡ್ರೋನ್‌ಗಳ ಬಳಕೆ

ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಮುಖ್ಯ ಗುಪ್ತಚರ ನಿರ್ದೇಶನಾಲಯದ ಪ್ರಕಾರ, ದಕ್ಷಿಣ ರಷ್ಯಾದ ಅಖ್ತುಬಿನ್ಸ್ಕ್ ನೆಲೆಯಲ್ಲಿ ಶನಿವಾರದಂದು ದಾಳಿ ನಡೆದಿದೆ. ಇದು ಫಾರ್ವರ್ಡ್ ಪೋಸ್ಟ್‌ನಿಂದ ಸುಮಾರು 589 ಕಿಲೋಮೀಟರ್ ದೂರದಲ್ಲಿದೆ. ಈ ವಿಮಾನವನ್ನು ಹೊಡೆದುರುಳಿಸಲು ಉಕ್ರೇನ್‌ ಯಾವ ಶಸ್ತ್ರ ಬಳಸಿದೆ ಎಂದು ಇನ್ನು ಬಹಿರಂಗವಾಗಿಲ್ಲ. ಉಕ್ರೇನ್‌ನಿಂದ ವಾಯುಪಡೆಯ ನೆಲೆಯ ದೂರವನ್ನು ಪರಿಗಣಿಸಿ, ಈ ದಾಳಿಗೆ ಡ್ರೋನ್‌ಗಳನ್ನು ಬಳಸಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+