Ukraine War: ಅತ್ತ ಮುಳ್ಳು, ಇತ್ತ ಬೆಂಕಿ... ವಿಲವಿಲ ಒದ್ದಾಡುತ್ತಿರುವ ಉಕ್ರೇನ್!
ಉಕ್ರೇನ್ ಬಾಯಲ್ಲಿ ಬಿಸಿ ತುಪ್ಪ ಬಿದ್ದಿದೆ, ಅತ್ತ ಉಗುಳುವುದಕ್ಕೂ ಆಗಲ್ಲ & ಇತ್ತ ಅದನ್ನ ನುಂಗಿ ಅರಗಿಸಿಕೊಳ್ಳಲು ಕೂಡ ಆಗಲ್ಲ. ಹೀಗೆ ದೊಡ್ಡ ಸಮಸ್ಯೆ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಉಕ್ರೇನ್ ದೇಶಕ್ಕೆ ರಷ್ಯಾ ದೇಶದ ಜೊತೆಗೆ ಶಾಂತಿ ಮಾತುಕತೆ ಮಾಡಲು ಇಷ್ಟವೇ ಇಲ್ಲ. ಹೀಗಿದ್ದರೂ ಈ ಪರಿಸ್ಥಿತಿ & ಸಂಕಷ್ಟದ ವಾತಾವರಣದಲ್ಲಿ ಅನಿವಾರ್ಯ ಕಾರಣಗಳಿಗೆ ರಷ್ಯಾ ಜೊತೆಗೆ ಶಾಂತಿಯ ಒಪ್ಪಂದ ಮಾಡಿಕೊಳ್ಳುವ ಸಂಕಷ್ಟ ಎದುರಾಗಿದೆ.
ಅದರಲ್ಲೂ ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಉಕ್ರೇನ್ & ರಷ್ಯಾ ನಡುವೆ ಶಾಂತಿ ಮಾತುಕತೆಗೆ ಮುಂದಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಲವಿಲ ಒದ್ದಾಡುತ್ತಿದೆ ಉಕ್ರೇನ್ ಸೇನೆ. ಪ್ರಮುಖವಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ವಿಚಾರದಲ್ಲಿ ಶಾಂತಿ ಮಾತುಕತೆ ಬೇಕಾ? ಎಂಬ ಗೊಂದಲದಲ್ಲಿ ಇರುವಾಗಲೇ ಮಹತ್ವದ ಮೆಸೇಜ್ ಕೊಟ್ಟಿದೆ ರಷ್ಯಾ. ಹಾಗಾದರೆ ರಷ್ಯಾಗೆ ಈಗ ಉಳಿದಿರುವ ದಾರಿ ಏನು? ಉಕ್ರೇನ್ ಏನು ಮಾಡಬಹುದು? ಎಂಬ ಚರ್ಚೆ ಜೋರಾಗಿದೆ.

2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ವಾರ್...
ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತೋ ಅಲ್ಲಿಂದ ಮುಂದೆ ಭಾರಿ ದೊಡ್ಡ ಗಲಭೆ ಶುರುವಾಯ್ತು. ಉಕ್ರೇನ್ ದೇಶವನ್ನು ನಡುಗಿಸಲು ಮುಂದೆ ನುಗ್ಗಿದ್ದ ರಷ್ಯಾ ಸೇನೆ ಜಾಗತಿಕವಾಗಿ ಕೂಡ ಕೆಟ್ಟ ಹೆಸರು ಪಡೆದು, ಜೋ ಬೈಡನ್ ಆಡಳಿತದಲ್ಲಿ ಇದ್ದಾಗ ಹಲವು ನಿರ್ಬಂಧ ಎದುರಿಸಿ ನಿಲ್ಲಬೇಕಾದ ಸ್ಥಿತಿಗೆ ಬಂದಿತ್ತು.
2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಈ ಕದನ ಇನ್ನೇನು 4 ವರ್ಷ ಪೂರೈಸುವ ಸನಿಹದಲ್ಲೇ ಇದೆ. ಇಷ್ಟೆಲ್ಲಾ ಕಠಿಣ ಪರಿಸ್ಥಿತಿ ಇದ್ದರೂ ಉಕ್ರೇನ್ ಮಾತ್ರ ಈ ಸಮಯದಲ್ಲಿ ರಷ್ಯಾ ಜೊತೆಗೆ ಶಾಂತಿ ಮಾತುಕತೆ ಮಾಡಿಕೊಳ್ಳಲು ಬಿಲ್‌ಕುಲ್ ತಯಾರಿಲ್ಲ. ಇದು ಮತ್ತೆ ಅಮೆರಿಕದ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಉಕ್ರೇನ್ ಸೈಲೆಂಟ್ ಆಗಿ ನಮ್ಮ ಮಾತು ಕೇಳದೇ ಇದ್ದರೆ ಪರಿಸ್ಥಿತಿ ಸರಿ ಇರೋದಿಲ್ಲ ಎಂದು ಎಚ್ಚರಿಸಿದೆ.
ಎಚ್ಚರಿಕೆ ನೀಡಿದ ರಷ್ಯಾ ಸೇನೆ!
ಹಾಗೇ ಇದೇ ಸಮಯದಲ್ಲಿ ರಷ್ಯಾ ಸೇನೆ ಕೂಡ ಉಕ್ರೇನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಈ ವಿಚಾರದಲ್ಲಿ ಉಕ್ರೇನ್ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಅಕಸ್ಮಾತ್ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮುಂದಿಟ್ಟಿರುವ ಶಾಂತಿ ಮಾತುಕತೆ ಬೇಡ ಎಂದರೆ, ಭವಿಷ್ಯದಲ್ಲಿ ಉಕ್ರೇನ್‌ಗೆ ಸರಿಯಾಗೇ ಪಾಠ ಕಲಿಸುತ್ತೇವೆ ಎಂದಿದೆ ರಷ್ಯಾ. ಅಲ್ಲದೆ ಉಕ್ರೇನ್ ದೇಶದ ಮತ್ತಷ್ಟು ಪ್ರದೇಶಗಳನ್ನ ನಾವು ವಶ ಮಾಡಿಕೊಳ್ಳುತ್ತೇವೆ ಎಂದು ಕೂಡ ರಷ್ಯಾ ಇದೀಗ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಮೂಲಕ ರಷ್ಯಾ & ಉಕ್ರೇನ್ ವಾರ್ ಬಹುತೇಕ ಮುಗಿಯುವ ಹಂತಕ್ಕೆ ಬಂದು ನಿಂತಂತೆ ಕಾಣುತ್ತಿದೆ.












Click it and Unblock the Notifications