ರಷ್ಯಾ ಸೇನೆಯಿಂದ ಭೀಕರ ಕ್ಷಿಪಣಿ ದಾಳಿ, ಸ್ನೇಹಿತ ರಾಷ್ಟ್ರಗಳಿಗೆ ಹೊಸ ಬೇಡಿಕೆ ಇಟ್ಟ ಉಕ್ರೇನ್ | Ukraine Peace
ರಷ್ಯಾ ಸೇನೆ ಇದೀಗ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭಾರಿ ಘೋರವಾಗಿ ದಾಳಿ ಆರಂಭ ಮಾಡಿದೆ. ಈ ಬಾರಿ ಉಕ್ರೇನ್ ವಿರುದ್ಧ ಬೃಹತ್ ಕ್ಷಿಪಣಿಗಳ ಮೂಲಕ ಕಠಿಣವಾದ ಅಟ್ಯಾಕ್ ನಡೆಸುತ್ತಿರುವ ರಷ್ಯಾ ಮಿಲಿಟರಿ ಭಾರಿ ದೊಡ್ಡ ವಿನಾಶ ಸೃಷ್ಟಿ ಮಾಡುತ್ತಿದೆ ಎಂಬುದು ಉಕ್ರೇನ್ ಆರೋಪ. ಇದನ್ನ ಮೀರಿ ಮತ್ತೊಂದು ಕಡೆ ಉಕ್ರೇನ್ ನೆಲದಲ್ಲಿ ಎಲ್ಲಾ ನಾಶವಾಗಿ ಹೋಗುತ್ತಿದ್ದು, ಜನರು ವಿದ್ಯುತ್ ಹಾಗೂ ಮೂಲಸೌಕರ್ಯ ಇಲ್ಲದೆಯೇ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಸ್ನೇಹಿತ ರಾಷ್ಟ್ರಗಳಿಗೆ ಹೊಸ ಬೇಡಿಕೆ ಇಟ್ಟ ಉಕ್ರೇನ್ ಹೇಳಿರುವುದು ಏನು ಗೊತ್ತೆ? ಬನ್ನಿ ತಿಳಿಯೋಣ.
ಉಕ್ರೇನ್ ವಿರುದ್ಧ ದಿಢೀರ್ ರಷ್ಯಾ ಸೇನೆ ಸುಮಾರು 29 ಕ್ಷಿಪಣಿಗಳು ಹಾಗೂ 396 ಡ್ರೋನ್‌ಗಳನ್ನ ಬಳಸಿ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ. ಈ ದಾಳಿಯಲ್ಲಿ ಈಗಾಲೇ 26 ಜನರು ಗಾಯಗೊಂಡು, ಒಬ್ಬರು ಜೀವ ಬಿಟ್ಟಿರುವ ಬಗ್ಗೆ ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲೇ, ಅಗತ್ಯ ಕ್ರಮ ಕೈಗೊಂಡು ರಷ್ಯಾಗೆ ಈಗ ಪಾಠ ಕಲಿಸಬೇಕು ಎಂದು ಉಕ್ರೇನ್ ರೊಚ್ಚಿಗೆದ್ದಿದೆ. ಹೀಗೆಲ್ಲಾ ಸುಖಾಸುಮ್ಮನೆ ದಾಳಿ ಮಾಡುತ್ತಿರುವ ರಷ್ಯಾಗೆ ಈಗ ಪಾಠ ಕಲಿಸಬೇಕು ಎಂದು ತನ್ನ ಮಿತ್ರ ದೇಶಗಳ ಬಳಿ ಉಕ್ರೇನ್ ಈಗ ಭಾರಿ ದೊಡ್ಡ ಬೇಡಿಕೆ ಇಟ್ಟಿದೆ. ಒಂದು ಕಡೆ ಶಾಂತಿ ಮಾತುಕತೆ ನಡೆಯುವಾಗ ಇನ್ನೊಂದು ಕಡೆ ರಷ್ಯಾ ಸೇನೆ ಹೀಗೆ ಮಡುತ್ತಿರುವುದು ಸರಿಯಲ್ಲ ಎಂಬುದು ಉಕ್ರೇನ್‌ನ ವಾದ.

ಉಕ್ರೇನ್ ಮೂಲಸೌಕರ್ಯಕ್ಕೆ ಭಾರಿ ಹಾನಿ
ರಷ್ಯಾ ಸೇನೆ ಮೂಲಸೌಕರ್ಯಕ್ಕೆ ಭಾರಿ ಹಾನಿಯನ್ನ ಉಂಟುಮಾಡ್ತಿದೆ, ಎಂದು ಉಕ್ರೇನ್ ಆರೋಪಿಸುತ್ತ ಬಂದಿದೆ. ಅದರಲ್ಲೂ ರಷ್ಯಾ ದಾಳಿ ಮನೆ, ರಸ್ತೆ ಮತ್ತು ಸಾರ್ವಜನಿಕ ಕಟ್ಟಡಗನ್ನೇ ಟಾರ್ಗೆಟ್ ಮಾಡಿ ವಿದ್ಯುತ್ ಮೂಲಸೌಕರ್ಯಕ್ಕೆ ಕೂಡ ಭಾರಿ ಹಾನಿ ಮಾಡಿದೆ ಎಂಬುದು ಉಕ್ರೇನ್ ಆರೋಪ. ಹೀಗೆ, ಎಷ್ಟೆಲ್ಲಾ ಬಾಯಿ ಬಡಿದುಕೊಂಡರೂ, ಅದನ್ನು ತನ್ನ ಮಿತ್ರ ದೇಶಗಳೇ ಗಂಭೀರವಾಗಿ ಪರಿಗಣಿಸಿ & ಆ ಮೂಲಕ ಅಗತ್ಯ ಕ್ರಮ ಜಾರಿಗೆ ಮುಂದಾಗುತ್ತಿಲ್ಲ ಎಂಬ ಬೇಸರ ಕೂಡ ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಕಾಡುತ್ತಿದೆ. ಹಾಗೇ ಉಕ್ರೇನ್ ಪ್ರಜೆಗಳು ತಮ್ಮ ಜೀವ ಉಳಿಸಿಕೊಳ್ಳಲು ವಲಸೆ ಹೋಗುತ್ತಾ ಇದ್ದು, ಸ್ವತಃ ಉಕ್ರೇನ್ ರಾಜಧಾನಿ ಕೀವ್ ಕೂಡ ಈಗ ಖಾಲಿ ಖಾಲಿ ಆಗುತ್ತಿದೆ. ಇದು ಉಕ್ರೇನ್‌ನಲ್ಲಿ ಝೆಲೆನ್ಸ್ಕಿ ನೇತೃತ್ವದ ಸರ್ಕಾರಕ್ಕೆ ಹೊಸ ತಲೆನೋವು ತರಿಸುತ್ತಿದೆ.
ಆಸ್ಪತ್ರೆ ಹಾಗೂ ಶಾಲೆಗಳೂ ಬಂದ್
ರಷ್ಯಾ ಸೇನೆ ನಡೆಸುತ್ತಿರುವ ದಾಳಿ ಭೀಕರತೆ ಹೇಗೆ ಇದೆ ಎಂದರೆ, ಈಗಾಗಲೇ ಬಹುತೇಕ ಕಟ್ಟಡಕ್ಕೆ ಸಪ್ಲೈ ಆಗುತ್ತಿದ್ದ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಚಳಿಯ ಒತ್ತಡದಲ್ಲಿ ಉಕ್ರೇನ್ ಜನ ವಿದ್ಯುತ್ ಇಲ್ಲದೆ ಓಡಿ ಹೋಗುವ ವಾತಾವರಣ ಎದುರಾಗಿದೆ. ಅದರಲ್ಲೂ ಆಸ್ಪತ್ರೆ ಹಾಗೂ ಶಾಲೆಗಳೂ ಬಂದ್ ಆಗಿವೆ ವಿದ್ಯುತ್ ಸಂಪರ್ಕ ಇಲ್ಲದೆ. ಮತ್ತೊಂದು ಕಡೆ ಚಿಕಿತ್ಸೆ ಪಡೆಯಲು ಜನ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ನಿರ್ಮಾಣ ಆಗಿದೆ, ಇರುವ ಕೆಲವೇ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಸಾವಿನ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ ಎಂಬುದು ಉಕ್ರೇನ್ ಆರೋಪ. ಇದಕ್ಕೆಲ್ಲಾ ರಷ್ಯಾ ನಡೆಸುತ್ತಿರುವ ದಾಳಿ ಕಾರಣ ಎಂದು ಉಕ್ರೇನ್ ಆಕ್ರೋಶ ಹೊರಹಾಕುತ್ತಿದೆ.
ಯುರೋಪ್ ಸೇರಿದಂತೆ ಅಮೆರಿಕ ಹಾಗೂ ತನ್ನ ಇತರ ಮಿತ್ರ ರಾಷ್ಟ್ರಗಳ ಎದುರು ಈಗ ಉಕ್ರೇನ್‌ನ ಸರ್ಕಾರ ಮಹತ್ವದ ಬೇಡಿಕೆ ಇಟ್ಟಿದೆ. ಅಂದಹಾಗೆ ರಷ್ಯಾ ನಡೆಸುತ್ತಿರುವ ದಾಳಿಗೆ ಬ್ರೇಕ್ ಹಾಕಿಸಿ ಎಂಬ ಡಿಮ್ಯಾಂಡ್ ಇಡುತ್ತಿದೆ ಉಕ್ರೇನ್. ಆದರೆ ರಷ್ಯಾ ಈ ಮಾತು ಕೇಳುತ್ತಾ? ದಾಳಿ ನಿಲ್ಲಿಸುತ್ತಾ? ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಮೆರಿಕದ ಮಾತಿಗೇ ಕೇರ್ ಮಾಡದ ರಷ್ಯಾ, ಈಗ ಒತ್ತಡ ಹಾಕಿದರೆ ಕೇಳುವುದು ಅನುಮಾನ ಎಂಬ ಮಾತುಗಳು ಕೂಡ ಕೇಳಿಬಂದಿವೆ.












Click it and Unblock the Notifications