Israel-Iran War: ಇಸ್ರೇಲ್ ಸೇನೆಗೆ ಬಾಂಬ್ & ಗನ್ ಕೊಡುವುದನ್ನು ನಿಲ್ಲಿಸುತ್ತಾ ಅಮೆರಿಕ?

ಭೂಮಿ ನಾಶವಾಗುವುದು ಫಿಕ್ಸ್ ಆಗುತ್ತಿದೆ, ಎಲ್ಲಾ ಮುಗಿದು ಹೋಗುವ ಮುನ್ಸೂಚನೆಯು ಇದೀಗ ಸಿಗುತ್ತಿದೆ. ಯುದ್ಧದ ಹೆಸರಲ್ಲಿ ಮನುಷ್ಯ ಮಾಡಬಾರದ ಕೆಲಸ ಮಾಡುತ್ತಿದ್ದಾನೆ ಎಂದು ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿ ಹೋದರೂ ಇದೀಗ 3ನೇ ಮಹಾಯುದ್ಧ ಫಿಕ್ಸ್ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಇದೇ ಕಾರಣದಿಂದ ಎಲ್ಲೆಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲೇ ಅಮೆರಿಕ ಇಸ್ರೇಲ್ ಬಗ್ಗೆ ಈಗ ಬ್ರೇಕಿಂಗ್ ನ್ಯೂಸ್ ಒಂದು ಓಡಾಡುತ್ತಿದೆ.

ಮನುಷ್ಯರು ಈಗಾಗಲೇ 2 ಬಾರಿ ಮಹಾಯುದ್ಧ ಮಾಡಿ ಅರ್ಧ ನಾಶವಾಗಿ ಹೋಗಿದ್ದಾರೆ & ಭೂಮಿ ತಾಯಿಗೆ ಕೂಡ ಇದರಿಂದ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದಾರೆ. ಹೀಗಿದ್ದರೂ, ಈ ಹಾಳಾದ ಮನುಷ್ಯರಿಗೆ ನೆಮ್ಮದಿಯಾಗಿ ಬದುಕಬೇಕು ಎಂಬ ಆಸೆ ಇಲ್ಲ. ಇದೇ ಕಾರಣಕ್ಕಾಗಿ ಭೂಮಿಯನ್ನೇ ನಾಶ ಮಾಡಬಲ್ಲ ಬಾಂಬ್ & ಗನ್ ಸೃಷ್ಟಿ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಮಧ್ಯಪ್ರಾಚ್ಯ ಪ್ರದೇಶ ಈಗ ಬೂದಿ ಮುಚ್ಚಿದ ಕೆಂಡವಾಗಿದ್ದು, 3ನೇ ಮಹಾಯುದ್ಧ ಶುರುವಾಗಿ ಹೋದರೆ ಅದು ಈ ಬಾರಿ ಮಧ್ಯಪ್ರಾಚ್ಯ ಭಾಗದಿಂದ ಎಂದು ಜನರು ಬೈದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ ಅಮೆರಿಕದ ಮೇಲೆ ಒತ್ತಡ ಕೂಡ ಹೆಚ್ಚಾಗುತ್ತಿದೆ.

This Is What Discussion Going On About Israel And America Now

ಇಸ್ರೇಲ್ ಕೈಬಿಟ್ಟ ದೊಡ್ಡಣ್ಣ ಅಮೆರಿಕ?

ಮಳೆ ಜಾಸ್ತಿ ಆಗ್ತಿದೆ, ಬಿಸಿಲು ಜಾಸ್ತಿ ಆಗ್ತಿದೆ, ಎಲ್ಲಾ ಅಲ್ಲೋಲ ಕಲ್ಲೊಲ ಆಗ್ತಿದೆ.. ಹೀಗೆ, ಮನುಷ್ಯರು ಗೊಣಗುತ್ತಾರೆ. ಆದ್ರೆ ಅದಕ್ಕೆಲ್ಲಾ ಕಾರಣ ಇದೇ ಮುನಷ್ಯರು ಮಾಡಿದ ತಪ್ಪುಗಳು. ಭೂಮಿ ಮೇಲೆ ಮನುಷ್ಯ ನೆಮ್ಮದಿಯಾಗಿ ಬದಕುವುದಿಲ್ಲ ಅನ್ನೋದು ಯಾವಾಗಲೋ ನಿಜ ಆಗೋಗಿದೆ. ಇದು ಗೊತ್ತಾಗಿಯೇ ಪ್ರಕೃತಿ ಮಾತೆ ಕೂಡ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿ ಮಾಡಿ, ಮನುಷ್ಯರಿಗೆ ಬುದ್ಧಿ ಕಲಿಸುತ್ತಿದ್ದಾಳೆ.

ಹೀಗಿದ್ದರೂ ಸೈಲೆಂಟ್ ಆಗದ ಮನುಷ್ಯರು, ಯುದ್ಧದ ಚಟಕ್ಕೆ ಬಿದ್ದು ಚಟ್ಟ ಹತ್ತುತ್ತಿದ್ದಾರೆ. ಅದ್ರಲ್ಲೂ ಇಸ್ರೇಲ್ ಈಗ ಗಾಜಾ, ಲೆಬನಾನ್, ಇರಾನ್, ಸಿರಿಯಾ ವಿರುದ್ಧವೇ ದೊಡ್ಡ ಯುದ್ಧ ಮಾಡುತ್ತಿದೆ. ಪರಿಸ್ಥಿತಿ ಕೈಮೀರಿದಾಗ ಅಮೆರಿಕ ಇದೀಗ ಇಸ್ರೇಲ್ ಸೇನೆಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನೇ ನಿಲ್ಲಿಸಲಿದೆಯಾ? ಎಂಬ ಪ್ರಶ್ನೆಯು ಮೂಡಿದೆ. ಹಾಗೇ ಈ ಕುರಿತು ಇದೀಗ ಒತ್ತಡಗಳು ಕೂಡ ಅಮೆರಿಕದ ಮೇಲೆ ಹೆಚ್ಚಾಗುತ್ತಿದೆ. ಅಲ್ಲದೆ ಇದರಿಂದ ಅಮೆರಿಕ & ಇಸ್ರೇಲ್ ಸಂಬಂಧ ಏನಾಗಲಿದೆ? ಎಂಬ ಚರ್ಚೆಯೂ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+