ವಿಶ್ವದ ಅತೀ ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊ ಇನ್ನಿಲ್ಲ

Posted By:
Subscribe to Oneindia Kannada

ಮೆಕ್ಸಿಕೋ, ಡಿಸೆಂಬರ್, 26: ವಿಶ್ವದ ಅತಿ ತೂಕದ ವ್ಯಕಿ ಆಂಡ್ರೆಸ್ ಮೊರೆನೊ ಎಂಬಾತ ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬದಂದು ಮೆಕ್ಸಿಕೋದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆದಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಎರಡು ತಿಂಗಳ ಹಿಂದೆ ತೂಕ ಇಳಿಸಿಕೊಳ್ಳುವ ಚಿಕಿತ್ಸೆಗೆ ಒಳಗಾದ ಆಂಡ್ರೆಸ್ ಮೊರೆನೊ ಜಠರದ ಉರಿಯೂತ ಸಮಸ್ಯೆಯಿಂದ ನರಳುತ್ತಿದ್ದರು. ಕ್ರಿಸ್ಮಸ್ ಹಿಂದಿನ ದಿನವೇ ಅಸ್ವಸ್ಥರಾದ ಇವರು ಹಬ್ಬದಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.[ವಿಶ್ವದ ಅತೀ ಕುಳ್ಳ ಚಂದ್ರ ಬಹದ್ದೂರ ಡಾಂಗಿ ನಿಧನ]

Andres Moreno

ಆಂಡ್ರೆಸ್ ಮೊರೆನೊ ಅವರು ಬರೋಬ್ಬರಿ 450 ಕೆಜಿ ತೂಕವಿದ್ದು, ಅಕ್ಟೋಬರ್ ತಿಂಗಳಲ್ಲಿ ದೇಹದ ತೂಕ ಕಡಿಮೆ ಮಾಡುವ ಬ್ಯಾರಿಯಾಟ್ರಿಕ್ ಚಿಕಿತ್ಸೆಗೆ ಒಳಗಾಗಿ 100ಕೆಜಿ ತೂಕ ಇಳಿಸಿಕೊಂಡು, 350 ಕೆಜಿಗೆ ಬಂದಿದ್ದರು.

ಜಠರ ಉರಿಯೂತ ಸಮಸ್ಯೆಯ ಬಳಲಿಕೆಯಿಂದ ಉಪಶಮನ ಪಡೆಯಲು ನವೆಂಬರ್ 19ರಂದು ಸಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯದಲ್ಲಿ ಕೊಂಚ ಚೇತರಿಕೆಯೂ ಕಂಡಿತ್ತು.[ಸ್ಲೋ ಪಾಯಿಸನ್ ರಕ್ತಬೀಜಾಸುರ 'ಫಾಸ್ಟ್ ಫುಡ್']

ಕೆಲದಿನಗಳ ಕಾಲ ಆರಾಮವಾಗಿದ್ದ ಮೊರೆನೊ ಅವರಿಗೆ ಕ್ರಿಸ್ಮಸ್ ಹಬ್ಬದ ದಿನದಂದು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕುಟುಂಬದ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಸಂಸ್ಕಾರ ಮೆಕ್ಸಿಕೋದ ಸೊನೊರಾ ಎಂಬಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The world's fattest man Andres Moreno (38) has died in Mexico on Friday December 25th. His weight 960lbs. He had heart attack in ambulance.
Please Wait while comments are loading...