ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ಹೇಳಿದೆ ತಾಲಿಬಾನ್; ಕಾರಣವೇನು?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕಾಬೂಲ್, ಆಗಸ್ಟ್‌ 25: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಇನ್ನೇನು ಕೆಲವೇ ವಾರಗಳಲ್ಲಿ ನೂತನ ಆಡಳಿತ ಕಾರ್ಯತಂತ್ರಗಳನ್ನು ರೂಪಿಸುವುದಾಗಿ ಹೇಳಿದೆ. ಜೊತೆಗೆ ಈ ಹಿಂದ ತನ್ನ ಆಡಳಿತದಲ್ಲಿ ಮಹಿಳೆಯರ ಮೇಲೆ ಕಠಿಣ ನಿಯಮಗಳನ್ನು ಹೇರಿದ್ದ ತಾಲಿಬಾನ್, ಈಗ ಅವರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ.

ಆದರೆ ತಾಲಿಬಾನ್‌ನ ಇತ್ತೀಚಿನ ಆದೇಶವೊಂದು ಅನುಮಾನಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿನ ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಉಳಿಯುವಂತೆ ತಾಲಿಬಾನ್ ಹೇಳಿದ್ದು, ಮತ್ತೆ ಕಠಿಣ ನಿಯಮಗಳನ್ನು ಹೇರುವ ಆಲೋಚನೆಯಲ್ಲಿದೆಯೇ ಎಂಬ ಆತಂಕ ಉಂಟಾಗಿದೆ.

Taliban Ask Working Women To Stay Home

ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಉಳಿಯಲು ಹೇಳಿರುವ ಕುರಿತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ವಿವರಣೆ ನೀಡಿದ್ದಾರೆ. 'ಇದು ತಾತ್ಕಾಲಿಕ ನೀತಿಯಷ್ಟೆ. ದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವವರೆಗೂ ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಈ ರೀತಿ ಹೇಳಲಾಗಿದೆ' ಎಂದಿದ್ದಾರೆ.

ಮಂಗಳವಾರ ವರದಿಗಾರರೊಂದಿಗೆ ಮಾತನಾಡಿದ ಜಬೀವುಲ್ಲಾ, 'ಸರ್ಕಾರಿ ಮಹಿಳಾ ಉದ್ಯೋಗಿಗಳು ಭದ್ರತಾ ದೃಷ್ಟಿಯಿಂದ ಸ್ವಲ್ಪ ಕಾಲ ಮನೆಯಲ್ಲೇ ಉಳಿಯಬೇಕಾಗುತ್ತದೆ. ನಂತರ ಕೆಲಸಕ್ಕೆ ಮರಳಬಹುದು' ಎಂದು ಹೇಳಿದ್ದಾರೆ. 'ನಾವು ಹೊಸ ನಿಯಮಗಳನ್ನು ಜಾರಿ ಮಾಡುವವರೆಗೂ ಮಹಿಳೆಯರು ಮನೆಯಲ್ಲೇ ಉಳಿಯಬೇಕು ಹಾಗೂ ಅವರ ಸಂಬಳವನ್ನು ಅವರ ಮನೆಗಳಿಗೇ ಪಾವತಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ಆದರೆ ಇದು ಮಹಿಳೆಯರ ಮೇಲೆ ಮತ್ತೆ ಕಠಿಣ ನಿಯಮ ಹೇರಲು ತಾಲಿಬಾನ್ ಇಡುತ್ತಿರುವ ಹೆಜ್ಜೆಯೇ ಎಂಬ ಅನುಮಾನ ಮೂಡಿದೆ.

ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್

ಅಫ್ಘಾನಿಸ್ಥಾನ ವಶಪಡಿಸಿಕೊಂಡ ನಂತರ ಮೊದಲ ಸುದ್ದಿಗೋಷ್ಠಿ ನಡೆಸಿದ್ದ ತಾಲಿಬಾನ್, 'ಸೇಡು ತೀರಿಸಿಕೊಳ್ಳುವುದು ತಾಲಿಬಾನ್ ಉದ್ದೇಶವಲ್ಲ' ಎಂದಿತ್ತು. ಇದರೊಂದಿಗೆ, ವಿಶೇಷವಾಗಿ ಮಹಿಳೆಯರನ್ನು ಉದ್ಯೋಗದಿಂದ ದೂರವುಳಿಸುವುದಿಲ್ಲ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದಿಲ್ಲ. ಅವರಿಗೂ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡಲಾಗುತ್ತದೆ' ಎಂದು ಘೋಷಿಸಿತ್ತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್, 1996ರಿಂದ 2001ರವರೆಗೂ ಮಹಿಳೆಯರ ಮೇಲೆ ಕಠಿಣ ನಿಯಮಗಳನ್ನು ಹೇರಿತ್ತು. ಆ ನಿಯಮಗಳು ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗಿದ್ದವು. ಮಹಿಳೆಯರು ಒಬ್ಬರೇ ಹೊರಗಡೆ ಬರುವಂತಿಲ್ಲ, ಅಧ್ಯಯನ ಮಾಡುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ ಹೀಗೆ ಹಲವಾರು ನಿಯಮಗಳನ್ನು ತಾಲಿಬಾನ್ ಹೇರಿತ್ತು. ಷರಿಯಾ ಕಾನೂನಿನ ಪ್ರಕಾರ ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು.

Taliban Ask Working Women To Stay Home

ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನ್ ತನ್ನ ಸಾಮ್ರಾಜ್ಯ ಸ್ಥಾಪಿಸಲು ಮುಂದಾಗಿತ್ತು. ಎರಡು ದಶಕಗಳ ಕಾಲ ಅಮೆರಿಕ ಸೇನೆಯ ಭದ್ರತೆಯಲ್ಲಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ವಶಪಡಿಸಿಕೊಂಡಿದೆ. 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ. ಹಲವು ದೇಶಗಳು ತಮ್ಮ ನಾಗರಿಕರನ್ನು ವಾಪಸ್ ಕರೆಸಿಕೊಳ್ಳುತ್ತಿವೆ.

ಅಫ್ಘಾನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮೊದಲ ಸುದ್ದಿಗೋಷ್ಠಿ ಅಫ್ಘಾನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮೊದಲ ಸುದ್ದಿಗೋಷ್ಠಿ

ಈ ನಡುವೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಮುದುವರೆದಿದೆ. ದೇಶಗಳು ತಮ್ಮ ಜನರನ್ನು ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿವೆ. ಜನರು ದೇಶ ತೊರೆದು ಹೋಗಲು ಯಾವುದೇ ತೊಂದರೆಯಿಲ್ಲ. ಭಯಪಡುವ ಅಗತ್ಯವಿಲ್ಲ. ಎಲ್ಲರು ಸುರಕ್ಷಿತವಾಗಿರುತ್ತಾರೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ತಿಳಿಸಿದ್ದಾರೆ. ಇದರೊಂದಿಗೆ ಗಡುವಿನ ಒಳಗೇ ದೇಶ ಬಿಡಬೇಕು ಎಂದು ಎಚ್ಚರಿಕೆ ಕೊಟ್ಟಂತೆ ಹೇಳಿದ್ದಾರೆ.

ಮಂಗಳವಾರ ತಾಲಿಬಾನ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಜಿ 7 ದೇಶಗಳು ಸಭೆ ನಡೆಸಿದ್ದು, ಮುಖಂಡರು ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದರು. ಆದರೆ ಅದೇ ದಿನ, ಗಡುವು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಾಲಿಬಾನ್ ನುಡಿದಿದೆ.

English summary
The Taliban have asked working women to stay at home in Afghanistan until proper security system is in place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X