ಗಂಡಾಗಿ ಬದಲಾಗಲಿರುವ ಪಶ್ಚಿಮ ಬಂಗಾಳ ಮಾಜಿ ಸಿಎಂ ಪುತ್ರಿ: ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧಾರ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ.
ಇಂಡಿಯಾ ಟುಡೇ ವರದಿ ಮಾಡಿದ್ದು, ಸುಚೇತನಾ ತನ್ನನ್ನು ತಾನು ಪುರುಷ ಎಂದು ಗುರುತಿಸಿಕೊಳ್ಳುತ್ತಿರುವುದರಿಂದ "ಸುಚೇತನ್" ಆಗಲು ಬಯಸಿದ್ದಾರೆ ಎಂದು ಹೇಳಲಾಗಿದೆ. ಸುಚೇತನಾ ಅವರು ಕಾನೂನು ಸಲಹೆಯನ್ನು ಪಡೆಯಲು ಪ್ರಾರಂಭಿಸಿದ್ದಾರೆ ಮತ್ತು ಕಾರ್ಯವಿಧಾನಕ್ಕೆ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

"ನನ್ನ ಮಾಂಟೆಸ್ಸರಿ ದಿನಗಳಿಂದ, ನಾನು ನನ್ನನ್ನು ಒಬ್ಬ ಹುಡುಗ ಎಂದು ಗುರುತಿಸಿಕೊಂಡಿದ್ದೇನೆ" ಎಂದು ಸುಚೇತನಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ. ಸಮಯದೊಂದಿಗೆ ಆ ಯೋಚನೆ ಇನ್ನಷ್ಟು ಗಟ್ಟಿಯಾಗುತ್ತಾ ಹೋಯಿತು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಮಗಳಾಗಿ ಈ ನಿರ್ಧಾರ ಕೈಗೊಳ್ಳುವ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ. "ನನ್ನ ಪೋಷಕರ ಗುರುತು ದೊಡ್ಡ ವಿಚಾರವಲ್ಲ" ಎಂದು ಅವರು ಹೇಳಿದ್ದಾರೆ. "ನನಗೆ ಈಗ 41 ವರ್ಷ, ಆದ್ದರಿಂದ ನಾನು ಜೀನದ ಬಗ್ಗೆ ನನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ಕಾನೂನು ಮತ್ತು ವೈದ್ಯಕೀಯ ಕಾರ್ಯವಿಧಾನಗಳನ್ನು ಪ್ರಾರಂಭಿಸಿದ್ದೇನೆ." ಎಂದು ಹೇಳಿದ್ದಾರೆ.
ತಪ್ಪು ಮಾಹಿತಿ ನೀಡದಂತೆ ಮನವಿ
ಇಂಡಿಯಾ ಟುಡೆಯೊಂದಿಗೆ ಮಾತನಾರುವ ಸುಚೇತನಾ, ತನ್ನ ಬಾಲ್ಯದಿಂದಲೂ ತನ್ನ ತಂದೆಗೆ ಅದರ ಬಗ್ಗೆ ತಿಳಿದಿತ್ತು. "ಇದು ನನ್ನ ವೈಯಕ್ತಿಕ ನಿರ್ಧಾರ. ಇದಕ್ಕೆ ಬೇರೆ ಯಾರೂ ಕಾರಣವಲ್ಲ, ಈ ಸುದ್ದಿಯನ್ನು ತಿರುಚಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಇದು ನನ್ನದೇ ಹೋರಾಟ. ನಾನು ಇದನ್ನು ಏಕಾಂಗಿಯಾಗಿ ಹೋರಾಡಲು ಬಯಸುತ್ತೇನೆ. ಎಂದಿಗಿಂತಲೂ ತಡವಾಗಿದೆ. ನನ್ನ ಬಾಲ್ಯದಿಂದಲೂ ನಾನು ಈ ದೃಷ್ಟಿಕೋನವನ್ನು ಹೊಂದಿದ್ದೇನೆ. ಅನೇಕರು ಇದನ್ನು ಬೆಂಬಲಿಸಿದರು, ಮತ್ತು ಅನೇಕರು ಕೆಟ್ಟದಾಗಿ ಮಾತನಾಡಿದರು. ಮಾನಸಿಕವಾಗಿ, ನಾನು ಟ್ರಾನ್ಸ್ ಮ್ಯಾನ್, ಮತ್ತು ದೈಹಿಕವಾಗಿ, ನಾನು ಅದೇ ರೀತಿ ಇರಲು ಬಯಸುತ್ತೇನೆ," ಎಂದು ಹೇಳಿದರು.
ಸುಚೇತನಾ ಬಗ್ಗೆ ಹಲವರಿಂದ ಭಾರಿ ಮೆಚ್ಚುಗೆ
ಸಿಂಪೋಸಿಯಂನಲ್ಲಿ ಸ್ಪೀಕರ್ ಆಗಿದ್ದ ನಟಿ ಮತ್ತು ಹಕ್ಕುಗಳ ಕಾರ್ಯಕರ್ತೆ ಉಷಾಶಿ ಚಕ್ರಬಿಯೊರ್ತಿ ಐಎಎನ್‌ಎಸ್ ಪ್ರತಿಕ್ರಿಯೆ ನೀಡಿದ್ದು, ಅವರ ತಂದೆ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದರು, ಸುಚೇತನಾ ಅವರಂತಹವರು ಇಷ್ಟು ಧೈರ್ಯದಿಂದ ಹೊರಬಂದು ಇಂತಹ ನಿರ್ಧಾರವನ್ನು ಪ್ರಕಟಿಸುವುದು ಸುಲಭವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಸುಚೇತನಾ ಅವರು ಇಟ್ಟಿರುವ ದಿಟ್ಟ ಹೆಜ್ಜೆ ಅನೇಕರನ್ನು ಹೊರಗೆ ಬಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತೇಜನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅನೇಕ ಜನರು ತೆರೆದುಕೊಳ್ಳಲು ಹೆದರುತ್ತಾರೆ, ಹೆಚ್ಚು ಜನರು ಮುಂದೆ ಬಂದರೆ, ಈ ವಿಷಯದ ಬಗ್ಗೆ ಸಾಮಾಜಿಕ ಚಳುವಳಿ ಹೆಚ್ಚು ಬಲಗೊಳ್ಳುತ್ತದೆ. ಸುಚೇತನಾ ಅವರಂತಹ ವ್ಯಕ್ತಿಗಳು ತೆಗೆದುಕೊಳ್ಳುವ ಕ್ರಮಗಳು ಖಂಡಿತವಾಗಿಯೂ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ" ಎಂದು ಹೇಳಿದ್ದಾರೆ.












Click it and Unblock the Notifications