ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರದ ಮೇಲೆ ಕೆಲಸ ಮಾಡದ ಆಸ್ಟ್ರಾಜೆನೆಕಾ; ಲಸಿಕೆ ನಿಲ್ಲಿಸಿದ ದಕ್ಷಿಣ ಆಫ್ರಿಕಾ

|
Google Oneindia Kannada News

ಜೊಹೆನ್ಸ್‌ಬರ್ಗ್, ಫೆಬ್ರುವರಿ 08: ಆಸ್ಟ್ರಾಜೆನಿಕಾ ಲಸಿಕೆಯು ಸದ್ಯಕ್ಕೆ ದಕ್ಷಿಣ ಆಫ್ರಿಕಾದಲ್ಲಿರುವ ಕೊರೊನಾ ಸೋಂಕಿನ ರೂಪಾಂತರದ ಪ್ರಕರಣಗಳನ್ನು ತಡೆಯಲು ವಿಫಲವಾಗಿದೆ ಎಂಬ ಅಧ್ಯಯನದ ಮಾಹಿತಿಯನ್ನಾಧರಿಸಿ ದಕ್ಷಿಣ ಆಫ್ರಿಕಾ ಸರ್ಕಾರ ಕೊರೊನಾ ಲಸಿಕೆಯ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿದ ಲಸಿಕೆಯ ಲಕ್ಷಗಟ್ಟಲೆ ಡೋಸ್ ಗಳ ಲಸಿಕೆಗಳೊಂದಿಗೆ ದಕ್ಷಿಣ ಆಫ್ರಿಕಾ ತನ್ನ ಲಸಿಕಾ ಅಭಿಯಾನಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಲಸಿಕೆ ಬಗೆಗಿನ ಸ್ಪಷ್ಟತೆಯ ಕೊರತೆ ಕಾರಣದಿಂದಾಗಿ ತಡೆಹಿಡಿದಿದೆ. ಇನ್ನಿತರೆ ಲಸಿಕಾ ಉತ್ಪಾದಕರಿಂದ ಶೀಘ್ರವೇ ಕೊರೊನಾ ಲಸಿಕೆಗಳು ಬರಲಿವೆ ಹಾಗೂ ಅಭಿಯಾನವನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಸ್ ರೂಪಾಂತರಕ್ಕೆ ಲಸಿಕೆ ಪರಿಣಾಮಕಾರಿಯಲ್ಲದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಸ್ ರೂಪಾಂತರಕ್ಕೆ ಲಸಿಕೆ ಪರಿಣಾಮಕಾರಿಯಲ್ಲ

"ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗೆ ತಡೆ ನೀಡಿರುವುದು ತಾತ್ಕಾಲಿಕವಷ್ಟೆ" ಎಂದು ದೇಶದ ಆರೋಗ್ಯ ಸಚಿವ ಜ್ವೆಲಿ ಮಿಶ್ಜಿ ಸ್ಪಷ್ಟಪಡಿಸಿದ್ದಾರೆ.

 South Africa Suspends AstraZeneca Vaccination Temporarily

"ಕೊರೊನಾ ರೂಪಾಂತರ ಸೋಂಕಿನ ವಿರುದ್ಧ ಆಸ್ಟ್ರಾಜೆನೆಕಾ ಲಸಿಕೆ ಅತಿ ಕಡಿಮೆ ಪ್ರಮಾಣದಲ್ಲಿ ರಕ್ಷಣೆ ಕೊಡಬಹುದಷ್ಟೆ" ಎಂದು ಲಸಿಕೆ ಕುರಿತು ಅಧ್ಯಯನ ಹಾಗೂ ಪ್ರಯೋಗ ಕೈಗೊಂಡಿದ್ದ ಜೊಹೆನ್ಸ್‌ಬರ್ಗ್ ನ ವಿಟ್‌ವಾಟರ್‌ಸ್ರ್ಯಾಂಡ್ ವಿಶ್ವವಿದ್ಯಾಲಯ ಭಾನುವಾರ ಹೇಳಿಕೆ ನೀಡಿತ್ತು.

ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಆಸ್ಟ್ರಾಜೆನೆಕಾ ಹೇಳಿಕೆ ಪ್ರಕಟಿಸಿದ್ದು, ದೇಶದಲ್ಲಿ ಇದುವರೆಗೂ ಲಸಿಕೆ ಪಡೆದ 2000 ಜನರಿಗೆ ಯಾವುದೇ ಅಡ್ಡಪರಿಣಾಮಗಳಾಗಿಲ್ಲ. ಆದರೆ ಸದ್ಯಕ್ಕೆ ಇದರ ಬಗ್ಗೆ ನಿರ್ಧರಿತ ತೀರ್ಪು ನೀಡಲು ಸೂಕ್ತ ಮಾಹಿತಿ ಕೊರತೆ ಎಂದು ಹೇಳಿದೆ.

ವಿಶ್ವದ ಕೊರೊನಾ ಲಸಿಕಾ ಅಭಿಯಾನದ ಸ್ಪರ್ಧೆಯಲ್ಲಿ ಸದ್ಯಕ್ಕೆ ಹಿಂದುಳಿದಿರುವ ದಕ್ಷಿಣ ಆಫ್ರಿಕಾ, ಸೋಮವಾರ ಒಂದು ಕೋಟಿ ಕೊರೊನಾ ಲಸಿಕೆ ಡೋಸ್ ಗಳನ್ನು ಪಡೆದುಕೊಂಡಿದೆ. ಈ ತಿಂಗಳಲ್ಲಿ 500000 ಡೋಸ್ ಗಳ ನಿರೀಕ್ಷೆಯಲ್ಲಿದೆ. ಈ ಎಲ್ಲವೂ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಲಸಿಕೆ ಎನ್ನಲಾಗಿದೆ.

English summary
South Africa suspend the start of corona vaccinations with the AstraZeneca jab after a study showed the drug failed to prevent mild and moderate cases of the virus variant
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X