'ನಿನ್ನ ದೇಶಕ್ಕೆ ತೊಲಗು' ಎಂದು ಕಿರುಚಿ ಅಮೆರಿಕಾದಲ್ಲಿ ಭಾರತೀಯನಿಗೆ ಗುಂಡು
ಅಮೆರಿಕಾದಲ್ಲಿ ಮತ್ತೊಬ್ಬ ಭಾರತೀಯನಿಗೆ ಗುಂಡಿಕ್ಕಲಾಗಿದೆ. ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಸಿಯಾಟಲ್ ನಲ್ಲಿ ಗುಂಡಿನ ದಾಳಿಗೆ ಗುರಿಯಾಗಿದ್ದಾರೆ. ಆದರೆ ಅದೃಷ್ಟಾವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಯಾಟಲ್, ಮಾರ್ಚ್ 5: ಅಮೆರಿಕಾದಲ್ಲಿ ಮತ್ತೊಬ್ಬ ಭಾರತೀಯನಿಗೆ ಗುಂಡಿಕ್ಕಲಾಗಿದೆ. ಸಿಖ್ ಸಮುದಾಯಕ್ಕೆ ಸೇರಿದ ದೀಪ್ ಸಿಂಗ್ ಸಿಯಾಟಲ್ ನಲ್ಲಿ ಗುಂಡಿನ ದಾಳಿಗೆ ಗುರಿಯಾಗಿದ್ದಾರೆ. ಆದರೆ ಅದೃಷ್ಟಾವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ನಿನ್ನ ದೇಶಕ್ಕೆ ವಾಪಸ್ ಹೋಗು' ಎಂದು ಹೇಳಿ ವ್ಯಕ್ತಿಯೋರ್ವ 39 ವರ್ಷದ ದೀಪ್ ಸಿಂಗ್ ಗೆ ಕೆಂಟ್ ಪೂರ್ವ ಬೆಟ್ಟ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಗುಂಡು ಹಾರಿಸಿದ್ದಾನೆ.[ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ]
ಇತ್ತೀಚೆಗಷ್ಟೇ ಕನ್ಸಾಸ್ ನಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ ಕುಚಿಭೋತ್ಲಾ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾದ ಲ್ಯಾಂಕ್ಯಾಸ್ಟರ್ ನಲ್ಲಿ ವ್ಯಾಪಾರಸ್ಥ ಹರ್ನೀಶ್ ಪಟೇಲ್ ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

'ನೀನು ನಿನ್ನ ದೇಶಕ್ಕೆ ವಾಪಸ್ ಹೋಗು' ಎಂದು ಹೇಳಿ ಗುಂಡಿಕ್ಕಿದ್ದಾರೆ ಎಂದು ದೀಪ್ ಸಿಂಗ್ ಪೊಲೀಸರ ಬಳಿ ಹೇಳಿದ್ದಾರೆ. ಇನ್ನು ಗುಂಡಿಕ್ಕಿದ ವ್ಯಕ್ತಿ 6 ಅಡಿ ಉದ್ದವಿದ್ದ, ಆದರೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಎಂದು ಅವರು ಹೇಳಿದ್ದಾರೆ.[ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಯುವಕನ ಹತ್ಯೆ]
ಸದ್ಯ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯೂ ಆಗಿದ್ದಾರೆ. ಈ ದ್ವೇಷದ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ನ್ಯೂಯಾರ್ಕ್ ನಲ್ಲಿರುವ ಮಾನವ ಹಕ್ಕು ಸಂಘಟನೆ ಸಿಖ್ ಕೊಯಿಲೇಷನ್ ಅಲ್ಲಿನ ಸರಕಾರವನ್ನು ಒತ್ತಾಯಿಸೊದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕಾದಲ್ಲಿ ಭಾರತೀಯರ ಮೇಲೆ ಗುಂಡಿಕ್ಕುತ್ತಿರುವ ನಾಲ್ಕನೇ ನಿದರ್ಶನ ಇದಾಗಿದೆ. ಫೆಬ್ರವರಿ 13ರಂದು ತೆಲಂಗಾಣ ಮೂಲದ ವಿ. ವಂಶಿ ರೆಡ್ಡಿ (27) ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಫೆ. 22ರಂದು ಕನ್ಸಾಸ್ ನಲ್ಲಿ ಶ್ರೀನಿವಾಸ್ ಕುಚಿಬೋತ್ಲಾ ಹಾಗೂ ಮಾರ್ಚ್ 3ರಂದು ಕ್ಯಾಲಿಫೋರ್ನಿಯಾದಲ್ಲಿ ಹರ್ನಿಷ್ ಪಟೇಲ್ ಗೆ ಗುಂಡಿಕ್ಕಲಾಗಿತ್ತು.[ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ]
ಇತ್ತೀಚೆಗಷ್ಟೇ ನಡೆದಿದ್ದ ಶ್ರೀನಿವಾಸ ಕುಚಿಭೋತ್ಲಾ ಹತ್ಯೆಯನ್ನು ಖಂಡಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಸಹನೆಯ ಪೀಡೆಯನ್ನು ಹತ್ತಿಕ್ಕಬೇಕೆಂದು ಕರೆ ನೀಡಿದ್ದರು. ಆದರೆ, ಅಧ್ಯಕ್ಷರ ಕರೆಯ ಬೆನ್ನಲ್ಲೇ ಒಬ್ಬರಾದ ಮೇಲೊಬ್ಬರು ಭಾರತೀಯರ ಮೇಲೆ ಗುಂಡು ಹಾರಿಸುತ್ತಿರುವುದು ಅಮೆರಿಕದಲ್ಲಿರುವ ಭಾರತೀಯರಿಗೆ ಮತ್ತಷ್ಟು ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications