ಶೇಖ್ ಹಸೀನಾ ಭಾಷಣಕ್ಕೂ ನಮಗೂ ಸಂಬಂಧವಿಲ್ಲ; ಬಾಂಗ್ಲಾದೇಶಕ್ಕೆ ತಿರುಗೇಟು ಕೊಟ್ಟ ಭಾರತ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆಗಳನ್ನು ಸ್ವಇಚ್ಛೆಯಿಂದ ನೀಡಿದ್ದಾರೆ. ಇದರಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂದು ಭಾರತ ಬಾಂಗ್ಲಾದೇಶಕ್ಕೆ ತಿರುಗೇಟು ನೀಡಿದೆ. ಶೇಖ್ ಹಸೀನಾರ ಹೇಳಿಕೆಗಳನ್ನು ಭಾರತದ ಜೊತೆ ಸಂಬಂಧ ಕಲ್ಪಿಸುವುದು ಎರಡೂ ದೇಶಗಳ ಸಂಬಂಧಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದ ಹಂಗಾಮಿ ಹೈಕಮಿಷನರ್ ಆಗಿರುವ ಎಂಡಿ ನುರಾಲ್ ಇಸ್ಲಾಂ ಅವರಿಗೆ ವಿದೇಶಾಂಗ ಸಚಿವಾಲಯ ಏಕೆ ಸಮನ್ಸ್ ಜಾರಿ ಮಾಡಿದೆ ಎಂಬುದನ್ನು ಹೇಳಿದ್ದು, ಶೇಖ್ ಹಸೀನಾ ನೀಡಿರುವ ವೈಯಕ್ತಿಕ ಹೇಳಿಕೆಯನ್ನು ಭಾರತದ ಜೊತೆ ತಳುಕು ಹಾಕುವುದು ದ್ವಿಪಕ್ಷೀಯ ಸಂಬಂಧಗಳಿಗೆ ಒಳ್ಳೆಯದಲ್ಲ ಎಂದಿದ್ದಾರೆ.

ಭಾರತವು ಬಾಂಗ್ಲಾದೇಶದ ಜೊತೆ ಸಕಾರಾತ್ಮಕ, ರಚನಾತ್ಮಕ ಮತ್ತು ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ತಿಳಿಸಲಾಗಿದೆ. ಇದನ್ನು ಇತ್ತೀಚಗೆ ನಡೆದ ಹಲವು ಉನ್ನತ ಮಟ್ಟದ ಸಭೆಗಳಲ್ಲಿ ಹೇಳಿದ್ದೇವೆ. ಆದರೂ ಬಾಂಗ್ಲಾದೇಶದ ಅಧಿಕಾರಿಗಳು ನೀಡುವ ಹೇಳಿಕೆಗಳು ಭಾರತವನ್ನು ನಕಾರಾತ್ಮವಾಗಿ ಚಿತ್ರಿಸುತ್ತಲೇ ಇರುವುದು ವಿಷಾದಕರ, ಅವರ ಆಂತರಿಕೆ ಸಮಸ್ಯೆಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಿದೆ ಎಂದು ರಣಧೀರ್ ಜೈಸ್ವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
"ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೈಯಕ್ತಿಕ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ, ಇದನ್ನು ಭಾರತ ಸರ್ಕಾರದ ನಿಲುವಿನ ಜೊತೆ ಹೋಲಿಕೆ ಮಾಡುವುದು ದ್ವಿಪಕ್ಷೀಯ ಸಂಬಂಧಗಳನ್ನು ಹಾಳು ಮಾಡುತ್ತದೆ ಎಂದು ಹೇಳಿದರು.
ಭಾರತ ಸರ್ಕಾರ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ಬಾಂಗ್ಲಾದೇಶವು ವಾತಾವರಣವನ್ನು ಹಾಳು ಮಾಡದೆ ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂದು ನಾವು ನಿರೀಕ್ಷೆ ಮಾಡಿದ್ದೇವೆ ಎಂದರು.
ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆಯ ಧ್ವಂಸ ಮಾಡಿದ್ದಕ್ಕೆ ಭಾರತ ಬೇಸರ ವ್ಯಕ್ತಪಡಿಸಿದ ಒಂದು ದಿನದ ಬಳಿಕ ವ್ಯವಹಾರಗಳ ಸಚಿವಾಲಯದ ಹೇಳಿಕೆ ಬಂದಿದೆ ಮತ್ತು ಇಂತಹ ವಿಧ್ವಂಸಕ ಕೃತ್ಯವನ್ನು ಬಲವಾಗಿ ಖಂಡಿಸಬೇಕು ಎಂದು ಹೇಳಿದರು.
ಆಕ್ರಮಣ ಮತ್ತು ದಬ್ಬಾಳಿಕೆಯ ಶಕ್ತಿಗಳ ವಿರುದ್ಧ ಬಾಂಗ್ಲಾದೇಶದ ಜನರ ವೀರೋಚಿತ ಪ್ರತಿರೋಧದ ಸಂಕೇತವಾದ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ನಿವಾಸವನ್ನು ಫೆಬ್ರವರಿ 5, 2025 ರಂದು ಧ್ವಂಸಗೊಳಿಸಲಾಗಿದೆ.












Click it and Unblock the Notifications