Get Updates
Get notified of breaking news, exclusive insights, and must-see stories!

ಇಸ್ರೇಲ್ ಪ್ರಧಾನಿಯನ್ನೇ ನಿಯಂತ್ರಿಸುವ 'ಶ್ಯಾಡೋ ಪವರ್': ವಿವಾದಗಳ ಸುಳಿಯಲ್ಲಿರುವ ಸಾರಾ ನೆತನ್ಯಾಹು ಅಸಲಿ ಕಥೆ

ವಿಶ್ವ ರಾಜಕಾರಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅತ್ಯಂತ ಶಕ್ತಿಶಾಲಿ ನಾಯಕ. ಆದರೆ, ಅವರ ಪ್ರತಿಯೊಂದು ಅಧಿಕೃತ ನಿರ್ಧಾರದ ಹಿಂದೆ ಅವರ ಪತ್ನಿ ಸಾರಾ ನೆತನ್ಯಾಹು ಅವರ ಪ್ರಭಾವ ದೊಡ್ಡದಿದೆ. ಇವರನ್ನು ನೆತನ್ಯಾಹು ಅವರ ಹಿಂದಿರುವ 'ಅದೃಶ್ಯ ಶಕ್ತಿ' ಅಥವಾ ತೆರೆಯ ಹಿಂದಿನ ನಾಯಕಿ ಎನ್ನಲಾಗುತ್ತದೆ.

ಗಗನಸಖಿಯಾಗಿ ವೃತ್ತಿಜೀವನ ಆರಂಭಿಸಿದ ಸಾರಾ ನೆತನ್ಯಾಹು, ಇಂದು ಇಸ್ರೇಲ್ ದೇಶದ ಪ್ರಭಾವಿ 'ಪ್ರಥಮ ಮಹಿಳೆ'ಯಾಗಿ ಬೆಳೆದಿರುವ ಕಥೆ ರೋಚಕವಾಗಿದೆ. ವೃತ್ತಿಯಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞೆಯಾಗಿರುವ ಇವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶಿಷ್ಟಾಚಾರಗಳನ್ನು ಬದಿಗಿಟ್ಟು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಜಾಗತಿಕ ಗಮನ ಸೆಳೆದಿದ್ದರು. ಆದರೆ, ಮತ್ತೊಂದೆಡೆ ಇವರು ಭ್ರಷ್ಟಾಚಾರದ ಆರೋಪ ಹಾಗೂ ಕ್ರಿಮಿನಲ್ ತನಿಖೆಗಳ ಸುಳಿಗೂ ಸಿಲುಕಿದ್ದಾರೆ. ಇಸ್ರೇಲ್ ಸರ್ಕಾರದ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಇವರೇ ತೆರೆಯ ಮರೆಯಿಂದ ನಿಯಂತ್ರಿಸುತ್ತಾರೆ ಎಂಬ ಗಂಭೀರ ಆರೋಪಗಳು ಕೂಡ ಇವರ ಮೇಲಿದ್ದು, ಇಸ್ರೇಲ್ ರಾಜಕಾರಣದಲ್ಲಿ ಇವರು ಅತ್ಯಂತ ವಿವಾದಾತ್ಮಕ ಹಾಗೂ ಶಕ್ತಿಶಾಲಿ ಮಹಿಳೆಯಾಗಿದ್ದಾರೆ.

Sara Netanyahu

ಸಾರಾ ನೆತನ್ಯಾಹು ಹಿನ್ನೆಲೆ ಏನು?

ಸಾರಾ ಅವರ ಜೀವನದ ಕಥೆ ಒಂದು ಸಿನಿಮಾದಂತಿದೆ. ಸಾರಾ ಅವರ ತಂದೆ ಶ್ಮುವೆಲ್ ಬೆನ್-ಆರ್ಟ್ಜಿ ಒಬ್ಬ ಪ್ರಸಿದ್ಧ ಬರಹಗಾರ ಮತ್ತು ಕವಿ. ಇವರ ಇಡೀ ಕುಟುಂಬವೇ ಬುದ್ಧಿವಂತಿಕೆಗೆ ಹೆಸರಾಗಿತ್ತು. ಶಿಕ್ಷಣ ಮುಗಿಸಿದ ನಂತರ ಸಾರಾ ಅವರು ಇಸ್ರೇಲ್‌ನ 'ಎಲ್ ಅಲ್' (El Al) ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿಯೇ ಅವರಿಗೆ ಬೆಂಜಮಿನ್ ನೆತನ್ಯಾಹು ಅವರ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತು.

ಅಂತಿಮವಾಗಿ 1991ರಲ್ಲಿ ಇವರಿಬ್ಬರೂ ವಿವಾಹವಾದರು. ಇದು ನೆತನ್ಯಾಹು ಅವರಿಗೆ ಮೂರನೇ ಮದುವೆಯಾಗಿದ್ದರೆ, ಸಾರಾ ಅವರಿಗೆ ಎರಡನೇ ಮದುವೆಯಾಗಿತ್ತು. ಇದಕ್ಕೂ ಮೊದಲು ಸಾರಾ ಅವರು 'ಕಿಬ್ಬುಟ್ಜ್' (ಇಸ್ರೇಲ್‌ನ ಒಂದು ಸಮುದಾಯ) ಸದಸ್ಯರೊಬ್ಬರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

ರಾಜಕೀಯ ಪ್ರಭಾವ

ಸಾರಾ ಅವರು ಕೇವಲ ಗೃಹಿಣಿಯಲ್ಲ; ಅವರು ಜೆರುಸಲೇಂ ಪುರಸಭೆಯಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞೆಯಾಗಿ (Child Psychologist) ಕೆಲಸ ಮಾಡುತ್ತಿದ್ದಾರೆ. ಆದರೆ, ಇಸ್ರೇಲ್ ಮಾಧ್ಯಮಗಳು ಅವರನ್ನು ಯಾವಾಗಲೂ "ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವವರು" ಎಂದು ಟೀಕಿಸುತ್ತವೆ. ಅವರ ಬಳಿ ಯಾವುದೇ ಅಧಿಕೃತ ಸರ್ಕಾರಿ ಹುದ್ದೆ ಇಲ್ಲದಿದ್ದರೂ, ಪತಿಯ ರಾಜಕೀಯ ನಿರ್ಧಾರಗಳು ಮತ್ತು ಪ್ರಮುಖ ಅಧಿಕಾರಿಗಳ ನೇಮಕಾತಿಯಲ್ಲಿ ಅವರು ಪ್ರಭಾವ ಬೀರುತ್ತಾರೆ ಎಂಬುದು ಮುಖ್ಯ ಆರೋಪ.

ವಿಶೇಷವೆಂದರೆ, ಬೆಂಜಮಿನ್ ನೆತನ್ಯಾಹು ತಾವು ನೀಡುವ ಪ್ರತಿಯೊಂದು ಅಧಿಕೃತ ಹೇಳಿಕೆಯಲ್ಲೂ "ನನ್ನ ಪತ್ನಿ ಮತ್ತು ನಾನು" ಎಂಬ ಪದವನ್ನು ಬಳಸುತ್ತಾರೆ. ಇದು ಇಸ್ರೇಲ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿರೋಧಿಗಳು ಸಾರಾ ಅವರನ್ನು "ರಾಜಕೀಯದಲ್ಲಿ ಮೂಗು ತೂರಿಸುವವರು" ಎಂದರೆ, ನೆತನ್ಯಾಹು ಮಾತ್ರ ತಮ್ಮ ಪತ್ನಿಯನ್ನು 'ಹೀರೋ' ಎಂದು ಹೊಗಳುತ್ತಾರೆ. ಅಲ್ಲದೆ, ಮಾಧ್ಯಮಗಳು ಬೇಕಂತಲೇ ಆಕೆಯನ್ನು ಗುರಿ ಮಾಡುತ್ತಿವೆ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

https://kannada.oneindia.com/news/international/pm-narendra-modi-visited-to-israel-and-pm-respected-with-speaker-of-the-knesset-medal-from-israel-011-445137.html?ref_source=OI-KN&ref_medium=Home-Page&ref_campaign=News-Cards

ವಿವಾದಗಳು ಮತ್ತು ಕ್ರಿಮಿನಲ್ ಪ್ರಕರಣಗಳು

ಸಾರಾ ನೆತನ್ಯಾಹು ಅವರ ಹೆಸರು ಕೇಳಿದ ಕೂಡಲೇ ವಿವಾದಗಳು ನೆನಪಾಗುತ್ತವೆ. ಇವರ ಮೇಲೆ ಭ್ರಷ್ಟಾಚಾರ, ವಂಚನೆ ಮತ್ತು ನಂಬಿಕೆ ದ್ರೋಹದಂತಹ ಗಂಭೀರ ಆರೋಪಗಳಿವೆ. ಸರ್ಕಾರಿ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡ ಆರೋಪದ ಮೇಲೆ ಇವರು ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಪತಿಯ ಮೇಲಿರುವ ಭ್ರಷ್ಟಾಚಾರದ ಪ್ರಕರಣದಲ್ಲಿ ಸಾಕ್ಷಿಗಳನ್ನು ಬೆದರಿಸಲು ಯತ್ನಿಸಿದ ಕಾರಣಕ್ಕಾಗಿ ಇವರ ವಿರುದ್ಧ ಹೊಸದಾಗಿ ಕ್ರಿಮಿನಲ್ ತನಿಖೆ ಕೂಡ ನಡೆಯುತ್ತಿದೆ.

ವಿಶೇಷವೆಂದರೆ, ಬೆಂಜಮಿನ್ ನೆತನ್ಯಾಹು ಅವರ ಪ್ರತಿಯೊಂದು ವಿದೇಶಿ ಪ್ರವಾಸದಲ್ಲೂ ಸಾರಾ ಅವರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತನ್ನು ತಂದುಕೊಟ್ಟಿದೆ. ಅವರ ಮೇಲೆ ಎಷ್ಟೇ ವಿವಾದಗಳಿದ್ದರೂ, ಇಸ್ರೇಲ್ ರಾಜಕೀಯದಲ್ಲಿ ಸಾರಾ ಅವರು ಅತ್ಯಂತ ಪ್ರಭಾವಶಾಲಿ ಮಹಿಳೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+