ಮುಗೀತು ಉಕ್ರೇನ್ ಕಥೆ: ಭಯಾನಕ ಅಸ್ತ್ರ ಹೊರತೆಗೆದ ರಷ್ಯಾ ಸೇನೆ!
ಉಕ್ರೇನ್ ಮತ್ತು ರಷ್ಯಾ ಯುದ್ಧ ಭೀಕರವಾಗುತ್ತಿರುವ ಸಂದರ್ಭದಲ್ಲಿ ರಷ್ಯಾ ರೊಚ್ಚಿಗೆದ್ದು, ಮಾಡಬಾರದ ಕೆಲಸ ಮಾಡ್ತಿದೆ ಅಂತಿದ್ದಾರೆ ವಿರೋಧಿಗಳು. ಇಂತಹ ಗಂಭೀರ ಆರೋಪದ ನಡುವೆ ಇದೀಗ ಶತ್ರುವಿನ ರಕ್ತ ಚೆಲ್ಲಾಡಲು ರಷ್ಯಾ ಸೇನೆ ತೊಡೆತಟ್ಟಿ ನಿಂತಿದೆ. ಹೀಗಾಗಿ ತನ್ನ ಗಡಿಯಲ್ಲಿ ಭಯಾನಕ ಆಯುಧಗಳನ್ನು ತಂದು ತಂದು ಸುರಿಯುತ್ತಿದೆ. ಈಗ ಕೂಡ ಅಷ್ಟೇ ಅಂತಹದ್ದೇ ಭಯಾನಕ ಅಸ್ತ್ರ ತಂದಿಟ್ಟಿದೆ ರಷ್ಯಾ.
ಹೌದು, ಅತ್ಯಾಧುನಿಕ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮುಂಚೂಣಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲು ರಷ್ಯಾ ಮುಂದಾಗಿದೆ. ಈ ಮೂಲಕ ತಮ್ಮ ತಂಟೆಗೆ ಬಂದರೆ ಈಗ ಉಕ್ರೇನ್ ಮಾತ್ರವಲ್ಲ, ದೂರದಲ್ಲಿ ಇರುವ ರಷ್ಯಾ ಶತ್ರುಗಳಿಗೂ ಉತ್ತರ ಗ್ಯಾರಂಟಿ ಎಂಬ ಮೆಸೇಜ್ ಕೊಡುತ್ತಿದೆ. ಈ ಕುರಿತು ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಾಲಿ ನಿಯೋಜನೆ ಮಾಡಿದ ಕ್ಷಿಪಣಿಗಳು ರಷ್ಯಾ ಕಡೆಗೆ ಕಣ್ಣು ಹಾಕುವ ಮೊದಲು ಶತ್ರುಗಳು ಮತ್ತೆ ಮತ್ತೆ ಯೋಚಿಸುವಂತೆ ಮಾಡಿವೆ ಎಂದಿದ್ದಾರೆ. ಪುಟಿನ್ ಕೊಟ್ಟ ಎಚ್ಚರಿಕೆ ಹೇಗಿದೆ ಎಂದರೆ, ಮುಂದಿನ ದಿನಗಳಲ್ಲಿ ಯಾರೇ ಅಡ್ಡ ಬಂದರು ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ನೀಡಿದಂತೆ ಕಾಣುತ್ತಿದೆ.

ಪರಮಾಣು ಸಾಮರ್ಥ್ಯದ ಕ್ಷಿಪಣಿಗಳು ಸಿದ್ಧ!
ಇಡೀ ಜಗತ್ತಿನಲ್ಲಿ ಪರಮಾಣು ಸಾಮರ್ಥ್ಯ ಇರುವ ಶಕ್ತಿಶಾಲಿ ದೇಶಗಳ ಪೈಕಿ ರಷ್ಯಾ ಕೂಡ ಒಂದಾಗಿದೆ. ಇದೀಗ ನಿಯೋಜಿಸಿರುವ ಸರ್ಮಾತ್' ಖಂಡಾಂತರ ಕ್ಷಿಪಣಿಗಳು, ಹಲವಾರು ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಕ್ಷಣ ಮಾತ್ರದಲ್ಲಿ ನೆಗೆಯುವ ಈ ಕ್ಷಿಪಣಿಗಳು ಶತ್ರುಗಳ ಕಣ್ಗಾವಲು ವ್ಯವಸ್ಥೆ ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿವೆ. ಅಂದರೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಕೂಡ ರಷ್ಯಾದ ಈ ಕ್ಷಿಪಣಿ ಎದುರು ಕೆಮ್ಮಲು ಆಗಲ್ಲ.
ಇನ್ನು ಈ ಕ್ಷಿಪಣಿಗಳನ್ನ ಯುದ್ಧದಲ್ಲಿ ನಿಯೋಜಿಸಲಾಗಿದೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೋಸ್‌ನ ಮುಖ್ಯಸ್ಥ ಯೂರಿ ಬೊರಿಸೊವ್ ಹೇಳಿದ್ದಾರೆ. ಇದು ಮುಂದೆ ರಷ್ಯಾ & ಉಕ್ರೇನ್ ಯುದ್ಧವನ್ನ ಇನ್ನಷ್ಟು ಭಯಾನಕ ಮಾಡುವ ಮುನ್ಸೂಚನೆ ನೀಡಿದೆ. ಹೀಗಾಗಿ ಭಯ ಕೂಡ ಶುರುವಾಗಿದ್ದು, ಭವಿಷ್ಯದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಇದೀಗ ಮತ್ತೆ ಶುರುವಾಗಿದೆ. ಅತ್ತ ಉಕ್ರೇನ್ ಸರ್ವನಾಶಕ್ಕೆ ರಷ್ಯಾ ತೊಡೆತಟ್ಟಿದರೆ, ಇತ್ತ ಉಕ್ರೇನ್ ಬೆನ್ನಿಗೆ ನ್ಯಾಟೋ ಹಾಗೂ ದೊಡ್ಡಣ್ಣ ಅಮೆರಿಕ ನಿಂತಿದೆ.
ಜನರಿಗೆ ತಿನ್ನಲು ಅನ್ನವೂ ಸಿಗುತ್ತಿಲ್ಲ
ಉಕ್ರೇನ್ ತನ್ನ ಮೇಲೆ ದಾಳಿ ಮಾಡುತ್ತಿರುವ ಕಾರಣಕ್ಕೆ ರಷ್ಯಾ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ. ಅದರಲ್ಲೂ ಉಕ್ರೇನ್ ಧಾನ್ಯ ಸಂಗ್ರಹ ಗೋದಾಮು ಮೇಲೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದೆ ಎಂಬ ಆರೋಪ ಇದೆ. ಹೀಗೆ, 1 ತಿಂಗಳಲ್ಲಿ ಸುಮಾರು 2,70,00 ಮೆಟ್ರಿಕ್ ಟನ್ ಧಾನ್ಯ ನಾಶವಾಗಿ ಹೋಗಿದೆ. ಆದರೆ ಇಬ್ಬರೂ ಹಠ ಬಿಟ್ಟು ಸಂಧಾನಕ್ಕೆ ಕೂರುತ್ತಿಲ್ಲ, ಹೀಗಾಗಿ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತಿಲ್ಲ. ಇದು ಸಾಲದು ಎಂಬಂತೆ ಕಪ್ಪು ಸಮುದ್ರದಲ್ಲೂ ಬಡಿದಾಟ ಶುರುವಾಗಿದೆ. ಹೀಗೆಲ್ಲಾ ಆದರೆ ಮುಂದೇನು? ಎಂಬುದು ಉಕ್ರೇನ್‌ನ ಜನರಿಗೂ ತಿಳಿಯುತ್ತಿಲ್ಲ. ಇಷ್ಟೆಲ್ಲದರ ನಡುವೆ ಗಡಿಯಲ್ಲಿ ಪರಮಾಣು ಕ್ಷಿಪಣಿ ನಿಯೋಜನೆ ಮಾಡಿದೆ ರಷ್ಯಾ ಸೇನೆ.

ಕ್ರಿಮಿಯಾ ಮತ್ತು ಕಪ್ಪು ಸಮುದ್ರ ಟಾರ್ಗೆಟ್
ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕು ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಕಪ್ಪು ಸಮುದ್ರದ ಬಳಿ ಉಕ್ರೇನ್ ನೌಕೆ ಅಥವಾ ಬೋಟ್ ಕಾಣಿಸಿದರೆ ಸಾಕು ರಷ್ಯಾ ಮುಲಾಜು ನೋಡದೆ ಉಡೀಸ್ ಮಾಡುತ್ತಿದೆ. ಹಾಗೇ ಪರಮಾಣು ಸಾಮರ್ಥ್ಯದ ಕ್ಷಿಪಣಿ ಮೂಲಕ ಶತ್ರುಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ ರಷ್ಯಾ.












Click it and Unblock the Notifications