ನಿವೃತ್ತಿಗೂ ಮುನ್ನ ಭಾರತದ ವಿರುದ್ದ ರಕ್ತಾಕ್ಷರ: ಪಾಕ್ ಸೇನಾ ಮುಖ್ಯಸ್ಥನ ಚಿಂತನೆ?

Written By:
Subscribe to Oneindia Kannada

ಲಾಹೋರ್, ಅ 2: ಸೇವಾ ನಿವೃತ್ತಿಯ ಅಂಚಿನಲ್ಲಿರುವ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್, ಭಾರತದ ವಿರುದ್ದ ರಕ್ತಸಿಕ್ತ ಪ್ರತಿದಾಳಿ ನಡೆಸಲು ಚಿಂತನೆ ನಡೆಸಿದ್ದಾರೆಂದು ವರದಿಯಾಗಿದೆ.

ಇದೇ ಬರುವ ನವೆಂಬರ್ ತಿಂಗಳಲ್ಲಿ ನಿವೃತ್ತಿಯಾಗಲಿರುವ ರಾಹೀಲ್, ಶಾಂತಿಯುತವಾಗಿ ಗೂಡು ಸೇರಿಕೊಳ್ಳುವ ಸಾಧ್ಯತೆ ಕಮ್ಮಿಯೆಂದು ಭಾರತದ ಭದ್ರತಾ ಸಂಸ್ಥೆಗಳ ವರದಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. (ಉಗ್ರರಿಗೆ '56 ಇಂಚು' ಎದೆ ಪ್ರದರ್ಶಿಸಿದ ಮೋದಿ)

ನಮ್ಮ ವಿರುದ್ದ ದಾಳಿ ನಡೆಸಿರುವ ಭಾರತಕ್ಕೆ ತಿರುಗೇಟು ನೀಡಿಯೇ ಸಿದ್ದ ಎಂದು ಶುಕ್ರವಾರ (ಸೆ 30) ಆರ್ಭಟಿಸಿದ್ದ ರಾಹೀಲ್, ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಸೇನೆ ಹಿಂದಿಗಿಂತಲೂ ಹೆಚ್ಚು ಸನ್ನದ್ದವಾಗಿದೆ ಎಂದು ಹೇಳಿದ್ದರು.

ತೀವ್ರ ಭಾರತ ವಿರೋಧಿ ಧೋರಣೆ ಹೊಂದಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥರಲ್ಲಿ ಇವರೂ ಒಬ್ಬರಾಗಿರುವ ರಾಹೀಲ್, ಭಾರತದ ವಿರುದ್ದ ರಕ್ತಸಿಕ್ತ ದಾಳಿ ನಡೆಸಿ ನಿವೃತ್ತಿ ಹೊಂದಲು ಬಯಸುತ್ತಿದ್ದಾರೆಂದು ವರದಿಯಾಗಿದೆ. (ಸರ್ಜಿಕಲ್ ಸ್ಟ್ರೈಕ್ ಅಂದ್ರೇನು ಭಾರತಕ್ಕೆ ತೋರಿಸುತ್ತೇವೆ)

ಸೀಮಿತ ದಾಳಿಯ (ಸರ್ಜಿಕಲ್ ಅಟ್ಯಾಕ್) ನಂತರ ಪಾಕಿಸ್ತಾನದಲ್ಲಿ ಹಿನ್ನಡೆ ಅನುಭವಿಸುತ್ತಿರುವ ರಾಹೀಲ್ ಷರೀಫ್, ಭಾರತದ ವಿರುದ್ದ ರಕ್ತದೋಕುಳಿ ನಡೆಸುವ ಮೂಲಕ ತನಗಾಗಿರುವ ಹಿನ್ನಡೆ ಸರಿಪಡಿಸಿಕೊಳ್ಳಲು ಉತ್ಸುಕನಾಗುವ ಸಾಧ್ಯತೆ ಇಲ್ಲದಿಲ್ಲ ಎಂದು ಗುಪ್ತಚರ ಮತ್ತು ಭಾರತದ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಮುಂದೆ ಓದಿ..

ಪಾಕ್ ಪ್ರಧಾನಿ ಷರೀಫ್ ಮಾತೂ ಧಿಕ್ಕರಿಸುವ ಸೇನಾಧಿಕಾರಿ

ಪಾಕ್ ಪ್ರಧಾನಿ ಷರೀಫ್ ಮಾತೂ ಧಿಕ್ಕರಿಸುವ ಸೇನಾಧಿಕಾರಿ

ಪಾಕಿಸ್ತಾನದ ಪ್ರಧಾನಿಯ ಮಾತನ್ನೇ ಬಹಳಷ್ಟು ಬಾರಿ ಧಿಕ್ಕರಿಸಿರುವ ಉದಾಹಣೆಯನ್ನು ಹೊಂದಿರುವ ರಾಹೀಲ್, ಭಾರತದ ವಿರುದ್ದ ದಾಳಿ ನಡೆಸಿ ತಾನೊಬ್ಬ ಸಮರ್ಥ ಸೇನಾ ಮುಖ್ಯಸ್ಥ ಎಂದು ತೋರಿಸಿಕೊಳ್ಳಲು ಯಾವುದೇ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ.

ರಾಹೀಲ್ ಸಹೋದರನ ಸಾವು

ರಾಹೀಲ್ ಸಹೋದರನ ಸಾವು

1965ರಲ್ಲಿ ಮತ್ತು 1971ರಲ್ಲಿ ನಡೆದ ಭಾರತದ ವಿರುದ್ದ ಯುದ್ದದಲ್ಲಿ ರಾಹೀಲ್ ಸಹೋದರ ಮತ್ತು ಹಿರಿಯ ಸಂಬಂಧಿಯೊಬ್ಬರು ಸಾವನ್ನಪ್ಪಿದ್ದರು. ಇದರ ದ್ವೇಷ ಸಾಧನೆಗೂ ರಾಹೀಲ್ ಮುಂದಾಗಬಹುದು ಎಂದು ಮಾಜಿ ಭಾರತದ ಪಾಕ್ ರಾಯಭಾರಿಯಾಗಿದ್ದ ಜಿ ಪಾರ್ಥಸಾರಥಿ ಅಭಿಪ್ರಾಯ ಪಟ್ಟಿದ್ದಾರೆ. (ಚಿತ್ರದಲ್ಲಿ ರಾಹೀಲ್ ಷರೀಫ್)

ದೇಶ ಬಿಟ್ಟು ಹೋಗಿದ್ದ ನವಾಜ್ ಷರೀಫ್

ದೇಶ ಬಿಟ್ಟು ಹೋಗಿದ್ದ ನವಾಜ್ ಷರೀಫ್

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ 1998ರಲ್ಲಿ ಪರ್ವೇಜ್ ಮುಷರಫ್ ಮತ್ತು 2013ರಲ್ಲಿ ಜನರಲ್ ರಾಹೀಲ್ ಷರೀಫ್ ಅವರನ್ನು ಸೇನಾ ದಂಡನಾಯಕನಾಗಿ ನೇಮಿಸಿದ್ದರು. ಸೇನಾ ಕ್ರಾಂತಿಯಲ್ಲಿ ಪರ್ವೇಜ್, ನವಾಜ್ ಷರೀಫ್ ಅವರನ್ನು ದೇಶ ಬಿಟ್ಟುಹೋಗುವಂತೆ ಮಾಡಿದ್ದು ಈಗ ಇತಿಹಾಸ. (ಚಿತ್ರದಲ್ಲಿ ಪರ್ವೇಜ್ ಮುಷರಫ್)

ದ್ವಿರಾಷ್ಟ್ರಗಳ ಸಂಬಂಧ

ದ್ವಿರಾಷ್ಟ್ರಗಳ ಸಂಬಂಧ

ನವೆಂಬರ್ ತಿಂಗಳಲ್ಲಿ ರಾಹೀಲ್ ನಿವೃತ್ತಿಯಾದ ನಂತರವೂ, ಪಾಕಿಸ್ತಾನ ಸೇನೆಯ ಭಾರತ ವಿರೋಧಿ ನಿಲುವಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಕಮ್ಮಿಯೆಂದು ಪಾರ್ಥಸಾರಥಿ ಹೇಳಿದ್ದಾರೆ.

ರಕ್ತಸಿಕ್ತ ದಾಳಿ

ರಕ್ತಸಿಕ್ತ ದಾಳಿ

ಭಾರತ ಗುರುವಾರ (ಸೆ 29) ನಡೆಸಿದ ದಾಳಿ ತನಗಾದ ವೈಯಕ್ತಿಕ ಸೋಲು ಎಂದು ಕೊಂಡಿರುವ ಜನರಲ್ ರಾಹೀಲ್ ಷರೀಫ್, ನಿವೃತ್ತಿಗೂ ಮುನ್ನ ರಕ್ತಸಿಕ್ತ ದಾಳಿ ನಡೆಸಿ ಮನೆ ಸೇರಿಕೊಳ್ಳಲು ಸಿದ್ದರಾಗುತ್ತಿದ್ದಾರೆಂದು ಟೈಮ್ಸ್ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian security establishment feels, retiring Pakistan army chief General Raheel Sharif may go for strong move against India, Times of India report.
Please Wait while comments are loading...