ರಷ್ಯಾ ವಿರುದ್ಧ ಕಿಡಿಕಾರಿದ ಪೋಲೆಂಡ್, ನೇರವಾಗಿ ಉಕ್ರೇನ್ ಪರವಾಗಿ ಯುದ್ಧಕ್ಕೆ ಎಂಟ್ರಿ?

ರಷ್ಯಾ & ಉಕ್ರೇನ್ ದೇಶಗಳು ತಾವು ಮಾತ್ರ ಬಡಿದಾಡಿಕೊಂಡು ಸಾಯುತ್ತಿಲ್ಲ, ಬದಲಾಗಿ ಈ ಇಬ್ಬರೂ ಸೇರಿ ಇದೀಗ ಇಡೀ ಜಗತ್ತಿಗೇ ಹೊಗೆ ಹಾಕಿಸುವ ಕಾರ್ಯಕ್ರಮ ಇಟ್ಟುಕೊಂಡಂತೆ ಕಾಣುತ್ತಿದೆ. ಯಾಕೆ ಅಂದ್ರೆ ಉಕ್ರೇನ್ ವಿರುದ್ಧ ರೊಚ್ಚಿಗೆದ್ದಿರುವ ರಷ್ಯಾ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಹೀಗೆ, ರಷ್ಯಾ ಮತ್ತು ಉಕ್ರೇನ್ ವಾರ್ ವಿದ್ವಂಸಕ ಸ್ವರೂಪ ಪಡೆದಿರುವ ಸಮಯದಲ್ಲೇ ರಷ್ಯಾ ಒಂದು ಮಹಾ ಎಡವಟ್ಟು ಮಾಡಿಬಿಟ್ಟಿದೆ. ಈ ಎಡವಟ್ಟು ಯುರೋಪ್ ದೇಶಗಳನ್ನು ಮಾತ್ರವಲ್ಲ ದೂರದ ದೊಡ್ಡಣ್ಣ ಅಮೆರಿಕ ಅಧ್ಯಕ್ಷರನ್ನೂ ಕೆಣಕಿದೆ!

ಹೌದು, ರಷ್ಯಾ ಸೇನೆ ಕೆಲವು ಗಂಟೆಗಳ ಹಿಂದಷ್ಟೇ ಉಕ್ರೇನ್ ವಿರುದ್ಧ ಭಾರಿ ಘೋರವಾಗಿ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿ ಕೇವಲ ಉಕ್ರೇನ್ ನೆಲಕ್ಕೆ ಸೀಮಿತವಾಗಿ ಇರದೆ, ಪಕ್ಕದ ಪೋಲೆಂಡ್ ದೇಶಕ್ಕೂ ಆವರಿಸಿತ್ತು. ಅದರಲ್ಲೂ ರಷ್ಯಾ ಸೇನೆಯ ಡ್ರೋನ್‌ಗಳು ನಮ್ಮ ನೆಲಕ್ಕೆ ಬಂದಿವೆ ಅಂತಾ ಯುರೋಪ್ ಒಕ್ಕೂಟದ ಬಲಶಾಲಿ ದೇಶಗಳ ಪೈಕಿ ಒಂದಾಗಿರುವ ಪೋಲೆಂಡ್ ಗಂಭೀರ ಆರೋಪ ಮಾಡಿತ್ತು. ಈ ಆರೋಪ ಕೇಳಿಬಂದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಹೋಗಿದ್ದು, ಯಾವ ಕ್ಷಣದಲ್ಲಿ ರಷ್ಯಾ ವಿರುದ್ಧ ಇಡೀ ಯುರೋಪ್ ಒಕ್ಕೂಟ ತಿರುಗಿ ಬೀಳುತ್ತೋ? ಅನ್ನೋ ಪ್ರಶ್ನೆ ಇದೀಗ ಕಾಡುತ್ತಿದೆ. ಇಂತಹ ಭಾರಿ ಸೂಕ್ಷ್ಮ ಸಮಯದಲ್ಲಿ ಪೋಲೆಂಡ್ ಪ್ರಧಾನಿ ಹೇಳಿದ್ದೇನು?

Polish PM Tusk Commits to Military Upgrade Following Russian Drone Incursion

ರಷ್ಯಾ ವಿರುದ್ಧ ಪೋಲೆಂಡ್ ಯುದ್ಧ?

ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ್ದ ರಷ್ಯಾ ಸೇನೆ ತನ್ನ ಅಕ್ಕಪಕ್ಕದ ಶತ್ರುಗಳ ಕಥೆ ಕೂಡ ಮುಗಿಸಿ ಹಾಕುವ ಶಪಥ ಮಾಡಿದಂತೆ ಕಾಣುತ್ತಿದೆ. ಇದರ ಭಾಗವಾಗಿ ಇದೀಗ ಯುರೋಪ್ ದೇಶದ ಶಕ್ತಿಶಾಲಿ, ಭಾರಿ ದೊಡ್ಡ ಸೇನೆ ಹೊಂದಿರುವ ಪೋಲೆಂಡ್ ಆಕಾಶದಲ್ಲೂ ತನ್ನ ಡ್ರೋನ್‌ಗಳನ್ನ ಹಾರಿಸಿದೆ ರಷ್ಯಾ ಮಿಲಿಟರಿ. ರಷ್ಯಾ ದೇಶದ ಈ ಕ್ರಮದ ವಿರುದ್ಧ ಇದೀಗ ಹೇಳಿಕೆ ನೀಡಿರುವ ಪೋಲೆಂಡ್ ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಅವರು, ತಮ್ಮ ದೇಶದ ಸೇನೆಯನ್ನು ಸಾಧ್ಯವಾದಷ್ಟು ಬೇಗ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರತಿಜ್ಞೆ ಮಾಡಿದ್ದಾರೆ. ಇದು ಈಗ ಮತ್ತಷ್ಟು ಸಂಚಲನ ಸೃಷ್ಟಿಮಾಡಿದೆ. ಇದರ ಜೊತೆಗೆ ಮಿಲಿಟರಿ ಹತ್ಯಾರಗಳನ್ನು ಇನ್ನಷ್ಟು ಆಧುನೀಕರಣ ಮಾಡುವ ಮುನ್ಸೂಚನೆ ಸಿಕ್ಕಿದೆ.

ಉಕ್ರೇನ್ ವಿರುದ್ಧ ಭೀಕರ ಯುದ್ಧ

ಇನ್ನು ರಷ್ಯಾ & ಉಕ್ರೇನ್ ಬಡಿದಾಟದಲ್ಲಿ ಉಕ್ರೇನ್ ಬಲಿಪಶು ಆಗುತ್ತಿದೆಯಾ? ಎಂಬ ಅನುಮಾನಗಳ ನಡುವೆ ಇದೀಗ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ ಪೋಲೆಂಡ್ ದೇಶ. ರಷ್ಯಾ ವಿರುದ್ಧ ಗೆಲ್ಲಲು ಆಗಲ್ಲ ಅಂತಾ ಗೊತ್ತಿದ್ದರೂ ಹೀಗೆ ಉಕ್ರೇನ್ ತನ್ನ ಪ್ರಯತ್ನ ಬಿಟ್ಟಿರಲಿಲ್ಲ. ಹೀಗಿದ್ದಾಗ, ಪೋಲೆಂಡ್ ಕೂಡ ಈ ವಿಚಾರದಲ್ಲಿ ರಷ್ಯಾ ವಿರುದ್ಧ ತನ್ನ ಆಕ್ರೋಶ ಹೊರ ಹಾಕಿದೆ. ಆದರೆ ಎಲ್ಲೂ ನೇರವಾಗಿ ಯುದ್ಧಕ್ಕೆ ಸಿದ್ಧ ಎಂಬ ಹೇಳಿಕೆಯನ್ನ ಪೋಲೆಂಡ್ ಪ್ರಧಾನಿ ನೀಡಿಲ್ಲ, ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+