Polar Bear: ಆಹಾರಕ್ಕಾಗಿ 687 ಕಿಲೋ ಮೀಟರ್ ಈಜಾಡಿದ ಹಿಮಕರಡಿ, ಬೆಚ್ಚಿಬಿದ್ದ ಜಗತ್ತು!
ವಾತಾವರಣ ಬದಲಾವಣೆ & ತಾಪಮಾನ ಏರಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆ ತಂದೊಡ್ಡಿದೆ. ಮನುಷ್ಯರ ದುರಾಸೆ ಪರಿಣಾಮ ಪ್ರಕೃತಿ ಮಾತೆ ಸಾವಿರಾರು ಸಂಕಷ್ಟಗಳನ್ನು ಎದುರಿಸುವಂತೆ ಆಗಿದೆ. ಭವಿಷ್ಯದ ಬಗ್ಗೆ ಭಯ ಮೂಡಿರುವ ಸಮಯದಲ್ಲೇ, ಅಲಾಸ್ಕಾದ ನೆಲದಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ. ಈ ಮೂಲಕ ಭೂಮಿ ವಿನಾಶದ ಕಡೆಗೆ ಜಾರಿದೆ ಎಂಬ ವಾದಕ್ಕೆ ಸಾಕ್ಷ್ಯ ಸಂಗ್ರಹವಾಗಿದೆ.
ತಾಪಮಾನ ಏರಿಕೆ ಪರಿಣಾಮ ಸಮುದ್ರಮಟ್ಟ ಕೂಡ ಹೆಚ್ಚಾಗುತ್ತಿದ್ದು, ಇದೇ ರೀತಿ ಮನುಷ್ಯ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿ ಸರ್ವನಾಶ ಆಗುವುದು ಗ್ಯಾರಂಟಿ. ವಿಜ್ಞಾನಿಗಳು ಕೂಡ ಈ ಬಗ್ಗೆ ಪದೇ ಪದೇ ಎಚ್ಚರಿಕೆಯ ಸಂದೇಶ ನೀಡುತ್ತಲೇ ಬಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ಇರಲಿದೆ ಎಂಬ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ. ಇಂತಹ ಸಮಯದಲ್ಲೇ, ಉತ್ತರ ಧ್ರುವ ಪ್ರದೇಶದಲ್ಲಿ ಹಿಮ ಕರಗಿ, ಕರಗಿ ನೀರಾಗುತ್ತಿದ್ದು ಸರ್ವನಾಶದ ಮುನ್ಸೂಚನೆ ಸಿಕ್ಕಿದೆ.

ಆಹಾರಕ್ಕಾಗಿ 687 ಕಿ.ಮೀ. ಅಲೆದಾಟ!
ಹೌದು, ಭೂಮಿ ಮೇಲಿನ ಜೀವ ವೈವಿಧ್ಯ ನಾಶವಾಗಿ ಹೋಗುತ್ತಿದೆ. ಈಗಾಗಲೇ ಬಹುತೇಕ ಜೀವಿಗಳು ಅಳಿಸಿ ಹೋಗಿದ್ದು, ಈ ಸಾಲಿಗೆ ಹಿಮಕರಡಿ ಕೂಡ ಸೇರ್ಪಡೆ ಆಗುತ್ತಿವೆ. ಈಗಿನ ವಾತಾವರಣ ನೋಡಿದರೆ, ಇನ್ನು ಕೆಲವೇ ವರ್ಷದಲ್ಲಿ ಹಿಮಕರಡಿಗಳು ಭೂಮಿಯ ಮೇಲೆ ಇದ್ದವು ಎಂಬುದಕ್ಕೆ ಪುರಾವೆ ಕೂಡ ಇರುವುದಿಲ್ಲ ಅಂತಾರೆ ವಿಜ್ಞಾನಿಗಳು. ಇಂತಹ ಭಾರಿ ಗಂಭೀರ ಆರೋಪಗಳ ನಡುವೆಯೇ ಆಹಾರ ಸಿಗದೆ ಹಿಮಕರಡಿ ಒಂದು ಸುಮಾರು 687 ಕಿಲೋ ಮೀಟರ್ ಈಜಾಡಿಕೊಂಡು ಬಂದಿದೆ.
ವಿನಾಶದ ಅಂಚಿಗೆ ಹಿಮಕರಡಿಗಳು
ಅಲಾಸ್ಕ ಭಾಗದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಮೆರಿಕದ ವಿಜ್ಞಾನಿಗಳು ಹಿಮಕರಡಿಗೆ ಅಳವಡಿಕೆ ಮಾಡಿದ್ದ ರೆಡಿಯೋ ಕಾಲರ್ ಮೂಲಕ ಈ ಸತ್ಯ ಬಹಿರಂಗವಾಗಿದೆ. ಹೀಗೆ ಹಿಮಕರಡಿಗಳು ಎಷ್ಟೆಲ್ಲಾ ಸಂಕಷ್ಟವನ್ನು ಅನುಭವಿಸುತ್ತಿವೆ? ವಾತಾವರಣ ಬದಲಾವಣೆ & ತಾಪಮಾನ ಏರಿಕೆ ಪರಿಣಾಮ ಹಿಮಕರಡಿಗಳು ವಿನಾಶದ ಅಂಚಿಗೆ ಹೇಗೆ ಸಾಗುತ್ತಿವೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಹಾಗೇ, ಇನ್ನೊಂದು ಕಡೆ ಮನುಷ್ಯರ ದುರಾಸೆಯ ಬಗ್ಗೆ ಕೂಡ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಒಟ್ನಲ್ಲಿ ಈ ಘಟನೆ ಜಾಗತಿಕ ಮಟ್ಟದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದ್ದು, ಭವಿಷ್ಯದಲ್ಲಿ ಭೂಮಿ ಮೇಲಿನ ಜೀವ ವೈವಿಧ್ಯ ರಕ್ಷಣೆಗೆ ಮತ್ತೊಮ್ಮೆ ಕೂಗು ಎದ್ದಿದೆ. ಅಲ್ಲದೆ, ಈಗಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಜೀವ ಸಂಕುಲದ ರಕ್ಷಣೆ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಹೀಗಾಗಿ ಮನುಷ್ಯರು ಇನ್ನಾದರೂ ಎಚ್ಚೆತ್ತುಕೊಂಡು ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕಿದೆ.












Click it and Unblock the Notifications