ಪ್ರಧಾನಿ ನರೇಂದ್ರ ಮೋದಿಗೆ ಕುವೈತ್‌ನ ಅತ್ಯುನ್ನತ ಮುಬಾರಕ್ ಅಲ್-ಕಬೀರ್ ಆರ್ಡರ್ ಗೌರವ
ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಮುಂದುವರಿದಿದೆ. 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳನ್ನು ಆಯಾ ದೇಶದ ಅತ್ಯುನ್ನತ ಗೌರವಗಳನ್ನು ನೀಡಿ ಗೌರವಿಸಿವೆ. ಇದೀಗ ಭಾರತ ಮತ್ತು ಕುವೈತ್ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್‌ನ ಅತ್ಯುನ್ನತ ಹಾಗೂ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಮುಬಾರಕ್ ಅಲ್ - ಕಬೀರ್ ಆರ್ಡರ್ ಎನ್ನುವ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದು, ಕುವೈತ್‌ನ ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಭಾನುವಾರ ಕುವೈತ್‌ನ ಬಯಾನ್ ಫ್ಯಾಲೆಸ್‌ನಲ್ಲಿ ಈ ಸಮಾರಂಭ ನಡೆದಿದ್ದು, ಕುವೈತ್‌ನ ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್‌ನ ಅತ್ಯುನ್ನತ ನಾಗರಿಕ ಗೌರವವಾಗಿರುವ ಮುಬಾರಕ್ ಅಲ್-ಕಬೀರ್ ಆರ್ಡರ್ ನೀಡಿದ್ದಾರೆ.

ಸಂತೋಷ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ: ಇನ್ನು ಕುವೈತ್‌ನ ಭೇಟಿ ಹಾಗೂ ಪ್ರಶಸ್ತಿ ಪ್ರದಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತೋಷ ಹಂಚಿಕೊಂಡಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕುವೈತ್‌ನ ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಭೇಟಿಯು ಅತ್ಯಂತ ಸೌಹಾರ್ದಯುತ ಹಾಗೂ ಅತ್ಯುತ್ತಮವಾಗಿತ್ತು ಎಂದಿದ್ದಾರೆ.
ಅಲ್ಲದೆ ಕುವೈತ್ ಭೇಟಿ ಮಾಡಿದ ಸಂದರ್ಭದಲ್ಲಿ ಔಷಧಿ, ಐಟಿ, ಫಿನ್‌ಟೆಕ್, ಮೂಲಸೌಕರ್ಯ ಮತ್ತು ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ಮಾಡಲಾಗಿದೆ. ಎರಡೂ ರಾಷ್ಟ್ರಗಳ ನಡುವೆ ನಿಟಕ ಸಂಬಂಧ ಮುಂದುವರಿದ್ದು, ಇದಕ್ಕೆ ಅನುಗುಣವಾಗಿ ಪಾಲುದಾರಿಕೆಯ ಕಾರ್ಯತಂತ್ರವನ್ನು ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸ್ನೇಹ - ಸಂಬಂಧ ಇನ್ನಷ್ಟು ವೃದ್ಧಿಸಲಿ ಎಂದು ಆಶಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು.
ಈ ಪ್ರಶಸ್ತಿಯ ಹಿನ್ನೆಲೆ ಏನು: ಕುವೈತ್ ಸರ್ಕಾರವು ಮುಬಾರಕ್ ಅಲ್ - ಕಬೀರ್ ಆರ್ಡರ್ ಎನ್ನುವ ಅತ್ಯುತ್ತಮ ಗೌರವವನ್ನು ಸಾಂಪ್ರದಾಯದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಹಾಗೂ ರಾಜಮನೆತನದ ಸದಸ್ಯರಿಗೆ ಸ್ನೇಹ ಹಾಗೂ ಪ್ರೀತಿಯ ಸಂಕೇತವಾಗಿ ಪ್ರದಾನ ಮಾಡಲಾಗುತ್ತದೆ. ಭಾರತದ ಕೆಲವೇ ಪ್ರಮುಖರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಒಬ್ಬರಾಗಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಂದರ್ಭದಲ್ಲಿ ಇನ್ನೊಂದು ದಾಖಲೆಯನ್ನೂ ಸಹ ಬರೆದಿದ್ದಾರೆ. ಕೊಲ್ಲಿ ದೇಶಕ್ಕೆ ಕಳೆದ 43 ವರ್ಷಗಳಲ್ಲಿ ಭಾರತದ ಪ್ರಧಾನಿ ಭೇಟಿ ನೀಡಿದ್ದು ಇದೇ ಮೊದಲಾಗಿದೆ. ಇದಕ್ಕೂ ಹಿಂದೆ ಅಂದರೆ 1981ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸರ್ಕಾರವು ಅದ್ಧೂರಿ ಸ್ವಾಗತ ಕೋರಿತ್ತು.












Click it and Unblock the Notifications