Pahalgam: ಪಾಪಿ ಪಾಕ್ ಕುತಂತ್ರ- ಭಾರತದ ವಿರುದ್ಧ ರಿವೇಂಜ್‌ಗೆ ಪಾಕಿಸ್ತಾನ ಸಿದ್ಧತೆ?
ಭಾರತಕ್ಕೆ ಬಂದು ಪಾಪಿ ಉಗ್ರರು 26 ಜನರ ಜೀವ ತೆಗೆದ ನಂತರ ಕೂಡ ಪಾಪಿ ಪಾಕಿಸ್ತಾನ ತನ್ನ ಕುತಂತ್ರ ನಿಲ್ಲಿಸುತ್ತಿಲ್ಲ. ಪಾಪಿ ಪಾಕಿಸ್ತಾನ ಮಾಡುತ್ತಿರುವ ಕುತಂತ್ರಗಳು ಅದೇ ದೇಶಕ್ಕೆ ತಿರುಗುಬಾಣ ಆಗುತ್ತಿವೆ. ಈಗಾಗಲೇ ತಿನ್ನಲು ಅನ್ನ ಇಲ್ಲದೆ ಒದ್ದಾಡುತ್ತಿರುವ ಪಾಕಿಸ್ತಾನ ಈಗ ಕೂಡ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತ ಖಡಕ್ ಕ್ರಮ ಕೈಗೊಂಡು ಪಾಪಿ ಪಾಕಿಸ್ತಾನಕ್ಕೆ ಆಘಾತ ನೀಡಿದ ನಂತರ ಇನ್ನಷ್ಟು ಕುತಂತ್ರ ನಡೆಸುತ್ತಿದೆ ಶತ್ರು ದೇಶ ಪಾಕ್.
ಪಾಕಿಸ್ತಾನ ಸೇನೆ ಭಾರತದ ಬಳಿ ಹಲವು ಬಾರಿ ಏಟು ತಿಂದು ಹೋದರೂ ಬುದ್ಧಿ ಕಲಿಯುತ್ತಿಲ್ಲ. 1947ರ ಸಮಯದಲ್ಲಿ ಮೊದಲ ಬಾರಿಗೆ ಪಾಪಿ ಪಾಕಿಸ್ತಾನ ಹೀನಾಯವಾಗಿ ಭಾರತದ ಎದುರು ಯುದ್ಧದಲ್ಲಿ ಸೋತು ಹೋಗಿತ್ತು. ಆ ನಂತರದಲ್ಲಿ 1965ರ ಸಮಯದಲ್ಲೂ ಮಣ್ಣು ಮುಕ್ಕಿತ್ತು ಇದೇ ಪಾಪಿ ಪಾಕಿಸ್ತಾನ. ಇನ್ನುಳಿದಂತೆ 1971 & 1999 ಯುದ್ಧದಲ್ಲೂ ಹೀನಾಯವಾಗಿ ಸೋತು ಹೋಗಿದೆ. ಹೀಗಿದ್ದರೂ ಮತ್ತೆ ಮತ್ತೆ ತನ್ನ ಕೊಳಕು ಬುದ್ಧಿ ತೋರಿಸುತ್ತಿದೆ ಈ ಪಾಪಿ ಪಾಕ್. ಇದೀಗ ಭಾರತದ ವಿರುದ್ಧ ಮತ್ತೊಂದು ಯುದ್ಧಕ್ಕಾಗಿ ಕ್ಷಿಪಣಿಗಳ ಟೆಸ್ಟಿಂಗ್ ಆರಂಭ ಮಾಡಿದೆ ಎಂಬ ಸುದ್ದಿ, ಮತ್ತೊಂದು ಯುದ್ಧದ ಬಿರುಗಾಳಿ ಎಬ್ಬಿಸಿದೆ.

ಪಾಕಿಸ್ತಾನ ಕಡೆಯಿಂದ ಮತ್ತೆ ಕುತಂತ್ರ?
ಭಾರತ ನದಿ ನೀರು ನಿಲ್ಲಿಸಲು ನಿರ್ಧಾರ ಕೈಗೊಂಡ ನಂತರ ಪಾಕಿಸ್ತಾನಕ್ಕೆ ಬುಡ ಅಲುಗಾಡಿ ಹೋಗಿದೆ. ಅಲ್ಲದೆ ಭವಿಷ್ಯದಲ್ಲಿ ಪಾಕಿಸ್ತಾನ ಆಹಾರ ಸಮಸ್ಯೆ ಎದುರಿಸುವ ಭಯವೂ ಈಗ ಕಾಡುತ್ತಿದೆ. ಹೀಗಿದ್ದಾಗ ಪಾಕಿಸ್ತಾನದ ಭದ್ರತೆ & ಸೇನೆ ವಿಭಾಗದ ಅಧಿಕಾರಿಗಳು ಸಭೆ ನಡೆಸಿದ್ದು, ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕರು ಸಭೆಯಲ್ಲಿ ಭಾಗಿ ಆಗಿದ್ದರು. ಈ ಹಿನ್ನೆಲೆ ಪಾಕಿಸ್ತಾನ ಏನೋ ಕುತಂತ್ರ ಮಾಡುತ್ತಿರುವ ವಾಸನೆ ಬರುತ್ತಿದ್ದು, ಭಾರತವೂ ಈಗ ಗಡಿಯಲ್ಲಿ ಭಾರಿ ಭದ್ರತೆ ಏರ್ಪಡಿಸಿದೆ.












Click it and Unblock the Notifications