ಕ್ರಾಸಿಂಗ್ ವೇಳೆ ಬಸ್‌ಗೆ ಡಿಕ್ಕಿ ಹೊಡೆದ ರೈಲು, 19 ಜನರು ಸಾವು

ಇಸ್ಲಾಮಬಾದ್, ಜುಲೈ 3: ಕ್ರಾಸಿಂಗ್ ವೇಳೆ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಶೇಖ್‌ಪುರದಲ್ಲಿ ಶುಕ್ರವಾರ ನಡೆದಿದೆ.

Recommended Video

      China reacts to Modi's surprise visit to galwan valley | Oneindia Kannada

      ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಪಂಜಾಬ್‌ ಜಿಲ್ಲೆಯ ಶೇಖ್‌ಪುರದಲ್ಲಿ ಲಾಹೋರ್‌ಗೆ ಚಲಿಸುತ್ತಿದ್ದ ಬಸ್ ಅಪಘಾತಕ್ಕೆ ಗುರಿಯಾಗಿದೆ.

      ಈ ಬಸ್‌ನಲ್ಲಿ ಸುಮಾರು 15 ಜನರು ಸಿಖ್ ಯಾತ್ರಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಶಾ ಹುಸೇನ್ ಎಕ್ಸ್‌ಪ್ರೆಸ್‌ ಶೇಖ್‌ಪುರದ ಕ್ರಾಸಿಂಗ್‌ನಲ್ಲಿ ಅಡ್ಡ ಬಂದ ಬಸ್‌ಗೆ ಡಿಕ್ಕಿ ಹೊಡೆದಿದೆ.

      Bus Hit By A Train In Sheikhupura 19 Passengers Killed

      ಎಲ್ಲ ಯಾತ್ರಿಕರು ಪೇಶಾವರದಿಂದ ಲಾಹೋರ್‌ಗೆ ತೆರಳುತ್ತಿದ್ದರು. ಸುಮಾರು 27 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. 19 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

      ಈ ಘಟನೆ ಕುರಿತು ಭಾರತದ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು ''ಪಾಕಿಸ್ತಾನದಲ್ಲಿ ಸಿಖ್ ಯಾತ್ರಿಕರ ದುರಂತ ಸಾವು ಬಹಳ ನೋವು ತಂದಿದೆ. ಇಂತಹ ದುಃಖದ ಸಮಯದಲ್ಲಿ ಕುಟುಂಬಕ್ಕೆ ನಮ್ಮ ಸಾಂತ್ವನ ಇದೆ. ಗಾಯಗೊಂಡ ಆ ಯಾತ್ರಾರ್ಥಿಗಳು ಬೇಗನೆ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+